ಸಕಾಲಕ್ಕೆ ಪಾಸ್ ಸಿಗದೆ ಪ್ರತಿಭಟನೆ

ಬೆಂಗಳೂರು

      ಸುಭಾಷ್‍ನಗರದ ಕೇಂಪೇಗೌಡ ಬಸ್ ನಿಲ್ದಾಣದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ( ಬಿಎಂಟಿಸಿ)ರಿಯಾಯಿತಿ ದರದ ಪಾಸ್ ಸೇರಿದ್ದ ಸಾವಿರಾರು ವಿದ್ಯಾರ್ಥಿಗಳು ಸಕಾಲಕ್ಕೆ ಪಾಸ್ ಸಿಗದೆ ಪ್ರತಿಭಟನೆ ನಡೆಸಿದರು.

      ಪಾಸ್ ಪಡೆಯಲು ನಾಳೆ(ಸೆ.30) ಕೊನೆಯ ದಿನವಾಗಿದ್ದು, 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಸ್‍ಗಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಜಮಾವಣೆ ಮಾಡಿ ಪಾಸ್‍ಗಾಗಿ ಪರದಾಡಿದರೂ ಅಧಿಕಾರಿಗಳಿಂದ ಯಾವುದೇ ಮಾಹಿತಿ ಸಿಗದೆ ಕಂಗಾಲಾಗಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗಳಿದರು.

      ವಿದ್ಯಾರ್ಥಿಗಳು ಪ್ರತಿಭಟನೆ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.ಹಿರಿಯ ಅಧಿಕಾರಿಗಳು ಧಾವಿಸಿ ಎಲ್ಲರಿಗೂ ಪಾಸ್ ನೀಡುವುದಲ್ಲದೇ ಪಾಸ್ ನೀಡುವುದನ್ನು ಇನ್ನು ಕೆಲವು ದಿನಗಳ ಕಾಲ ವಿಸ್ತರಿಸುವ ಭರವಸೆ ನೀಡಿದ್ದಾರೆ

        ನಗರದಲ್ಲಿ 58 ಡಿಪೋಗಳಿದ್ದರೂ, ಆಯಾ ಡಿಪೋಗಳಲ್ಲಿ ಬಸ್ ಪಾಸ್ ವಿತರಣೆಗೆ ಕ್ರಮ ಕೈಗೊಳ್ಳದೆ, ಇಡೀ ಬೆಂಗಳೂರಿನ ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳ ಬಸ್ ಪಾಸ್ ಅನ್ನು ಮೆಜೆಸ್ಟಿಕ್ ಬಸ್ ನಿಲ್ದಾಣ ಒಂದರಲ್ಲೇ ನೀಡುತ್ತಿರುವುದರಿಂದ ಮುಂಜಾನೆ 5 ಗಂಟೆಯಿಂದಲೇ ವಿದ್ಯಾರ್ಥಿಗಳು ಸರತಿಸಾಲಿನಲ್ಲಿ ನಿಂತು ಪಾಸ್‍ಗಾಗಿ ಪರದಾಡುತ್ತಿದ್ದಾರೆ.

        ಈ ಬಾರಿ ಮೈ ಬಿಎಂಟಿಸಿ ಆಪ್ ಮೂಲಕ ಪಾಸ್‍ಗಾಗಿ ನೊಂದಣಿ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಮನೆಗೇ ಪಾಸ್ ಕಳುಹಿಸುವುದಾಗಿ ಹೇಳಿದ ಬಿಎಂಟಿಸಿ ಅಧಿಕಾರಿಗಳು, ಸೆ. 30 ಕಡೆದಿನ ಹತ್ತಿರ ಬಂದರೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಕಿಲೋ ಮೀಟರ್‍ಗಟ್ಟಲೆ ಸಾಲಿನಲ್ಲಿ ನಿಂತು ಆಕ್ರೋಶವ್ಯಕ್ತಪಡಿಸಿದರು.

       ವಿದ್ಯಾರ್ಥಿಗಳ ಜೊತೆಗೆ ಪೋಷಕರೂ ಆಗಮಿಸಿದ್ದು, ಬಿಎಂಟಿಸಿ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ನಿರ್ಲಕ್ಷ್ಯತನದ ವಿರುದ್ಧ ಹರಿಹಾಯ್ದರು. ಸಾವಿರಾರು ವಿದ್ಯಾರ್ಥಿಗಳಿಗೆ 8 ಕೌಂಟರ್‍ಗಳಲ್ಲಿ ಪಾಸ್ ವಿತರಣೆ ಮಾಡುತ್ತಿರುವುದೇ ಗೊಂದಲ, ಸಮಸ್ಯೆಗೆ ಕಾರಣವಾಗಿತ್ತು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap