ಜಾನಪದ ಕಲೆಗಳನ್ನು ಉಳಿಸಿ ಬೆಳಸುವುದು ನಾಡಿನ ಪ್ರತಿಯೊಬ್ಬರ ಕರ್ತವ್ಯ

0
37

ಬ್ಯಾಡಗಿ :

    ನಶಿಸಿಹೋಗುತ್ತಿರುವ ಜಾನಪದ ಕಲೆಗಳನ್ನು ಉಳಿಸಿ ಬೆಳಸುವುದು ನಾಡಿನ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

    ಅವರು ತಾಲೂಕಿನ ಮಲ್ಲೂರ ಗ್ರಾಮದ ಶ್ರೀ ಮರುಳಶಿದ್ದೇಶ್ವರ ಭಜನಾ ಮತ್ತು ನಾಟಕ ಮಂಡಳಿ ಅವರಿಂದ ಏರ್ಪಡಿಸಿದ್ದ ಶನಿಪ್ರಭಾವ ಎಂಬ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಆಧುನಿಕತೆಯ ಬಿರುಗಾಳಿಯಲ್ಲಿ ಜನರ ಜೀವನದಲ್ಲಿ ಹಾಸುಹೊಕ್ಕಾಗಿದ್ದ ಐತಿಹಾಸಿ ನಾಟಕಗಳು ಮತ್ತು ಜಾನಪದ ಕಲೆಗಳು ನಶಿಸುವ ಹಂತ ತಲುಪಿವೆ. ನಾಟಕ ಹಾಗೂ ಜಾನಪದ ಕಲೆಗಳಲ್ಲಿ ನಮ್ಮ ಮಣ್ಣಿನ ವಾಸನೆ ಅಡಗಿದೆ.

     ನಮ್ಮ ಜನರ ಸಂಸ್ಕತಿ ಬೆರತಿದೆ. ಅದನ್ನು ಉಳಿಸಿ ಬೆಳೆಸಿದಾಗ ಮಾತ್ರ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕತಿ, ನಾಟಕ ಜಾನಪದಗಳ ತಿರುಳನ್ನು ತಿಳಿಸಿಕೊಡಲು ಸಾಧ್ಯವೆಂದರು. ಈ ಹಿನ್ನಲೆಯಲ್ಲಿ ಶ್ರೀ ಮರುಳಶಿದ್ದೇಶ್ವರ ಭಜನಾ ಮತ್ತು ನಾಟಕ ಮಂಡಳಿ ಅವರು ಸ್ಥಳೀಯ ಮತ್ತು ನಾಡಿನ ಜಾನಪದ ಕಲಾವಿದರನ್ನು ಹಾಗೂ ಜಾನಪದ ಕಲೆಗಳನ್ನು ಗುರುತಿಸಿ ಸಂರಕ್ಷಿಸಲು ಮುಂದಾಗಿದೆ ಎಂದರು. ಶ್ರೀ ಮರುಳಶಿದ್ದೇಶ್ವರ ಭಜನಾ ಮತ್ತು ನಾಟಕ ಮಂಡಳಿಯ ವತಿಯಿಂದ ಪ್ರತಿ ವರ್ಷ ಸಹಸ್ರಾರು ಜಾನಪದ ಕಲಾವಿದರಿಗೆ ಸಮಗ್ರ ಜಾನಪದ ಕಲೆಗಳ ಕುರಿತು ನಾಟಕ ನೃತ್ಯ ಜಾನಪದ ಕಲೆಗಳ ಬಗ್ಗೆ ಗ್ರಾಮೀಣ ಪ್ರದೇಶದ ಜನರಿಗೆ ನಾಟಕದ ಮೂಲಕ ತಿಳಿಸಿ ಕೊಡುವಂತ ಕಾರ್ಯವನ್ನು ನೆನೆದರು.

      ಗ್ರಾ.ಪಂ.ಅಧ್ಯಕ್ಷ ಲಕ್ಷ್ಮಣ ಮೇಗಳಮನಿ ಅವರು ಶನಿಪ್ರಭಾವ ನಾಟಕದ ಪಾತ್ರದಾರಿಗಳನ್ನು ಸನ್ಮಾನಿಸಿ ಮಾತನಾಡಿ ಶ್ರೀ ಮರುಳಶಿದ್ದೇಶ್ವರ ಭಜನಾ ಮತ್ತು ನಾಟಕ ಮಂಡಳಿ ಅವರ ಪರಿಶ್ರಮದಿಂದ ನಮ್ಮ ನಾಡಿನ ಕಲೆ, ಸಾಹಿತ್ಯ, ಸಂಸ್ಕತಿಯನ್ನು ಉಳಿಸಿ ಬೆಳಸುವಂತ ಕಾರ್ಯವು ಅತೀ ಮಹತ್ತರವಾಗಿದೆ ಎಂದರು. ಪ್ರತಿ ಗ್ರಾಮಗಳಲ್ಲಿಯೂ ಇಂಥಹ ಕಾರ್ಯಗಳು ನಡೆಯಲು ಸರಕಾರ ಸಂಘ, ಸಂಸ್ಥೆಗಳಿಗೆ ಹೆಚ್ಚಿನ ಅನುದಾನವನ್ನು ನೀಡುವ ಮೂಲಕ ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕೆಂದರಲ್ಲದೇ ನಾಡಿನ ಕಲೆ, ಸಾಹಿತ್ಯವನ್ನು ಸಂರಕ್ಷಿಸಲು ಶ್ರೀ ಮರುಳಶಿದ್ದೇಶ್ವರ ಭಜನಾ ಮತ್ತು ನಾಟಕ ಮಂಡಳಿ ಮುಂದಾಗಿದೆ, ಅಲ್ಲದೇ ಗ್ರಾಮೀಣ ಪ್ರದೇಶದಲ್ಲಿ ಎಲೆ ಮರೆಯ ಕಾಯಿಯಂತಿರುವ ಜಾನಪದ ಕಲಾವಿದರನ್ನು ಗುರುತಿಸಿ ಅವರ ಸಮಗ್ರ ಪರಿಚಯವನ್ನು ಇಂದಿನ ಯುವ ಪೀಳಿಗೆಗೆ ಗುರ್ತಿಸುವಂತ ಕಾರ್ಯವನ್ನು ಮಾಡಲು ಮುಂದಾಗಿದೆ ಎಂದರು. 

       ರಾಜ್ಯ ಮಾಜಿ ಜೈವಿಕ ಇಂದನ ಮಂಡಲಿ ಅಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡುತ್ತ ಉತ್ತರ ಕರ್ನಾಟಕದ ಹೆಬ್ಬಾಗಿಲೆಂದೆ ಕರೆಯಲ್ಪಡುವ ಹಾವೇರಿ ಜಿಲ್ಲೆಯಲ್ಲಿ ವೈವಿಧ್ಯಮಯ ಜಾನಪದ ಕಲೆಗಳನ್ನು ಕಾಣಬಹುದಾಗಿದೆ. ಆದರೆ ಇಂದಿನ ವಿಜ್ಞಾನ ತಂತ್ರಜ್ಞಾನ ಕಾಲದಲ್ಲಿ ಅವುಗಳು ನೇಪಥ್ಯಕ್ಕೆ ಸೇರುವ ಮೊದಲು ಅಂತಹ ಕಲಾವಿದರ ಕಲೆಯನ್ನು ಗುರುತಿಸಿ ಅವುಗಳ ಪೋಷಣೆಗಾಗಿ ಜನತೆ ಮುಂದಾಗಬೇಕಿದೆ ಎಂದರು

        ಅಧ್ಯಕ್ಷತೆಯನ್ನು ಶ್ರೀ ವೀರಭದ್ರೇಶ್ವರ ಅಭಿವೃದ್ಧಿ ಕಮೀಟಿ ಅಧ್ಯಕ್ಷ ಶಿದ್ರಾಮಯ್ಯ ಹಿರೇಮಠ ವಹಿಸಿದ್ದರು. ತಾ.ಪಂ.ಸದಸ್ಯ ಯಲ್ಲನಗೌಡ್ರ ಕರೆಗೌಡ್ರ, ಶಿವಬಸಪ್ಪ ಕುಳೇನೂರ, ಕೆ.ಸಿ.ಹಿರೇಮಠ, ಗಣೇಶಪ್ಪ ಬಡಿಗೇರ, ಎಚ್.ಎಸ್.ಜಾಧವ, ಗಣೇಶಪ್ಪ ತಳ್ಳಳ್ಳಿ ಸೇರಿದಂತೆ ಇನ್ನಿತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here