ಮಧುಗಿರಿ:
ಮಾಜಿ ಸಚಿವ ಹಾಲಿ ಶಾಸಕ ಡಿಕೆ ಶಿವಕುಮಾರ್ ಅವರನ್ನು ಇಡಿ ಇಲಾಖೆಯ ಅಧಿಕಾರಿಗಳು ಬಂಧಿಸಿರುವುದನ್ನು ಖಂಡಿಸಿ ಎಂ.ವಿ.ವೀರಭದ್ರಯ್ಯ ಹಾಗೂ ಡಿ.ಕೆ ಶಿವಕುಮಾರ್ ಅಭಿಮಾನಿಗಳ ವತಿಯಿಂದ ಟಿ.ವಿ.ವಿ. ಪೆಟ್ರೋಲ್ ಬಂಕ್ ಸಮೀಪ ಪ್ರತಿಭಟನೆ ನಡೆಸಲಾಯಿತು.
ಶಾಸಕ ವೀರಭದ್ರಯ್ಯ ಮಾತನಾಡಿ ರಾಜ್ಯದಲ್ಲಿ ಸುಮಾರು ಒಂದು ತಿಂಗಳ ಕಾಲ ನಡೆದ ನಾಟಕವನ್ನು ಎಲ್ಲಾರೂ ನೋಡಿದ್ದಾರೆ ಶಾಸಕ ಶ್ರೀನಿವಾಸ ಗೌಡ ವಿಧಾನ ಸಭೆಯಲ್ಲಿ ಚರ್ಚೆ ಕೂಡ ನಡೆಸಿದ್ದಾರೆ ಯಾರೋ ಇಬ್ಬರು 5 ಕೋಟಿ ಹಣದೊಂದಿಗೆ ಅವರ ಮನೆಗೆ ಭೇಟಿ ನೀಡಿದ್ದಾರೆ ಈ ಬಗ್ಗೆ ಸದನದಲ್ಲಿ ಉಲ್ಲೇಖವಾಗಿದೆ. ಅವರಿಂದ ಹಣ ಪಡೆದವರು ಕೂಡ ವಿಧಾನ ಸಭೆಯಲ್ಲಿದ್ದರೂ ಅವರಿಗೆ ಕೋಟಿ ಕೋಟಿ ರೂಪಾಯಿಗಳು ಎಲ್ಲಿಂದ ಬಂತು, ಹಣದ ಆಮಿಷ ವೊಡ್ಡಿ ಸರಕಾರವನ್ನು ಯಾವ ರೀತಿ ತೆಗೆದರೂ ಎಂಬುದರ ಬಗ್ಗೆಯೂ ಸಂಪೂರ್ಣ ಸಿಬಿಐ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ರಾಜ್ಯದಿಂದ ಆಯ್ಕೆಯಾದ 25 ಜನ ಎಂ.ಪಿಗಳು ಇಂದು ಕೇಂದ್ರದಲ್ಲಿ ಹೈಸ್ಕೂಲ್‍ನ ವಿದ್ಯಾರ್ಥಿಗಳಂತೆ ಇದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ಕುಮಾರಸ್ವಾಮಿ ಯಡಿಯೂರಪ್ಪ ದ್ವೇಷದ ರಾಜಕೀಯ ಮಾಡಿಲ್ಲ ಈಗ ರಾಜ್ಯದಲ್ಲಿ ನಡೆಯುತ್ತಿರುವ ಟೆಂಡರ್ ಕಾಮಗಾರಿಗಳ ಸಹ ತಡೆಯಲಾಗುತ್ತಿದೆ ಎಂದು ಕೇಂದ್ರದ ಬಿಜೆಪಿ ಸರಕಾರವು ದ್ವೇಷದ ರಾಜಕಾರಣ ಮಾಡುತ್ತಿದೆ ಸಿಬಿಐ ಹಾಗೂ ಇಡಿ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಡಿಕೆ ಶಿವಕುಮಾರ್ ರವರ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಿ ಸುಮಾರು 4 ದಿನ ಸುಮಾರು 29 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ ಇನ್ನೂ ಹೆಚ್ಚಿನ ವಿಚಾರಣೆಗೆ ಕಾಲಾವಕಾಶ ಕೋರಿರುವುದು ಸರಿಯಿಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತುಮುಲ್ ಮಾಜಿ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾಗಿ ಡಿ.ಕೆ.ಶಿವಕುಮಾರ್ ಉತ್ತರಿಸಿದ್ದಾರೆ ತನಿಖೆಗೆ ಸಹಕರಿಸಿದ್ದಾರೆ ಅಂತಹ ವ್ಯಕ್ತಿಯನ್ನು ಬಂಧಿಸಿರುವ ಕ್ರಮ ಸರಿಯಿಲ್ಲಾ ಗುಜರಾತ್ ಸರಕಾರದ ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್ ನಲ್ಲಿ ಇಟ್ಟಿದ್ದಾಕ್ಕಾಗಿ ಅವರ ವಿರುದ್ಧ ಬಿಜೆಪಿ ಸರಕಾರವು ದ್ವೇಷದ ರಾಜಕಾರಣಕ್ಕಾಗಿ ಬಂಧಿಸಿರುವುದು ಸರಿಯಿಲ್ಲಾ ಎಂದರು.
ಪಟ್ಟಣದ ಪ್ರಮುಖ ರಸ್ತೆಯಲ್ಲಿ ಪ್ರತಿಭಟನಕಾರರು ಹಾಗೂ ಪ್ರಧಾನಿ ಮೋದಿ ಮತ್ತು ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರವರ ಭಾವಚಿತ್ರಕ್ಕೆ ಬೆಂಕಿಯನ್ನು ಹಚ್ಚಿ ಟೈರ್‍ಗಳನ್ನು ಸುಟ್ಟು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು .ಹಿರಿಯ ಮುಖಂಡ ಬಂದ್ರೇಹಳ್ಳಿ ನಾಗರಾಜಪ್ಪ. ಜೆಡಿಎಸ್ ಮುಖಂಡರಾದ ತುಂಗೋಟಿ ರಾಮಣ್ಣ. ಪುರಸಭಾ ಸದಸ್ಯ ಚಂದ್ರ ಶೇಖರ್ ಬಾಬು. ಟಿ.ಮಂಜುನಾಥ್. ಶಫೀಕ್ ಅಹಮದ್. ಸರದಾರ್. ಮೋಹನ್, ಕೇಬಲ್ ಸುಬ್ಬು ಚೌಡಪ್ಪ, ಶ್ರೀನಿವಾಸ್. ಗುಂಡಗಲ್ಲು ಶಿವಣ್ಣ, ಕಂಭತ್ತನಹಳ್ಳಿ ರಘು, ಶಿವಪ್ಪ ಇನ್ನಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








