ತಿಪಟೂರು
ಸರ್ಕಾರವು ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆಡಳಿತ ಮಂಡಳಿಯನ್ನು ಸೂಪರ್‍ಸೀಡ್ ಮಾಡಿರುವುದನ್ನು ಖಂಡಿಸಿ ನಗರದ ಡಿಸಿಸಿ ಬ್ಯಾಂಕ್ ನೌಕರರ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ನೌಕರರೆಲ್ಲರೂ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನೆಯಲ್ಲಿ ತಾಲ್ಲೂಕಿನ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಭಾಗವಹಿಸಿದ್ದು ಬ್ಯಾಂಕನ್ನು ಸೂಪರ್‍ಸೀಡ್ ಮಾಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕಪ್ಪುಪಟ್ಟಿ ಧರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇದೇ ವೇಳೆ ಬ್ಯಾಂಕಿನ ವ್ಯವಸ್ಥಾಪಕರಾದ ಮುದ್ದಪ್ಪ ಮಾತನಾಡಿ, ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನೌಕರರ ಸಂಘದ ಎಲ್ಲ ಸಿಬ್ಬಂದಿ ವರ್ಗದವರು ಹಾಗೂ ಎಲ್ಲಾ ನೌಕರರು ಒಕ್ಕೊರಲಿನಿಂದ ಇಂದು ಬ್ಯಾಂಕಿನ ಮಾನ್ಯ ಅಧ್ಯಕ್ಷರಾದ ಕೆ.ಎನ್.ರಾಜಣ್ಣನವರ ವಿರುದ್ಧ ರಾಜಕೀಯ ದುರುದ್ದೇಶದಿಂದ ಕೆಲವರು ಸರ್ಕಾರದ ಒತ್ತಡ ಸರ್ಕಾರದ ಮೇಲೆ ಒತ್ತಡ ತಂದು ಬ್ಯಾಂಕನ್ನು ಸೂಪರ್‍ಸೀಡ್ ಮಾಡಿರುವುದು ಖಂಡನೀಯ ಎಂದು ತಿಳಿಸಿದ ಅವರು, ಯಾವುದೇ ಕಾರಣಕ್ಕೂ ರೈತರು ನೌಕರರು ಗ್ರಾಹಕರು ಹಾಗೂ ಸಹಕಾರ ಸಂಘದ ಸದಸ್ಯರು ಇಂತಹ ತಪ್ಪು ತಿಳಿವಳಿಕೆಗಳಿಗೆ ಬೆಲೆ ಕೊಡದೆ ಬ್ಯಾಂಕುಗಳು ನಡೆಯುತ್ತಿರುತ್ತವೆ ಎಂದು ಇದೇ ವೇಳೆ ಗ್ರಾಹಕರಿಗೆ ಅಭಯ ನೀಡಿದರು.
ಯಾವುದೇ ಕಾರಣಕ್ಕೂ ಬ್ಯಾಂಕುಗಳು ಇಂತಹ ಸೂಪರ್‍ಸೀಡ್‍ನಿಂದ ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದು ತಿಳಿಸಿದ ಅವರು, ರೈತರಿಗೆ, ನೌಕರರಿಗೆ, ಗ್ರಾಹಕರಿಗೆ ಹಾಗೂ ಸಹಕಾರ ಸಂಘಗಳಿಗೆ ಹಾಗೂ ಇನ್ನಿತರ ಎಲ್ಲ ವರ್ಗದ ಜನರಿಗೆ ಜನರಿಗೆ ಹಾಗೂ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿರುತ್ತದೆ ಹಾಗೂ ರೈತರ ಸಾಲಮನ್ನಾ ಆರ್ಥಿಕ ನೆರವು ನೀಡಿ ರೈತರ ಬೆನ್ನೆಲುಬಾಗಿ ನಿಂತಿರುವ ಬ್ಯಾಂಕಿನ ಅಧ್ಯಕ್ಷರಾದ ಕೆ.ಎನ್.ರಾಜಣ್ಣನವರು ಮತ್ತು ಆಡಳಿತ ಮಂಡಳಿ ವಿರುದ್ಧ ರಾಜಕೀಯ ದುರುದ್ದೇಶದಿಂದ ಇಂತಹ ಕೆಲಸವನ್ನು ಮಾಡಿರುವುದು ಖಂಡನೀಯ ಎಂದು ಇದೇ ವೇಳೆ ತಿಳಿಸಿದರು.
ಬ್ಯಾಂಕಿನ ಮೇಲ್ವಿಚಾರಕರಾದ ಉಮಾಶಂಕರ್ ಮಾತನಾಡಿ, ರಾಜಕೀಯ ದುರುದ್ದೇಶದಿಂದ ಇಂತಹ ಅಭಿವೃದ್ಧಿಯತ್ತ ಇರುವ ಬ್ಯಾಂಕ್ ಅನ್ನು ಇಂದು ಸೂಪರ್‍ಸೀಡ್ ಮಾಡಿರುವುದು ಖಂಡನೀಯ. ಜಿಲ್ಲೆಯಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಕೋಟಿಗೂ ಹೆಚ್ಚು ಬಂಡವಾಳ ವನ್ನು ಈ ಬ್ಯಾಂಕ್ ಹೊಂದಿದ್ದು ಲಕ್ಷಾಂತರ ರೈತ ಕುಟುಂಬಗಳಿಗೆ ಈ ಬ್ಯಾಂಕು ಸಂಜೀವಿನಿಯಾಗಿದೆ ಎಂದರು.ಪ್ರತಿಭಟನೆಯಲ್ಲಿ ತಾಲ್ಲೂಕಿನ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಬ್ಯಾಂಕಿನ ನೌಕರರು ಸಿಬ್ಬಂದಿ ವರ್ಗದವರು ಹಾಜರಿದ್ದರು.