ವಿಜಯಬ್ಯಾಂಕ್ ಮ್ಯಾನೇಜರ್ ವಿರುದ್ದ ರೈತ ಸಂಘದ ಪ್ರತಿಭಟನೆ

ಹಿರಿಯೂರು:

     ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಮಸ್ಕಲ್ ವಿಜಯ ಬ್ಯಾಂಕ್ ಮ್ಯಾನೇಜರ್‍ರವರನ್ನು ಈ ಕೂಡಲೇ ಇಲ್ಲಿಂದ ವರ್ಗಾಯಿಸಿ ಅವರ ಮೇಲೆ ಸೂಕ್ತಕ್ರಮ ಕೈಗೊಳ್ಳಬೇಕು ಎಂಬುದಾಗಿ ರೈತಸಂಘದ ಅಧ್ಯಕ್ಷ ಕೆ.ಸಿ.ಹೊರಕೇರಪ್ಪ ಆಗ್ರಹಿಸಿದರು.

       ತಾಲ್ಲೂಕಿನ ಮಸ್ಕಲ್ ಗ್ರಾಮದ. ವಿಜಯಬ್ಯಾಂಕ್ ಶಾಖೆಯ ಮುಂದೆ ತಾ||ರೈತ ಸಂಘದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

         ಬ್ಯಾಂಕ್‍ನಲ್ಲಿ ಸಾಲ ಪಡೆದಿರುವ ರೈತರ ಖಾತೆಗೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ವಿಮೆ ಹಣವನ್ನು ರೈತರಿಗೆ ತಲುಪದೇ ಸಾಲಕ್ಕೆ ಜಮೆ ಮಾಡುವುದಾಗಿ ರೈತರಿಗೆ ಬೆದರಿಸುತ್ತಿದ್ದು,ರೈತರಿಗೆ,ಗ್ರಾಹಕರಿಗೆ, ಬರುವ ಸಬ್ಸಿಡಿಹಣ ಕೊಡದಿರುವ ಬಗ್ಗೆ ನರೇಗಾ ಯೋಜನೆಯ ಕೂಲಿ ಹಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಹಣ ಗ್ಯಾಸ್ ಸಬ್ಸಿಡಿ ಹಣ ವಿದ್ಯಾರ್ಥಿಗಳ ವಿದ್ಯಾರ್ಥಿವೇತನದ ಹಣ,ಹಾಲು ಮಾರಾಟದ ಹಣ,ಇತ್ಯಾದಿ ಯೋಜನೆಗಳ ಹಣವನ್ನು ರೈತರಿಗೆ ಗ್ರಾಹಕರಿಗೆ ಕೊಡದೇ ಸಾಲಕ್ಕೆ ಜಮೆಮಾಡಬಾರದು ಎಂದು ಮಾನ್ಯ ಜಿಲ್ಲಾಧಿಕಾರಿಗಳು,ಜಿಲ್ಲಾಲೀಡ್ ಬ್ಯಾಂಕ್ ಮ್ಯಾನೇಜರ್ ಆದೇಶ ನೀಡಿದರೂ ದಿಕ್ಕರಿಸಿ ರೈತರೊಂದಿಗೆ ಅನುಚಿತವಾಗಿ ವರ್ತಿಸಿದ ಬ್ಯಾಂಕ್ ಮ್ಯಾನೇಜರ್ ಗಣೇಶ್‍ರವರನ್ನು ಕೂಡಲೇ ವರ್ಗಾಯಿಸುವಂತೆ ಒತ್ತಾಯಿಸಿ ಬ್ಯಾಂಕ್ ಮುಂದೆ ಧರಣಿ ಕೈಗೊಳ್ಳಲಾಯಿತು.

        ಅಂತಿಮವಾಗಿ ವಿಜಯಬ್ಯಾಂಕ್‍ನ ಸಹಾಯಕ ನಿಬಂಧಕರು [ಎಜಿಎಚ್] ದೂರವಾಣಿ ಮೂಲಕ ಪ್ರತಿಭಟನಾಕಾರ ರೈತರಿಗೆ ಇನ್ನು ಮುಂದೆ ಈರೀತಿಯ ತೊಂದರೆಯಾಗದಂತೆ ಯೋಜನೆಗಳ ಸಹಾಯಧನ, ವಿಮೆ ಹಣ, ಇನ್‍ಪುಟ್ ಸಬ್ಸಿಡಿ ಇತ್ಯಾದಿಗಳನ್ನು ಸಾಲಕ್ಕೆ ಜಮೆ ಮಾಡದೇ ರೈತರಿಗೆ ಕೊಡುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

        ಈ ಪ್ರತಿಭಟನೆಯಲ್ಲಿ ರೈತಸಂಘದ ಮುಖಂಡರುಗಳಾದ ಕೆ.ಸಿ.ಹೊರಕೇರಪ್ಪ ಆಲೂರುಸಿದ್ದರಾಮಣ್ಣ, ಎ.ಕೃಷ್ಣಸ್ವಾಮಿ, ದಸ್ತಗಿರಿಸಾಬ್, ಬಿ.ಒ.ಶಿವಕುಮಾರ್, ಚಂದ್ರಶೇಖರ್, ಎಂ.ಪಿ.ನಾಗರಾಜು, ಶಿವಲಿಂಗಪ್ಪ, ಲಕ್ಷ್ಮೀಕಾಂತ್, ಗೌಸ್‍ಸಾಬ್, ಬಿ.ಡಿ.ಶ್ರೀನಿವಾಸ್, ಕಿರಣಪ್ರಭು, ವಿರೂಪಾಕ್ಷಪ್ಪ, ಹನುಮಂತಪ್ಪ, ವೀರೇಶ್, ಚಂದ್ರಣ್ಣ, ಪಳಿನಿಸ್ವಾಮಿ, ಜೆ.ಸುಬ್ರಮಣಿ, ಎಂ.ನಾರಾಯಣಸ್ವಾಮಿ, ಪಿ.ಎಸ್.ಶಿವಕುಮಾರ್, ಎ.ಎಸ್.ವೆಂಕಟೇಶ್, ಕೆ.ಗೋವಿಂದರಾಜ್, ಭಾಗವಹಿಸಿದ್ದರು.

 

Recent Articles

spot_img

Related Stories

Share via
Copy link
Powered by Social Snap