ಹೊಸ ಚರಂಡಿ ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆ :ಲಲಿತಮ್ಮ ಚಂದ್ರಶೇಖರ್

ಹರಿಹರ:

         ನಗರದ ಮಧ್ಯ ಭಾಗದಲ್ಲಿ ಹಾದು ಹೋಗಿರುವ ಬೀರೂರು-ಸಮ್ಮಸಗಿ (ಹಳೆ ಪಿ.ಬಿ.ರಸ್ತೆ) ರಸ್ತೆಯ ಅಗಲೀಕರಣದ ಹಿನ್ನೆಲೆಯಲ್ಲಿ ಹೊಸದಾಗಿ ಚರಂಡಿಯನ್ನು ನಿರ್ಮಾಣ ಮಾಡುತ್ತಿದ್ದು, ಅದರಿಂದ ಇಲ್ಲಿನ ನಿವಾಸಿಗಳಿಗೆ ತೊಂದರೆಯಾಗುತ್ತದೆ ಎಂದು ಲಲಿತಮ್ಮ ಡಾ ಚಂದ್ರಶೇಖರ್ ಅವರು ಹೇಳಿದರು.

         ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ತಮ್ಮ ಪುತ್ರ ಡಾ ರಾಮಚಂದ್ರ ಅವರೊಂದಿಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಸ್ತೆಯ ಅಗಲೀಕರಣದ ಸಂದರ್ಭದಲ್ಲಿ ನಮ್ಮ ಮನೆಯ ಮುಂಭಾಗದ ಸುಮಾರು ಇಪ್ಪತ್ತು ಅಡಿಗಳಷ್ಟು ಜಾಗವನ್ನು ಸ್ವಾಧೀನ ಪಡಿಸಿಕೊಂಡಿದ್ದು, ನಮ್ಮ ಮನೆಯನ್ನು ಸಹ ಧ್ವಂಸಗೊಳಿಸಿದ್ದಾರೆಎಂದು ಸಂಬಂದ ಪಟ್ಟ ಇಲಾಖೆಯ ವಿರುದ್ದ ಆರೋಪಿಸಿದ್ದರು.
ಈ ಅಗಲೀಕರಣದಿಂದ ಸಾರ್ವಜನಿಕರ ಮನೆಗಳಿಗೆ ಹಾಗೂ ನಮ್ಮ ಮನೆಗೆ ಹಳ್ಳಿಗಳಿಂದ, ನಗರಗಳಿಂದ ಬರುವ ರೋಗಿಗಳು ತೊಂದರೆ ಅನುಭವಿಸುತ್ತಿದ್ದು ನಮ್ಮ ಮನೆಯ ಮುಂದೆ ಆಗೆದಿರುವ ತಗ್ಗು ಗುಂಡಿಗಳನ್ನು ಇದುವರೆಗೂ ರಿಪೇರಿ ಮಾಡದೆ ಇರುವುದರಿಂದ ತುಂಬ ತೊಂದರೆಪಡುತ್ತಿದ್ದೆವೆ ಎಂದರು.

         ನಮ್ಮ ಮನೆಯ ಮುಂಭಾಗದ ರಸ್ತೆಯಲ್ಲಿ ಒಂದು ಮುಖ್ಯ ನೀರಿನ ಕೊಳವೆಯು ದಿನದ ಇಪ್ಪತ್ತನಾಲ್ಕು ಗಂಟೆ ನೀರು ಪೆÇೀಲಾಗಿ ಹರಿಯುತ್ತಿದ್ದರೂ ಸಹ ಅದನ್ನು ರಿಪೇರಿ ಮಾಡಿಸದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ.ಹೋಸ ಚರಂಡಿಗಳ ಕಾಮಗಾರಿಗಳನ್ನು ಕಾನೂನು ನಿಯಮವಳಿಗಳ ಪ್ರಕಾರ ಮಾಡಿ ಎಂದು ಹೇಳಿದರು.

        ಈಗ ಮತ್ತೆ ನೂತನವಾಗಿ ಚರಂಡಿಯೊಂದನ್ನು ಮಾಡಲಾಗುತ್ತಿದ್ದು, ಅದು ಸಹ ನಮ್ಮ ಮನೆಯ ಹೊಸ್ತಿಲಿನ ಪಕ್ಕದಲ್ಲಿಯೇ ಬರುವುದರಿಂದ ನಮಗೆ ಓಡಾಡಲು ಹಾಗೂ ವಾಸಿಸಲು ನಡೆಸಲು ತುಂಬಾ ತೊಂದರೆಯಾಗುತ್ತಿದೆ.ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಈ ಭಾಗದ ನಿವಾಸಿಗಳ ಅನುಕೂಲಕ್ಕಾಗಿ ನೂತನ ಚರಂಡಿಯ ಬದಲಾಗಿ ಹಳೆ ಚರಂಡಿಯನ್ನೇ ಮುಂದುವರಿಸಿಕೊಂಡು ಹೋಗಬೇಕೆಂದು ನಾವು ಮನವಿ ಮಾಡಿಕೊಳ್ಳುತ್ತೇವೆ.

        ನಮ್ಮ ಪತಿ ಯವರಾದ ದಿವಂಗತ ಡಾ ಚಂದ್ರಶೇಖರ್ ಅವರು ಹರಿಹರ ತಾಲ್ಲೂಕಿನ ಬಡವರಿಗಾಗಿ ಸುಮಾರು 54 ವರ್ಷಗಳ ವೈದ್ಯಕೀಯ ಸೇವೆ ಮಾಡಿ ಸೇವೆ ಸಲ್ಲಿಸಿರುತ್ತಾರೆ.ಅದೇ ರೀತಿ ನನ್ನ ಮಗನಾದ ಡಾ ರಾಮಚಂದ್ರನು ಸಹ ಕಳೆದ 34 ವರ್ಷಗಳಿಂದ ಬಡವರಿಗಾಗಿ ವೈದ್ಯಕೀಯ ಸೇವೆಯನ್ನು ಮಾಡಿಕೊಂಡು ಬಂದಿದ್ದು ಸಾರ್ವಜನಿಕರ ಸೇವೆಗೆ ತೊಂದರೆಯಾಗದಂತೆ ಸರಿಪಡಿಸಿ ಎಂದರು.
ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ನಮ್ಮ ಈ ಮನವಿಯನ್ನು ಪುರಸ್ಕರಿಸಿ ಹೊಸ ಚರಂಡಿಯನ್ನು ನಿರ್ಮಾಣ ಮಾಡದೆ ಹಳೆ ಚರಂಡಿಯಲ್ಲಿಯೇ ಸ್ವಚ್ಛಗೊಳಿಸಿ,ಮುಂದುವರಿಸಿಕೊಂಡು ಹೋದರೆ ಇಲ್ಲಿನ ನಿವಾಸಿಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಅವರ ಪುತ್ರರಾದ ಡಾ ರಾಮಚಂದ್ರ ಅವರು ಸಹ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link