ಮಧುಗಿರಿ: ಪರಿಹಾರಕ್ಕಾಗಿ ಕಾದು ಕುಳಿತ ಸಮಸ್ಯೆಗಳು

ಮಧುಗಿರಿ

    ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮನ ಜಾತ್ರ್ರಾ ಮಹೋತ್ಸವಕ್ಕೆ ಕ್ಷಣ ಗಣನೆ ಆರಂಭವಾಗಿದ್ದು, ದೇವಾಲಯದ ಆವರಣ ಹಾಗೂ ಸುತ್ತ ಮುತ್ತಲ ಕೆಲ ಪ್ರದೇಶಗಳಲ್ಲಿ ಹಲವಾರು ಸಮಸ್ಯೆಗಳು ಎದುರಾಗಿವೆ.

     ದೇವಾಲಯವು ಈ ಹಿಂದೆ ಲಕ್ಷಾಂತರ ರೂಪಾಯಿಗಳ ಅನುದಾನದಲ್ಲಿ ಅಭಿವೃದ್ಧಿ ಕಂಡಿದ್ದರೂ, ಇಲ್ಲಿನ ಸೌಕರ್ಯ ಅಷ್ಟಕ್ಕೆ ಅಷ್ಟೆ ಆಗಿದೆ. ಆವರಣದಲ್ಲಿ ಎಲ್ಲೆಂದರಲ್ಲಿ ಕಸ, ಕಡ್ಡಿ, ಕಲ್ಲು, ಮಣ್ಣು ರಾಶಿಯಿಂದ ಕೂಡಿದೆ. ದೇವಾಲಯದ ಮುಖ್ಯದ್ವಾರ, ಗೋಪುರ, ವಿಗ್ರಹಗಳು ಈಗಾಗಲೆ ಬಣ್ಣ ಕಳೆದುಕೊಂಡು ಸೊರುಗುತ್ತಿವೆ. ದೇವಾಲಯದ ಸುತ್ತಲೂ ಹಾಕಿರುವ ಕಲ್ಲು ಚಪ್ಪಡಿಗಳ ನಡುವೆ ಈ ಹಿಂದೆ ಹಾಕಿದ್ದ ಸಿಮೆಂಟ್ ಮಾಯವಾಗಿದ್ದು, ಸಣ್ಣ ಸಣ್ಣ ಗುಂಡಿಗಳು ಉಂಟಾಗಿದ್ದು, ನಡೆದಾಡಲು ಕಷ್ಟಕರವಾಗಿದೆ.

    ದೇವಾಲಯದ ಸುತ್ತಲೂ ತಂತಿ ಬೇಲಿ ನಿರ್ಮಾಣವಾಗಿದ್ದು, ಗೇಟ್‍ನ ಬಾಗಿಲು ಮತ್ತು ಅಲ್ಲಲ್ಲಿ ತಂತಿ ಬೇಲಿಯು ಮುರಿದು ಹೋಗಿವೆ. ವಿದ್ಯುತ್ ಸೌಕರ್ಯ ಕಲ್ಪಿಸುವ ಕಂಬಗಳು ಹಾನಿಯಾಗಿದ್ದು, ಇವುಗಳ ರಿಪೇರಿಗೆ ಅಧಿಕಾರಿಗಳು ಮುಂದಾಗಿಲ್ಲ. ಸುತ್ತಲೂ ಇರುವ ಮೋರಿಗಳು ಹಲವಾರು ವರ್ಷಗಳಿಂದ ಕಸ ಕಡ್ಡಿಗಳಿಂದ ತುಂಬಿ ತುಳುಕುತ್ತಿದ್ದರೂ, ಶುಚಿಗೊಳಿಸುವ ಗೋಜಿಗೆ ಹೋಗಿಲ್ಲ.

    ತರೆಗೆಲೆಗಳಂತೆ ಬದಲಾಗುವ ಅಧಿಕಾರಿಗಳಿಂದ ನಿರೀಕ್ಷಿತ ಮಟ್ಟದಲ್ಲಿ ಜಾತ್ರಾ ಮಹೋತ್ಸವ ಆಗುತ್ತಿಲ್ಲ. ಹಿಂದಿನ ಸಂಪ್ರಾದಾಯಗಳನ್ನು ಮತ್ತೆ ಮೊದಲಿನಿಂದ ವಿವರಿಸ ಬೇಕಾದ ಅನಿವಾರ್ಯತೆ ಹಿರಿಯರದ್ದು. ಕಾಟಾಚಾರದ ಸಭೆಗಳನ್ನು ಅಧಿಕಾರಿಗಳು ನಡೆಸುತ್ತಿದ್ದು, ಲಕ್ಷಾಂತರ ರೂಪಾಯಿಗಳನ್ನು ಸುಖಾ ಸುಮ್ಮನೆ ಜಾತ್ರೆಯ ನೆವದಲ್ಲಿ ಖರ್ಚು ಮಾಡಿ, ಲೆಕ್ಕ ನೀಡುವಲ್ಲಿ ಅಧಿಕಾರಿಗಳು ಸದಾ ಮುಂದಿದ್ದಾರೆ. ಆದರೆ ಇವರ ನೇತೃತ್ವದಲ್ಲಿ ನಡೆಯ ಬೇಕಾಗಿರುವ ದೇವಾಲಯದ ಅಭಿವೃದ್ಧಿ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ. ಜಾತ್ರೆಯು ಕಳೆ ಕುಂದಲು ಇದೂ ಒಂದು ಕಾರಣವಾಗಿದೆ.

   ಸುಮಾರು ದಿನಗಳ ಕಾಲ ನಡೆಯ ಬೇಕಾದ ಜಾತ್ರೆಯು ಈಗ ಕೇಲವೆ ಕೆಲ ದಿನಗಳಿಗೆ ಮಾತ್ರ ಸೀಮಿತವಾಗಿದೆ. ದನಗಳ ಜಾತ್ರೆಗೆಂದು ಆಗಿನ ಶಾಸಕ ಕೆ.ಎನ್.ರಾಜಣ್ಣ ಯಾವುದೇ ಶುಲ್ಕವÀನ್ನು ಪಡೆಯದಂತೆ ಅಧಿಕಾರಿಗಳಿಗೆ ಸೂಚಿಸಿ, ಜಾತ್ರೆಯಲ್ಲಿ ರೈತರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿಸಿದ್ದರು. ಬರಗಾಲದ ನಡುವೆಯೂ ನಡೆಯ ಬೇಕಾಗಿರುವ ಜಾತ್ರೆಯಲ್ಲಿ ಜಾನುವಾರುಗಳನ್ನು ಮಾರಾಟ ಮಾಡಲು, ಕೊಳ್ಳಲು ಬರುವವರಿಗೆ ವಿಧಿಸುವ ಶುಲ್ಕಗಳು ಆದಷ್ಟೂ ಮಿತಿಗೊಳಿಸಬೇಕು ಅಥವಾ ಸಂಪೂರ್ಣ ಕೈ ಬಿಡಬೇಕು ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಅಳಲಾಗಿದೆ.

     ನೆರೆ ರಾಜ್ಯಗಳಿಂದ ಭಕ್ತಾದಿಗಳು ಜಾತ್ರೆಗೆ ಆಗಮಿಸುತ್ತಿದ್ದು, ಅಗತ್ಯ ಸೌಕರ್ಯಗಳನ್ನು ಅಧಿಕಾರಿಗಳು ಕಲ್ಪಿಸಬೇಕಾಗಿದೆ. ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮ ಕೈಗೊಳ್ಳಬೇಕಾಗಿದೆ. ಜಾತ್ರೆಗೂ ಮುನ್ನವೇ ತಾತ್ಕಾಲಿಕ ರಸ್ತೆಗಳನ್ನು ನಿರ್ಮಿಸಬೇಕು. ಜನ ಸಂದಣಿ ಯಾಗದಂತೆ ಕ್ರಮ ವಹಿಸಬೇಕು. ದೇವಾಲಯದ ಸುತ್ತಲೂ ಇರುವ ಕೆಲ ಪ್ರದೇಶಗಳನ್ನು ಅಚ್ಚು ಕಟ್ಟು ಮಾಡಬೇಕು. ಶುದ್ಧ ನೀರಿನ ವ್ಯವಸ್ಥೆ ಮಾಡಬೇಕಾಗಿದ್ದು, ಬರಗಾಲದ ನಡುವೆ ನೀರಿನ ವ್ಯವಸ್ಥೆಗೆ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೋ ಅಥವಾ ನೀರಿನ ನೆಪದಲ್ಲಿಯೇ ಜಾತ್ರೆಯನ್ನೇ ಬೇಗ ಮುಗಿಸಿ ಬಿಡುತ್ತಾರೋ ಎಂಬುದನ್ನು ಕಾದು ನೋಡಬೇಕಾಗಿದೆ.

     ಲಕ್ಷಾಂತರ ಜನರು ಸೇರುವ ಈ ಜಾತ್ರೆಯಲ್ಲಿ ಮೊದಲಿನಿಂದಲೂ ಪೊಲೀಸ್, ಪಶು, ಆರೋಗ್ಯ, ಕಂದಾಯ ಇಲಾಖೆಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ತಾಲ್ಲೂಕು ಆಡಳಿತದ ಮತ್ತಷ್ಟು ಇಲಾಖೆಗಳ ಅಧಿಕಾರಿಗಳು ಮತ್ತು ಸಂಘ ಸಂಸ್ಥೆಗಳ ನೆರವಿನಿಂದ ಎಲ್ಲ್ಲರೂ ಒಟ್ಟಾಗಿ ಸೇರಿಕೊಂಡು ತಮ್ಮ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳು, ಮಾರಾಟ ಮಳಿಗೆಗಳು ಜೊತೆಯಲ್ಲಿ ವಸ್ತು ಪ್ರದರ್ಶನಗಳನ್ನು ನಡೆಸಲು ಮುಂದಾಗ ಬೇಕು. ಆಕರ್ಷಣೀಯ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯ ಬೇಕಾಗಿದೆ ಎಂಬುದು ಭಕ್ತಾದಿಗಳ ಆಗ್ರಹವಾಗಿದೆ.

     ಜಾತ್ರಾ ಮಹೋತ್ಸವವು ತನ್ನದೇ ಆದಂತಹ ಸಂಪ್ರ್ರದಾಯಗಳಿಂದ ಕೂಡಿದೆ. ಇತಿಹಾಸ ಪ್ರಸಿದ್ಧ ಸುವಿಖ್ಯಾತ ದೇವತೆಯಾಗಿರುವುದರಿಂದ ನೆರೆ ರಾಜ್ಯಗಳಿಂದ ಭಕ್ತಾದಿಗಳು ಜಾತ್ರೆಗೆ ಆಗಮಿಸಿ ತಮ್ಮ ಇಷ್ಟಾರ್ಥಗಳ ಹರಕೆಗಳನ್ನು ತೀರಿಸಿಕೊಳ್ಳುತ್ತಾರೆ. ಹಿಂದಿನ ಸಂಪ್ರದಾಯಗಳಂತೆ ಯಾರಿಗೂ ತೊಂದರೆ ಆಗದಂತೆ ಜಾತ್ರೆಯು ಸುಗಮವಾಗಿ ನಡೆಯಬೇಕು.

    ಎಲ್ಲಾ ಸಮುದಾಯದವರು ಒಗ್ಗಟ್ಟಾಗಿ ಸೇರಿ ತಮ್ಮ ಕೈಲಾದ ಕೆಲಸ ಕಾರ್ಯಗಳನ್ನು ಮಾಡುವುದರ ಮೂಲಕ ಜಾತ್ರೆಯು ಸುಗಮವಾಗಿ ನಡೆಯುತ್ತಿದೆ. ಜಾತ್ರೆಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು ಹಾಗೂ ಶುಚಿತ್ವಕ್ಕೆ ಹೆಚ್ಚು ಮಹತ್ವ ನೀಡಬೇಕು.

      ದಂಡಿನ ಮಾರಮ್ಮ ಶಕ್ತಿ ದೇವತೆಯಾಗಿದ್ದು ಶಾಸ್ತ್ರೋಕ್ತವಾಗಿ ಜಾತ್ರೆಯು ನಡೆಯಬೇಕು. ಕಳೆದ ಕೆಲ ವರ್ಷಗಳಿಂದ ಒಂದೊಂದೆ ಸಂಪ್ರಾದಾಯಗಳನ್ನು ತಾಲ್ಲೂಕು ಆಡಳಿತದ ವತಿಯಿಂದ ಕೈ ಬಿಡಲಾಗುತ್ತಿದೆ. ಸಂಪ್ರದಾಯದಂತೆ ಜಾತ್ರೆ ನಡೆದರೆ ಎಲ್ಲ್ಲರಿಗೂ ಒಳ್ಳೆಯದು. ಜಾತ್ರೆ ಮುಗಿದ ನಂತರ ಖರ್ಚು ವೆಚ್ಚದ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು. ಕೆಲ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸರಿಯಾದ ಲೆಕ್ಕ ಸಿಗುತ್ತಿಲ್ಲ.

Recent Articles

spot_img

Related Stories

Share via
Copy link
Powered by Social Snap