ಸಿದ್ದರಬೇಟ್ಟದ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಪೊಲೀಸರ ದಾಳಿ..!!

ಕೊರಟಗೆರೆ

         ಸುಪ್ರಸಿದ್ದ ಪ್ರವಾಸಿ ತಾಣವಾದ ಶ್ರೀಕ್ಷೇತ್ರ ಸಿದ್ದರಬೇಟ್ಟದಲ್ಲಿ ವೈಶ್ಯಾವಾಟಿಕೆಅಡ್ಡೆಯ ಮೇಲೆ ಕೊರಟಗೆರೆ ಸಿಪಿಐ ನದಾಪ್ ಮತ್ತು ಪಿಎಸೈ ಮಂಜುನಾಥ ನೇತೃತ್ವದ ಪೊಲೀಸರತಂಡ ಬುಧವಾರ ಮಧ್ಯರಾತ್ರಿ ದಾಳಿ ನಡೆಸಿ ಮೂರುಜನ ಮಹಿಳೆ ಮತ್ತು ವ್ಯವಸ್ಥಾಪಕನನ್ನು ಬಂಧಿಸಿರುವ ಘಟನೆ ನಡೆದಿದೆ.

          ತಾಲೂಕಿನಚನ್ನರಾಯನದುರ್ಗ ಹೋಬಳಿ ಬೂದಗವಿ ಗ್ರಾಪಂಕೇಂದ್ರಸ್ಥಾನವಾದ ಶ್ರೀಕ್ಷೇತ್ರ ಸಿದ್ದರಬೇಟ್ಟಕ್ಕೆ ಹೋಗುವ ಮಾರ್ಗದಲ್ಲಿರುವ ಶ್ರೀ ಮಲ್ಲಿಕಾರ್ಜುನ ಸಮುದಾಯ ಭವನದ ವಸತಿಗೃಹದಲ್ಲಿಅಕ್ರಮವಾಗಿ ಹಣ ಸಂಪಾದಿಸುವ ಉದ್ದೇಶದಿಂದ ವೈಶ್ಯಾವಾಟಿಕೆ ನಡೆಯುತ್ತೀರುವಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ್ದಾರೆ.

        ಸಿದ್ದರಬೇಟ್ಟದ ಶ್ರೀಶೈಲ ಮಲ್ಲಿಕಾರ್ಜುನ ಸಮುದಾಯ ಭವನದ ವ್ಯವಸ್ಥಾಪಕ ಮೂಲತಃಗದಗಜಿಲ್ಲೆಯಅಬ್ಬಿಗೆರೆತಾಲೂಕಿನ ಸುರೇಶ್ ಬಸವಂತಪ್ಪಎಂಬಾತನಜೊತೆ ವೈಶ್ಯಾವಾಟಿಕೆಗೆ ಬಳಕೆಯಾಗಿದ್ದ ಮೂರುಜನ ಮಹಿಳೆಯರನ್ನು ರಕ್ಷಣೆ ಮಾಡಿ ವ್ಯವಸ್ಥಾಪಕನಿಂದ 16ಸಾವಿರ ನಗದು ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

         ಶ್ರೀಕ್ಷೇತ್ರ ಸಿದ್ದರಬೇಟ್ಟಕ್ಕೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಪ್ರಾರಂಭವಾದ ಸಮುದಾಯ ಭವನದಲ್ಲಿ ಕಳೆದ 14ವರ್ಷದಿಂದ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತೀದ್ದ ಸುರೇಶ್‍ಎಂಬಾತಅಕ್ರಮವಾಗಿ ಹಣ ಸಂಪಾದನೆ ಮಾಡುವದುರುದ್ದೇಶದಿಂದ ಬೆಟ್ಟದಲ್ಲಿರಾತ್ರಿ ವೇಳೆ ಉಳಿದುಕೊಳ್ಳುವ ಮಹಿಳಾ ಪ್ರವಾಸಿಗರನ್ನು ವೈಶ್ಯಾವಾಟಿಕೆಜಾಲಕ್ಕೆ ಬಳಸುತ್ತೀದ್ದ ಎನ್ನಲಾಗಿದೆ.

         ಕೊರಟಗೆರೆ ಪೊಲೀಸ್‍ಠಾಣೆಯಲ್ಲಿ ಸಮುದಾಯ ಭವನದ ಮಾಲೀಕ, ವ್ಯವಸ್ಥಾಪಕ ಮತ್ತು 3ಜನ ಮಹಿಳೆಯರ ಮೇಲೆ ಪ್ರಕರಣದಾಖಲಾಗಿದೆ. ವೈಶ್ಯಾವಾಟಿಕೆ ದಾಳಿಯಲ್ಲಿ ಸಿಪಿಐ ನದಾಪ್, ಪಿಎಸೈ ಮಂಜುನಾಥ ಹಾಗೂ ಸಿಬ್ಬಂದಿಗಳಾದ ಸದಾನಂದ, ರಂಗನಾಥ, ತ್ರಿವೇಣಿ ಮತ್ತುಕಿರಣ್ ಭಾಗವಹಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link