ಖರ್ಗೆಅವರ ಕೆಟ್ಟ ಸ್ಥಿತಿಗೆ ಅವರ ಮಗನೇ ಕಾರಣ : ಮಾಲೀಕಯ್ಯ ಗುತ್ತೇದಾರ್

ಕಲಬುರಗಿ :

       ಖರ್ಗೆಯವರಿಗೆ ಇಂತಹ ಕೆಟ್ಟ ಸ್ಥಿತಿ ಬರಲು ಅವರ ಸುಪುತ್ರನೇ ಕಾರಣ ಎಂದು ಬಿಜೆಪಿ ನಾಯಕ ಮಾಲೀಕಯ್ಯ ಗುತ್ತೇದಾರ್ ವಾಗ್ದಾಳಿ ನಡೆಸಿದ್ದಾರೆ.

      ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುಶ್ಯಾಸನ, ಕಂಸ ಎಲ್ಲಾ ಪ್ರಿಯಾಂಕ್ ಖರ್ಗೆನೇ, ಅವನಿಂದಲೇ ಅವರ ಅಪ್ಪನಿಗೆ ಕೆಟ್ಟ ಸ್ಥಿತಿ ಬಂದಿದೆ. ಭಸ್ಮಾಸುರ ಯಾರು ಅನ್ನೋದು ಎಲ್ಲರಿಗೂ ಗೊತ್ತಿದೆ ಎಂದು ತಿಳಿಸಿದರು. ಬಂಗಾರಪ್ಪ ಸರ್ಕಾರ ಇದ್ದಾಗ ನಾನು ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಂತ್ರಿ ಮಾಡಿಸಿದ್ದೆ. ಬಂಗಾರಪ್ಪರಿಗೆ ಹೇಳಿ ಮಂತ್ರಿ ಮಾಡಿಸಿದ್ದೆ. ಮಗನ ಲೈನ್ ಕ್ಲಿಯರ್ ಮಾಡಲು ನಮ್ಮನ್ನೆಲ್ಲ ದೂರ ಮಾಡಿದ್ದಾರೆ ಎಂದರು.

     ರಾಜಕೀಯದಲ್ಲಿ ನಾನು ಖರ್ಗೆ ಕೈ ಹಿಡಿದಿದ್ದೆ. ಅವರು ನಮ್ಮನ್ನು ಹಿಡಿದಿಲ್ಲ. ಮಗನಿಗೆ ಅಧಿಕಾರ ಕೊಡಿಸಲು ನಮ್ಮನ್ನು ತುಳಿಯಲು ಯತ್ನಿಸುತ್ತಿದ್ದಾರೆ ಇದಕ್ಕೆ ಪ್ರತಿಯಾಗಿ ಈ ಬಾರಿ ಜನರಿಂದ ಅವರು ತಕ್ಕ ಪಾಠ ಕಲಿಯುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ