ಹೆಚ್ಚಿನ ಶುಲ್ಕ ವಸೂಲಿ ಖಂಡಿಸಿ ಪ್ರತಿಭಟನೆ

ಹರಪನಹಳ್ಳಿ

    ಖಾಸಿಗೆ ಅನುದಾನಿತ ಪದವಿ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಶುಲ್ಕ ವಸೂಲಿ ಖಂಡಿಸಿ ಏಕಲವ್ಯ ಸಂಘರ್ಷ ಸಮಿತಿವತಿಯಿಂದ ಪ್ರತಿಭಟನೆ ನೆಡೆಸಿ ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.

    ಈ ವೇಳೆ ಏಕಲವ್ಯ ಸಂಘರ್ಷ ಸಮಿತಿ ತಾಲೂಕು ಅದ್ಯಕ್ಷ ರಾಯದುರ್ಗದ ಪ್ರಕಾಶ ಮಾತನಾಡಿ ಖಾಸಗಿ ಅನುದಾನಿತ ಪದವಿ ಶಿಕ್ಷಣ ಸಂಸ್ಥೆಗಳಲ್ಲಿ ಬಡ ವಿದ್ಯಾರ್ಥಿಗಳಿಂದ ಡೊನೇಷನ್‍ರೂಪದಲ್ಲಿ ಹಣ ವಸೂಲಿ ಮಾಡುತ್ತಿರುವುದು ಶೈಕ್ಷಣಿಕ ಶೋಷಣೆಯಾಗಿದೆ. ಹಾಗೂ ಶಿಕ್ಷಣವನ್ನು ವ್ಯಾಪಾರದ ವಸ್ತುವಂತೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಪರಿಶಿಷ್ಟ ಜಾತಿ ಪಂಗಡದ ವಿದ್ಯಾರ್ಥಿಗಳನ್ನೊಳಗೊಂಡಂತೆ ಇನ್ನಿತರೆಅನ್ಯಜನಾಂಗದಎಲ್ಲಾಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಮಾರಕವಾಗುತ್ತದೆ.ಈ ಕೂಡಲೇಇದಕ್ಕೆಕಡಿವಾಣ ಹಾಕಬೇಕು.ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕಿನಎಲ್ಲಾ ಅನುದಾನಿತ ಪದವಿ ಶಿಕ್ಷಣ ಸಂಸ್ಥೆಗಳ ಉಗ್ರವಾದ ಪ್ರತಿಭಟನೆ ಮಾಡಲಾಗುತ್ತದೆಎಂದು ಎಚ್ಚರಿಸಿದರು.

    ಕಾರ್ಯದರ್ಶಿ ತಳವಾರ ಶಿವರಾಜ ಮಾತನಾಡಿ ಕರೋನಾ ಸೋಂಕಿನ ಸಂಕಷ್ಟದಿಂದ ಇಗಾಗಲೇ ಜನ ಸಾಮನ್ಯರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು ಬಡವರ ಮಕ್ಕಳ ಶಿಕ್ಷಕಣಕ್ಕೆ ಪ್ರೋತ್ಸಹ ನೀಡಬೇಕಾದ ಸರ್ಕಾರಿ ಹಾಗೂ ಇತರೆ ವಲಯಗಳ ಜವಾಬ್ದಾರಿ ಆಗಿರಬೇಕಿತ್ತು ಆದರೆ ಖಾಸಿಗೆ ಅನುದಾನಿತ ಪದವಿ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿದ್ದು ನಮ್ಮ ಸಂಘಟನೆಯವರು ಇಗಾಗಲೇ ಎಲ್ಲಾ ಪದವಿ ಕಾಲೇಜುಗಳಿಗೆ ತೆರಳಿ ಸರ್ಕಾರ ನಿಗದಿ ಪಡಿಸಿದ ಶುಲ್ಕ ತೆಗೆದುಕೋಳ್ಳಿ ಎಂದರೂ ಕೂಡ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರವುದು ಖಂಡನೀಯ ಈ ಕೂಡಲೆ ಅನುದಾನಿತ ಪದವಿ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು ವಿದ್ಯಾರ್ಥಿ ಸಂಘಟನೆ ಸಮ್ಮುಖದಲ್ಲಿ ಸಭೆ ನೆಡೆಸಬೇಕು ಎಂದರು.

    ಉಪಾಧ್ಯಕ್ಷರುಗಳಾದ ಮೈದೂರಿನ ಪರಶುರಾಮ್, ಅಲಮರಸೀಕೆರೆಯ ಟಿ.ಮಂಜುನಾಥ್, ಖಜಾಂಚಿ ಜಿ.ದಾದಾಪುರದ ಹರೀಶ ಹರಪನಹಳ್ಳಿಯ ಗಿಡ್ಡಳ್ಳಿ ವಿಜಯ್‍ಕುಮಾರ್, ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೋಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link