ಕೊರಟಗೆರೆ
ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಂತೂರ್ ಸೋಪ್ ಹಾಗೂ ವಾಸವಿ ಯುವಜನ ಸಂಘದ ವತಿಯಿಂದ ತಾಲ್ಲೂಕಿನ ಹೊಳವನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರಿಂದ ರಂಗೋಲಿ ಸ್ಪರ್ಧೆ ಆಯೋಜನೆಗೊಂಡು ವಿಜೇತರಾದ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪತ್ರ ಹಾಗೂ ಸಂತೂರ್ ಸೋಪ್‍ನ ವತಿಯಿಂದ ಗಿಫ್ಟ್ ಆಂಪರ್ ವಿತರಿಸಲಾಯಿತು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸಿ, ಸಮಾಜದ ಮುಖ್ಯವಾಹಿನಿಗೆ ತರುವ ದೃಷ್ಟಿಯಿಂದ ಹೊಳವನಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರು ಹಾಗೂ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಂದ ಸಂಕ್ರಾಂತಿ ಹಬ್ಬದ ಪ್ರಯುಕ್ತ ರಂಗೋಲಿ ಸ್ಪರ್ಧೆಯನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.
ಸಂತೂರ್ ಸೋಪ್‍ನ ಕರ್ನಾಟಕ ಏರಿಯಾ ಸೇಲ್ಸ್ ಮ್ಯಾನೇಜರ್ ಸೋಮಶೇಖರ್ ಮಾತನಾಡಿ ದೇಶಿಯ ಸಂಸ್ಕøತಿಯು ಮೊಬೈಲ್, ಟಿವಿ ಹಾಗೂ ಸಿನಿಮಾಗಳಿಂದ ಮರೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೊಸವರ್ಷದ ಪ್ರಥಮ ಹಬ್ಬ ಹಾಗೂ ರೈತರ ಸುಗ್ಗಿ ಹಬ್ಬವಾದಂತಹ ಸಂಕ್ರಾಂತಿ ಹಬ್ಬದ ಪ್ರಯುಕ್ತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಂದ ನಾಡ ಸಂಸ್ಕತಿ ಪ್ರತೀಕವಾದ ರಂಗೋಲಿ ಬಿಡಿಸುವಂತಹ ಸ್ಪರ್ಧೇಯನ್ನು ಏರ್ಪಡಿಸುವ ಮೂಲಕ ವಿದ್ಯಾರ್ಥಿನಿಯರಲ್ಲಿ ಪ್ರತಿಭೆ ಅನಾವರಣದ ಜೊತೆಗೆ ನಾಡ ಸಂಸ್ಕತಿ ಪರಿಪಾಲಿಸುವಂತಹ ನೀತಿ ಸಾರುವ ದೃಷ್ಟಿಯಿಂದ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಅಭಿಪ್ರಾಯ ಪಟ್ಟರು.
ದೇಶದಲ್ಲಿ ವಿದೇಶಿ ಉತ್ಪಾದನೆಯ ವಸ್ತುಗಳಿಗಿಂತಲೂ ಸ್ವದೇಶಿ ಉತ್ಪಾದನೆಗಳೇ ಹೆಚ್ಚು ಗುಣಮಟ್ಟ ಕಾಯ್ದುಕೊಂಡಿದ್ದರೂ ಜನ ಸ್ವದೇಶಿ ಉತ್ಪಾದನೆಗಿಂತ ವಿದೇಶಿ ಉತ್ಪಾದನೆಗೆ ಮಾರು ಹೋಗುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ವಿದೇಶಿ ಉತ್ಪಾದನೆ ಕೊಳ್ಳುವುದರಿಂದ ಆ ದೇಶಗಳ ವರಮಾನ ಹೆಚ್ಚಾಗಲಿದೆ. ಈ ದೃಷ್ಟಿಕೋನದಿಂದಾದರೂ ಸ್ವದೇಶಿ ಉತ್ಪಾದನೆಗಳನ್ನು ಕೊಂಡುಕೊಳ್ಳುವುದರ ಮೂಲಕ ಸ್ವದೇಶದಲ್ಲೇ ಹೆಚ್ಚು ವ್ಯವಹರಿಸಿ ದೇಶದ ಆದಾಯವನ್ನು ಹೆಚ್ಚಿಸುವಂತಾಗಬೇಕು. ಈ ನಿಟ್ಟಿನಲ್ಲಿ ದೇಶೀಯ ಉತ್ಪಾದನೆಯೊಂದರಲ್ಲಿ ಒಂದಾದ ಸಂತೂರ್ ಸೋಪನ್ನು ಕೊಂಡುಕೊಳ್ಳುವುದರ ಮೂಲಕ ಸ್ವದೇಶಿ ವಸ್ತುಗಳ ಕೊಂಡುಕೊಳ್ಳುವಿಕೆಗೆ ಕೈಜೋಡಿಸಬೇಕು ಎಂದರು.
ಕೊರಟಗೆರೆ ವಾಸವಿ ಯುವಜನ ಸಂಘದ ಅಧ್ಯಕ್ಷ ಭದ್ರಿನಾಥ್ ಮಾತನಾಡಿ, ಕೊರಟಗೆರೆ ವಾಸವಿ ಸಂಘ ಅನೇಕ ರೀತಿಯ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ತರುವ ಸಲುವಾಗಿ ಹೊಳವನಹಳ್ಳಿ ಪ್ರೌಢಶಾಲೆಯಲ್ಲಿ ಪ್ರಥಮವಾಗಿ ಸಂತೂರ್ ಸೋಪ್ ವತಿಯಿಂದ ರಂಗೋಲಿ ಸ್ಪಧೆರ್ ಏರ್ಪಡಿಸಿದ್ದು, ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಬೆಳಕಿಗೆ ತರಲಾಗುವುದು. ಈಗಾಗಲೇ ತಾಲ್ಲೂಕಿನ ಮಲ್ಲೇಕಾವು ಸರ್ಕಾರಿ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ತಟ್ಟೆ ಹಾಗೂ ಲೋಟ ನೀಡಿದ್ದೇವೆ ಮತ್ತು ಮುಂದಿನ ದಿನಗಳಲ್ಲಿ ನಮ್ಮ ಸಂಘದ ವತಿಯಿಂದ ನಾನು ಈ ಶಾಲೆಯ ವಿದ್ಯಾರ್ಥಿಗಳಿಗೆ ತಟ್ಟೆ ಮತ್ತು ಲೋಟ ವಿತರಣೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಸುರೇಂದ್ರನಾಥ್ ಮಾತನಾಡಿ, ಕೊರಟಗೆರೆ ವಾಸವಿ ಯುವಜನ ಸಂಘ ಮತ್ತು ಸಂತೂರ್ ಸೋಪ್ ವತಿಯಿಂದ ರಂಗೋಲಿ ಬಿಡಿಸುವ ಸ್ಪಧೆರ್ಯನ್ನು ಹಮ್ಮಿಕೊಂಡಿರುವುದು ಸಂತೋಷದ ವಿಚಾರವಾಗಿದೆ. ಹೊಳವನಹಳ್ಳಿ ಸರ್ಕಾರಿ ಪ್ರೌಢಶಾಲೆ ಕರ್ನಾಟಕ ಪಬ್ಲಿಕ್ ಶಾಲೆ ಆಯ್ಕೆಯಾಗಿದೆ. ಮುಂದಿನ ವರ್ಷದಿಂದ ಪಬ್ಲಿಕ್ ಶಾಲೆಯಾಗಿ ಕಾರ್ಯಾರಂಭ ಮಾಡಲಿದೆ. ಈ ಶಾಲೆಯ ಮುಖ್ಯ ಶಿಕ್ಷಕ ಕಾಮಯ್ಯ ಹಾಗೂ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಧನ್ಯಕುಮಾರ್ ಇವರಿಬ್ಬರೂ ಸಹ ಹೊಳವನಹಳ್ಳಿ ಶಾಲೆಯ ಅಭಿವೃದ್ದಿಗೆ ಕಷ್ಟಪಟ್ಟು ಶ್ರಮಿಸಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಂಗೋಲಿ ಬಿಡಿಸುವ ಸ್ಪಧೆರ್ಯಲ್ಲಿ ಪ್ರಥಮ ಸ್ಥಾನ ಐಶ್ವರ್ಯ ಹೆಚ್.ವಿ, ದ್ವಿತೀಯ ಹೆಚ್.ಆರ್ ಮೇಘ ತೃತೀಯ ಗಾಯತ್ರಿ ಹಾಗೂ ಸ್ಪಧೆರ್ಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನವನ್ನು ಸಂತೂರ್ ಸೋಪ್ ವತಿಯಿಂದ ಬಹುಮಾನ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಾಸವಿ ಯುವಜನ ಸಂಘದ ಹೋಬಳಿ ಅಧ್ಯಕ್ಷ ಹರ್ಷ ಮತ್ತು ಸಂಘದ ಸದಸ್ಯರಾದ ಗೋವಿಂದರಾಜು, ರಾಜೇಶ್, ಸಂತೂರ್ ಸೋಪ್ ವಿತರಕ ಲಕ್ಷ್ಮೀಪ್ರಸಾದ್, ಲೋಕೇಶ್, ವಿಶ್ವ ಹಾಗೂ ಮುಖ್ಯ ಶಿಕ್ಷಕರಾದ ಎಲ್.ಕಾಮಯ್ಯ, ಶಿಕ್ಷಕರಾದ ವೈ.ಎಲ್. ಲೋಕೇಶ್ ಕುಮಾರ್, ಕೆ.ಎನ್.ಸುರೇಶ್, ತಾಯಿಮುದ್ದಮ್ಮ ಮತ್ತು ಬಾಲಕಿಯರ ಪ್ರೌಢಶಾಲೆ ಮುಖ್ಯ ಶಿಕ್ಷಕರಾದ ಧನ್ಯಕುಮಾರ್, ಮೃತ್ಯುಂಜಯ, ನರಸಿಂಹರಾಜು, ಶ್ರೀನಿವಾಸ್, ವಿದ್ಯಾ, ಮಂಜುಳ, ಪದ್ಮ, ಮಹೇಶ್ ಸೇರಿದಂತೆ ಇತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
