ಅಂಗನವಾಡಿ ಕೇಂದ್ರ ಮುಚ್ಚುವ ಹುನ್ನಾರ : ಸರ್ಕಾರದ ವಿರುದ್ಧ ಧರಣಿ

ಚಿತ್ರದುರ್ಗ

     ಸರ್ಕಾರಗಳು ಆಂಗ್ಲ ಭಾಷೆಯ ಕಲಿಕೆಯ ನೆಪದಲ್ಲಿ ಅಂಗನವಾಡಿ ಕೇಂದ್ರಗಳನ್ನು ರದ್ದು ಮಾಡುವ ಹುನ್ನಾರವನ್ನು ನಡೆಸುತ್ತಿದೆ ಇದನ್ನು ಪ್ರತಿಭಟಿಸಿ ಜು.5 ಮತ್ತು 6 ರಂದು ಎರಡು ದಿನಗಳ ಕಾಲ ಹಗಲು –ರಾತ್ರಿ ಧರಣಿಯನ್ನು ರಾಜ್ಯದಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ತಾಲ್ಲೂಕು ಕೇಂದ್ರಗಳಲ್ಲಿ ತಹಶೀಲ್ದಾರ್ ರವರ ಕಛೇರಿ ಮುಂದೆ ನಡೆಸಲಾಗುತ್ತದೆ ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೇಡರೇಷನ್ ಅಧ್ಯಕ್ಷರಾದ ಹೆಚ್.ಕೆ.ರಾಮಚಂದ್ರಪ್ಪ ತಿಳಿಸಿದ್ದಾರೆ.

      ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರು ಕಳೆದ ಹಲವಾರು ವರ್ಷಗಳಿಂದ ಕಡಿಮೆ ಗೌರವಧನಕ್ಕೆ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ ಕಾಲ ಕಾಲಕ್ಕೆ ಹೋರಾಟವನ್ನು ಮಾಡುವುದರ ಮೂಲಕ ಇವರಿಗೆ ನೀಡುವ ಗೌರವಧನವನ್ನು ಹೆಚ್ಚಳ ಮಾಡಲಾಗುತ್ತಿದೆ, ಇದರಿಂದ ಸರ್ಕಾರಕ್ಕೂ ಆದಾಯವಾಗಿದೆ ಜನತೆಗೂ ಸಹಾ ಲಾಭವಾಗಿದೆ ಸರ್ಕಾರದ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಇದೇ ರೀತಿ ಈ ಯೋಜನೆಯ ಲಾಭವನ್ನು ಪಡೆದ ಮಹಿಳೆಯರು ದೇಶಕ್ಕೆ ಆರೋಗ್ಯವಂತರಾದ ಮಕ್ಕಳನ್ನು ನೀಡುತ್ತಾ ದೇಶವನ್ನು ಸಧೃಢವನ್ನಾಗಿ ಮಾಡುತ್ತಿದ್ದಾರೆ ಎಂದರು.

     ಸರ್ಕಾರ ಈಗ ಮಕ್ಕಳಿಗೆ ಆಂಗ್ಲ ಭಾಷೆಯನ್ನು ಕಲಿಸಲು ಮುಂದಾಗಿದೆ ಅದಕ್ಕೆ ಈಗ ನಮ್ಮ ಅಂಗನವಾಡಿಗಳನ್ನು ರದ್ದು ಮಾಡಿ ಅಲ್ಲಿಗೆ ಆಂಗ್ಲ ಶಾಲೆಗಳನ್ನು ಪ್ರಾರಂಭ ಮಾಡಿ ಮಕ್ಕಳಿಗೆ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ಹಾಗೂ ಕಿನ್ನರ್ ಕೇಂದ್ರಗಳನ್ನು ಪ್ರಾರಂಭಕ್ಕೆ ಮುಂದಾಗಿದ್ದು ಇದಕ್ಕಾಗಿ ಬೇರೆ ಸಿಬ್ಬಂದಿಯನ್ನು 10 ತಿಂಗಳ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ ಇದರ ಬದಲಿಗೆ ಸರ್ಕಾರ ಸೌಲಭ್ಯವನ್ನು ನೀಡುವುದರ ಮೂಲಕ ಹಲವಾರು ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯರಾಗಿ, ಸಹಾಯಕಿಯರಾಗಿ ಕೆಲಸ ಮಾಡಿದ ನಮ್ಮವರನ್ನೇ ತೆಗೆದುಕೊಂಡರೆ ಅವರಿಗೂ ಸಹಾ ಜೀವನ ಭದ್ರವಾಗುತ್ತಿದೆ ಆದರೆ ಸರ್ಕಾರ ಇದನ್ನು ಬಿಟ್ಟು ಬೇರೆಯವರನ್ನು ಶಾಲಾಭೀವೃದ್ದಿ ಸಮಿತಿಯಿಂದ ನೇಮಕ ಮಾಡಿಕೊಳ್ಳಲಾಗುತ್ತಿದೆ ಇದರಿಂದ ಅಲ್ಲಿ ಕೆಲಸ ಮಾಡುವವರಿಗೆ ತೊಂದರೆಯಾಗುತ್ತದೆ ಇದರ ಬಗ್ಗೆ ಸರ್ಕಾರ ಆಲೋಚನೆ ಮಾಡಬೇಕಿದೆ ಎಂದು ರಾಮಚಂದ್ರಪ್ಪ ಸರ್ಕಾರವನ್ನು ಒತ್ತಾಯಿಸಿದ್ದಾರೆ.

      ಇದೇ ರೀತಿ ರಾಜ್ಯ ಸರ್ಕಾರ ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರಿಗೆ 50,000 ಸಹಾಯಕಿಯರಿಗೆ 30 ಸಾವಿರ ರೂ.ಗಳನ್ನು ನೀಡುವುದಾಗಿ ತಿಳಿಸಿತ್ತು ಆದರೆ ಇದುವರೆವಿಗೂ ಸುಮಾರು 3000 ಜನ ನಿವೃತ್ತಿಯಾಗಿದ್ದರು ಸಹಾ ಅವರಿಗೆ ಹಣ ಬಂದಿಲ್ಲ ಇದರ ವಿರುದ್ದವೂ ಜು.30 ಮತ್ತು 31 ರಂದು ರಾಜಧಾನಿಯಲ್ಲಿ ಪ್ರತಿಭಟನೆಯನ್ನು ನಡೆಸುವುದಾಗಿ ತಿಳಿಸಿದ ರಾಮಚಂದ್ರಪ್ಪ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಗೋವಾ ಸರ್ಕಾರದ ಮಾದರಿಯಲ್ಲಿ ಸೇವಾ ಅವಧಿಯ ಆಧಾರದ ಮೇಲೆ ಗೌರವಧನವನ್ನು ನೀಡುವಂತೆ ಆಗ್ರಹಿಸಿದರು.

     ಗೋಷ್ಟಿಯಲ್ಲಿ ಕಾರ್ಮಿಕ ಮುಖಂಡರಾದ ಶಿವರುದ್ರಪ್ಪ, ಸುರೇಶ್ ಬಾಬು, ಸತ್ಯಕೀರ್ತಿ, ಸಾವಿತ್ರಮ್ಮ, ಜಮುನಾಬಾಯಿ, ಭಾಗ್ಯಮ್ಮ, ಗಂಗಮ್ಮ ನಿರ್ಮಲ, ರತ್ನಮ್ಮ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap