ರೈತವಿರೋಧಿ ಕಾಯ್ದೆ ವಿರೋಧಿಸಿ ಪ್ರತಿಭಟನೆ

ಕೊರಟಗೆರೆ

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ರೈತ ವಿರೋಧಿ ಭೂ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆಗಳನ್ನು ತಕ್ಷಣ ವಾಪಸ್ ಪಡೆಯುವಂತೆ ಹಾಗೂ ಕೊರೋನಾ ನಿಯಂತ್ರಣದಲ್ಲಿನ ಭ್ರಷ್ಟಾಚಾರ ವಿರುದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡ್ಲಹಳ್ಳಿ ಅಶ್ವತ್ಥನಾರಾಯಣ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.

    ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ರೈತ ವಿರೋಧಿ ಭೂಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿ.ಎಂ.ಸಿ ಕಾಯ್ದೆ, ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡಿಯಿಂದ ಹಿಂದಿನ ಬಹುತೇಕ ಜನಪರ ಕಾಯ್ದೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಉಳುವವನೇ ಭೂಮಿಯ ಒಡೆಯ ಎಂಬುದು ಈಗ ಉಳ್ಳವನೇ ಭೂಮಿಯ ಒಡೆಯ ಎಂಬಂತಾಗಿದೆ.

     ರಾಜ್ಯದಲ್ಲಿ ಕೃಷಿಕರಲ್ಲದವರು ದೊಡ್ಡ-ದೊಡ್ಡ ಕಂಪನಿಗಳು ಕೊಟ್ಯಂತರ ಕೃಷಿಯೇತರ ಆದಾಯವುಳ್ಳ ಶ್ರೀಮಂತರು ದುರ್ಬಲ ವರ್ಗದ ರೈತರ ಕೃಷಿ ಭೂಮಿಯನ್ನು ಖರೀದಿಸಿ ಮತ್ತು ಜಮೀನ್ದಾರಿ ಪದ್ದತಿ ಜಾರಿಗೆ ಬರಲು, ರಿಯಲ್ ಎಸ್ಟೇಟ್ ಉದ್ಯಮ ಗ್ರಾಮೀಣ ಪ್ರದೇಶಗಳಲ್ಲೂ ಪ್ರವೇಶಿಸಲು ಅವಕಾಶ ಮಾಡಿದೆ. ತಕ್ಷಣ ಈ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳಬೇಕು. ರಾಜ್ಯದಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿಗೆ ಪರಿಹಾರ ನೀಡುವಲ್ಲಿ ವಿಫಲವಾಗಿರುವ ಸರ್ಕಾರ ತಕ್ಷಣ ಪರಿಹಾರ ಕಾರ್ಯಕೈಗೊಳ್ಳಬೇಕುಎಂದುಆಗ್ರಹಿಸಿದರು.

    ತಾ.ಪಂ.ಅಧ್ಯಕ್ಷ ಟಿ.ಸಿ.ರಾಮಯ್ಯ ಮಾತನಾಡಿ, ದೇಶದಲ್ಲಿ ಆವರಿಸಿರುವ ಮಹಾಮಾರಿ ಕೋವಿಡ್-19 ವೈರಾಣು ಇಡೀ ಮನುಕುಲವನ್ನೇ ಆತಂಕಕ್ಕೀಡು ಮಾಡಿದೆ. ಭಾರತ ಸೇರಿದಂತೆ ಪ್ರಪಂಚದ ಎಲ್ಲಾ ದೇಶಗಳು ಈ ವೈರಾಣು ವಿರುದ್ದ ಸಮರ ಸಾರಿದ್ದು, ಈ ಮಾರಕ ರೋಗಕ್ಕೆ ರಾಜ್ಯದ ಜನರು ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದರೆ, ರಾಜ್ಯದ ಬಿಜೆಪಿ ಸರ್ಕಾರ ಈ ವಿಷಯದಲ್ಲೂ ಬ್ರಹ್ಮಾಂಡ ಭ್ರಷ್ಟ್ಟಾಚಾರದಲ್ಲಿ ಮುಳುಗಿರುವುದು ದುದೃಷ್ಟಕರ.

     ಕೋವಿಡ್-19 ನಿಯಂತ್ರಿಸಲು ಸರ್ಕಾರ ಖರೀದಿಸಿರುವ ವೆಂಟಿಲೇಟರ್ಸ್, ಪಿ.ಪಿ.ಇ. ಕಿಟ್, 500 ಮಿ.ಲೀ.ಹ್ಯಾಂಡ್ ಸ್ಯಾನಿಟೈಜರ್, ಆರ್.ಟಿ.ಟಿ.ಸಿ.ಆರ್ ಮತ್ತು ಆರ್.ಎನ್.ಎ. ಕಿಟ್, ಎನ್.-95 ಮಾಸ್ಕ್, ಆ್ಯಕ್ಸಿಜನ್ ಉಪಕರಣ, ಥರ್ಮಲ್ ಸ್ಕ್ಯಾನರ್, ಆ್ಯಕ್ಸಿಜನ್ ಸಿಲಿಂಡರ್  ಸೇರಿದಂತೆ ವಿವಿಧ ಸಾಮಗ್ರಿಗಳಲ್ಲಿ ಲಾಕ್‍ಡೌನ್ ಸಂದರ್ಭದಲಿ 4167 ಕೋಟಿ ರೂ.ಗಳ ವ್ಯಾಪಕ ಭ್ರಷ್ಟಾಚಾರ ನಡೆಸಿದೆ. ಈ ಬಗ್ಗೆ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಪಕ್ಷದ ಪರವಾಗಿ ಒತ್ತಾಯಿಸುತ್ತಿರುವುದಾಗಿ ತಿಳಿಸಿದರು. ಪ್ರತಿಭಟನೆಯಲ್ಲಿ ತಾಪಂ. ಉಪಾಧ್ಯಕ್ಷ ವೆಂಕಟಪ್ಪ, ಪ.ಪಂ.ಸದಸ್ಯ ಕೆ.ಆರ್.ಓಬಳರಾಜು, ನರಸಿಂಹಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್‍ಕುಮಾರ್, ಮುಖಂಡರುಗಳಾದ ಎಲ್.ರಾಜಣ್ಣ, ಮೈಲಾರಪ್ಪ, ಡಿ.ನಾಗಭೂಷಣ್, ಕೆ.ವಿ.ಮಂಜುನಾಥ್, ಆಟೋಕುಮಾರ್, ಚಿಕ್ಕರಂಗಯ್ಯ, ಕೆ.ಎಲ್.ಮಂಜು, ಉಮಾಶಂಕರ್, ಅರವಿಂದ್, ಏರ್‍ಟೆಲ್ ಗೋಪಿ, ದೊಡ್ಡಯ್ಯ ಸೇರಿದಂತೆ ಇನ್ನಿತರ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap