ಚಿತ್ರದುರ್ಗ
ಮುರುಘಾಮಠಕ್ಕೆ ಸೇರಿದ ಆಸ್ತಿಯನ್ನು ಒತ್ತುವರಿಯಾಗಿರುವುದು ಕಂಡುಬಂದರೆ ತಕ್ಷಣ ತೆರವುಗೊಳಿಸಿ ಕೊಡುವುದಾಗಿ ಅರಣ್ಯ ಸಚಿವ ಶಂಕರ್ ಭರವಸೆ ನೀಡಿದರು.
ನಗರದ ಮುರುಘಾಮಠದ ಫ.ಗು.ಹಳಕಟ್ಟಿ ವೇದಿಕೆಯಲ್ಲಿ ಶನಿವಾರ ಶರಣಸಂಸ್ಕøತಿ ಉತ್ಸವ ಅಂಗವಾಗಿ ಶರಣ ಪರಂಪರೆಗೆ ಮುರುಘಾ ಪರಂಪರೆಯ ಕೊಡುಗೆ ವಿಚಾರ ಕುರಿತಾದ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುರುಘಾಮಠದ ಸ್ವಾಮೀಜಿ ಮಠದ ಆಸ್ತಿಯನ್ನು ಅರಣ್ಯ ಇಲಾಖೆ ಒತ್ತುವರಿ ಮಾಡಿಕೊಂಡಿದೆ. ಇದನ್ನು ತೆರವುಗೊಳಿಸುವಂತೆ ಮನವಿ ಸಲ್ಲಿಸಿದ್ದಾರೆ. ಇದನ್ನು ಪರಿಶೀಲಿಸಿ ಒತ್ತುವರಿಯಾಗಿರುವುದು ಕಂಡುಬಂದರೆ ತಕ್ಷಣ ತೆರವುಗೊಳಿಸುವ ಇಂಗಿತ ವ್ಯಕ್ತಪಡಿಸಿದರು.
ಮುರುಘಾಮಠ ಲಕ್ಷಾಂತರ ಭಕ್ತರನ್ನು ಹೊಂದಿ, ಹಲವಾರು ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿ ವಿದ್ಯಾದಾಸೋಹವನ್ನು ಮಾಡುತ್ತಿದೆ. ಬಡವರು, ಹಿಂದುಳಿದ, ಅಲಕ್ಷಿತ ವರ್ಗದವರಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಶ್ರೀಗಳು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆಂದು ನುಡಿದರು.
ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಯಶಸ್ವಿ ಶರಣ ಸಂಸ್ಕøತಿಯ ಮಧ್ಯೆ ಜಗದ್ಗುರು ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ. ಅವರು ಕನ್ನಡದ ಕುಲಗುರುಗಳು ಎಂದೇ ಹೆಸರಾಗಿದ್ದರು. ಒಂದು ವಿಶ್ವವಿದ್ಯಾಲಯ ಮಾಡುವ ಕಾರ್ಯಕ್ಕಿಂತ ಹೆಚ್ಚಿನ ಜನ ಮತ್ತು ಲೋಕ ಸೇವೆ ಮಾಡಿದ್ದಾರೆ, ಅವರ ಅಗಲಿಗೆ ನಮಗೆ ನೋವು ತಂದಿದೆ ಎಂದು ನೋವಿನಿಂದ ಹೇಳಿದರು.
ಶರಣ ಪರಂಪರೆಗೆ ಮುರುಘಾ ಪರಂಪರೆ ಕೊಡುಗೆ ಎಂಬ ಚಿಂತನೆಯಿಂದ ಜನರಿಗೆ ಜ್ಞಾನರ್ಜನೆ ಮಾಡುತ್ತಿದೆ. ಶರಣ ಪರಂಪರೆಯಲ್ಲಿ ಲೋಕೋತ್ತರ ಕಾರ್ಯ ಮಾಡಿದಂತೆ ಶ್ರೀಮಠದ ಮುರುಗಿ ಶಾಂತವೀರಸ್ವಾಮೀಜಿಗಳ ಲೋಕೋತ್ತರ ಬದುಕಿನಿಂದ ಶ್ರೀಮಠ ಬೆಳೆದಿದೆ ಎಂದರು
ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಗಳು ಅನೇಕ ಶೈಕ್ಷಣಿಕ ಕಾರ್ಯಗಳನ್ನು ನಡೆಸಲು ಹಲವಾರು ಕಾಲೇಜುಗಳನ್ನು ಸ್ಥಾಪಿಸಿದರು. ಮುಖ್ಯವಾದವೆಂದರೆ ಕಾನೂನು, ಇಂಜಿನಿಯರಿಂಗ್ ಹಾಗು ದಂತ ಮಹಾವಿದ್ಯಾಲಯ. ಪಟ್ಟ ಕಟ್ಟಿ ನಮಗೆ ಅವಕಾಶ ನೀಡಿದರು. ಅವರ ಆಶಯಗಳನ್ನು ಮುಂದುವರಿಸಿರುವ ನಾವುಗಳು ವೈದ್ಯಕೀಯ ಮಹಾವಿದ್ಯಾಲಯ ಹಾಗು ಆಸ್ಪತ್ರೆಯನ್ನು ಸ್ಥಾಪಿಸಿ ಜನರ ಸೇವೆ ಮಾಡಲು ಅವಕಾಶ ನೀಡಲಾಗಿದೆ ಎಂದು ನುಡಿದರು.
ಸಮ್ಮುಖ ವಹಿಸಿ ಮಾತನಾಡಿದ ಶರಣಸಂಸ್ಕøತಿ ಉತ್ಸವ ಸಮಿತಿ ಗೌರವಾಧ್ಯಕ್ಷರಾದ ಜಗದ್ಗುರು ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ, ಮುರುಘಾ ಮಠ ಬೃಹನ್ಮಠ. ಬೃಹನ್ಮಠ ಎಂದರೆ ಎಲ್ಲಾ ದೃಷ್ಟಿಯಿಂದಲೂ ಬೃಹತ್ ಆಗಿದೆ. ಅವರು ಕೈಗೊಂಡಿರುವ ಸಾಮೂಹಿಕ ಕಲ್ಯಾಣ ಕಾರ್ಯಕ್ರಮ ಸಮಾಜಕ್ಕೆ ಒಂದು ಉತ್ತಮ ಕೊಡುಗೆ . ಶ್ರೀಗಳು ನಿರ್ಮಿಸಿರುವ ಅನುಭವ ಮಂಟಪ ಹಾಗು ನಿರ್ಮಾಣಗೊಳ್ಳುತ್ತಿರುವ ಬಸವಣ್ಣನವರ ಪುತ್ಥಳಿಯಿಂದಾಗಿ ಚಿತ್ರದುರ್ಗವು ಜಗತ್ತಿನದಾದ್ಯಂತ ಖ್ಯಾತಿಗೊಳ್ಳಲಿದೆ. ನೊಂದವರಿಗೆ, ಮಹಿಳೆಯರಿಗೆ, ಹಿಂದುಳಿದವರಿಗೆ ಸಮಾನತೆ ಶ್ರೀಮಠವು ನೀಡಿದೆ. ಬಸವಣ್ಣನವರ ತತ್ತ್ವಾದರ್ಶಗಳನ್ನು ಅನುಷ್ಟಾನ ಮಾಡುತ್ತಿರುವ ಶ್ರೀಗಳ ಕ್ರಿಯಾಶೀಲತೆ ಇಂದಿನವರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ, ಚರಿತ್ರೆಯನ್ನು ತಿಳಿದರೆ ಚರಿತ್ರೆಯನ್ನು ಬರೆಯಲು ಸಾದ್ಯ. ಮುರುಘಾ ಮಠವು ಚಿತ್ರದುರ್ಗದ ಬೆಳವಣಿಗೆಗೆ ಪ್ರಮುಖ ಕಾಣಿಕೆಯನ್ನು ನೀಡಿದೆ. ಈಗಿನ ಶ್ರೀಗಳು ಸೇರಿದಂತೆ ದಾವಣಗೆರೆ ಜಯದೇವ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿಗಳು ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಡಾ.ಶಿವಮೂರ್ತಿ ಮುರುಘಾಶರಣರ ಪೀಠಾರೋಹಣ ನಂತರ ಕ್ರಾಂತಿಕಾರಿಕ ಬದಲಾವಣೆಗಳಾಗಿವೆ. ಜಾತಿರಹಿತ ಸಮಾಜದ ಸ್ಥಾಪನೆಗೆ ಅವಕಾಶ ನೀಡಿದ್ದಾರೆ. ಸಾಮಾಜಿಕ ನ್ಯಾಯವನ್ನು ಕೊಡುತ್ತಿರುವ ಮಠ ಮುರುಘಾ ಮಠ ಎಂದು ತಿಳಿಸಿದರು.
ಕಿರುತೆರೆಯ ನಿರೂಪಕಿ ಅನುಶ್ರೀ ಹಾಗೂ ತಂಡದವರು ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು.ಸಂಸದರಾದ ಬಿ.ಎನ್.ಚಂದ್ರಪ್ಪ, ಕಾಂಗ್ರೆಸ್ ಮುಖಂಡ ಹನುಮಲಿ ಷಣ್ಮುಖಪ್ಪ, ಶರಣ ಸಂಸ್ಕøತಿ ಉತ್ಸವದ ಕಾರ್ಯಾದ್ಯಕ್ಷರಾದ ಪಟೇಲ್ಶಿವಕುಮಾರ್ ದಂಪತಿ, ಕಾರ್ಯದರ್ಶಿ ಡಿ.ಎಸ್. ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು, ಎಂ.ಜಯಕುಮಾರ್ ಸ್ವಾಗತಿಸಿ, ವಂದಿಸಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
