ಗುತ್ತಿಗೆದಾರನ ಕೊಲೆ ಪ್ರಕರಣ;ಜ.5ಕ್ಕೆ ಪ್ರತಿಭಟನೆ

ಚಿತ್ರದುರ್ಗ.

         ಭೋವಿ ಜನಾಂಗದ ರಕ್ಷಣೆಗಾಗಿ ಕಂಟ್ರಾಕ್ಟ್ ರಾಜಣ್ಣನ ಕೊಲೆ ಆರೋಪಗಳಿಗೆ ಶೀಘ್ರ ಶಿಕ್ಷೆಗಾಗಿ ಒತ್ತಾಯಿಸಿ ಜನವರಿ 04 ರಂದು ಪ್ರತಿಭಟನೆ ನಡೆಸಲು ಭೋವಿ ಗುರು ಪೀಠಾಧ್ಯಕ್ಷರಾದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ಕರೆನೀಡಿದರು.

         ನಗರದ ಹೊರವಲಯದಲ್ಲಿರುವ ಭೋವಿ ಗುರುಪೀಠದಲ್ಲಿ ಭಾನುವಾರು ಜಿಲ್ಲಾ ಭೋವಿಸಂಘದಿಂದ ಆಯೋಜಿಸಿದ್ದ ಭೋವಿ ಜನಾಂಗದ ಸಮಸ್ಯೆಗಳು ಮತ್ತು ಜಯಂತಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದ ಬಿಜಾಪುರ ಜಿಲ್ಲೆಯಲ್ಲಿ ವಕೀಲರಾದ ದತ್ತುರವರನ್ನು ಕೊಲೆಗೈಯಲಾಯಿತು. ಕೋಲಾರ ಜಿಲ್ಲೆಯಲ್ಲಿ ಸಬ್‍ಇನ್ಸ್‍ಪೆಕ್ಟರ್‍ರವರು ಜನಾಂಗವನ್ನು ನಿಂಧಿಸಿ ಥಳ್ಳಿಸಿದ್ದಾರೆ. ಇತ್ತೀಚಿಗೆ ಕಂಟ್ರಾಕ್ಟರ್ ರಾಜಣ್ಣನವರನ್ನು ಕೊಲೆಮಾಡಲಾಗಿದೆ. ಹೀಗೆ ನಾನಾ ಜಿಲ್ಲೆಗಳಲ್ಲಿ ಭೋವಿ ಜನಾಂಗದ ಮೇಲೆ ದೌರ್ಜನ್ಯಗಳು ನಡೆಯುತ್ತಿರುವುದನ್ನು ಖಂಡಿಸಬೇಕಾಗಿದೆ ಎಂದರು.

         ನಮ್ಮ ಜಿಲ್ಲೆಯಲ್ಲಿ ರಾಜಣ್ಣನವರ ಕೊಲೆಯಾಗಿರುವುದರಿಂದ ಕೊಲೆ ಮಾಡಿದವರಿಗೆ ಬೇಗ ಶಿಕ್ಷೆಯಾಗಲಿ ಎಂಬ ಹೋರಾಟವನ್ನು ಬೇರೆ ಜಿಲ್ಲೆಗಿಂತ ನಮ್ಮ ಜಿಲ್ಲೆಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಹೋರಾಟಮಾಡಬೇಕಾಗಿದೆ. ರಾಜಣ್ಣನ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ತನಿಖೆ ಬೇಗಮುಗಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾದರೆ ಮಾತ್ರ ಸಾಧ್ಯ ಎಂದು ತಿಳಿಸಿದರು.

      ಭೋವಿ ಜನಾಂಗದ ಮೇಲೆ ರಾಜ್ಯದಲ್ಲಿ ನಡೆಯುತ್ತಿರುವ ಹಲ್ಲೆಗಳನ್ನು ರಕ್ಷಣಾ ಇಲಾಖೆ ಮುಂಜಾಗ್ರತೆಯಿಂದ ಕ್ರಮಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳದೇ ಹೋದರೆ ಜನಾಂಗದವರ ಮೇಲೆ ನಾನಾ ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ ದೌರ್ಜನ್ಯ ಮತ್ತು ಕೊಲೆಗಳಂತಹ ಘಟನೆಗಳು ನಿರಂತರವಾಗಿ ಮರುಕಳಿಸುತ್ತಿರುತ್ತವೆ. ರಕ್ಷಣಾ ಇಲಾಖೆ ತಕ್ಷಣ ಇತ್ತ ಗಮನಹರಿಸಿ ಭೋವಿ ಜನಾಂಗಕ್ಕೆ ರಕ್ಷಣೆ ನೀಡಬೇಕಾಗಿ ಪ್ರತಿಭಟನೆ ಮೂಲಕ ಒತ್ತಾಯಿಸಬೇಕೆಂದು ಹೇಳಿದರು.

        ಜಿಲ್ಲಾ ಭೋವಿ ಸಂಘದ ಅಧ್ಯಕ್ಷರಾದ ಚಿಕ್ಕಂದವಾಡಿ ತಿಪ್ಪೇಸ್ವಾಮಿ ಮಾತನಾಡಿ, ಭೋವಿ ಜನಾಂಗ ದೇಶದಲ್ಲಿ ಅಲ್ಪಸಂಖ್ಯಾತರಿದ್ದಂತೆ ನಮ್ಮ ರಕ್ಷಣೆಗೆ ಎಲ್ಲರೂ ಒಗ್ಗಟ್ಟಾಗಿ ಹೋರಾಟಮಾಡಬೇಕು. ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಭೋವಿ ಜನಾಂಗ ಸಮಸ್ಯೆಗೆ ಸ್ಪಂಧಿಸಿ ಪ್ರತಿಭಟಿಸದಿದ್ದರೆ ದುರುಂತ ತಪ್ಪಿದ್ದಲ್ಲ ಎಂದು ವಿಷಾಧಿಸಿದರು.

         ಪ್ರತಿವರ್ಷದಂತೆ ಸಿದ್ಧರಾಮೇಶ್ವರ ಜಯಂತಿ ಮತ್ತು ದಿವಂಗತ ಮಂಜರಿ ಹನುಮಂತಪ್ಪನವರ ಸ್ವರ್ಣೋತ್ಸವವನ್ನು ಫೆಬ್ರವರಿ 05ರಂದು ಆಚರಿಸಲು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಿದರು. ಪೂರ್ವಭಾವಿ ಸಭೆಯಲ್ಲಿ ಮಾಜಿ ಸಂಸದ ಜನಾರ್ಧನಸ್ವಾಮಿ, ಉದ್ಯಮಿ ಹಾಗೂ ಓ.ಸಿ.ಸಿ.ಐ. ರಾಜ್ಯಾಧ್ಯಕ್ಷ ಆನಂದಪ್ಪ, ಜಿಲ್ಲಾ ಸಂಘದ ನಿರ್ದೇಶಕರಾದ ಡಿ.ಸಿ.ಮೋಹನ್, ಹೆಚ್.ನಟೇಶ್, ಹೊಸದುರ್ಗ ತಾಲ್ಲೂಕು ಅಧ್ಯಕ್ಷರಾದ ಜಿ.ಚಂದ್ರಭೋವಿ, ಹಿರಿಯೂರಿನ ಚಂದ್ರಶೇಖರ್, ಅನ್ನೇಹಾಳ್ ತಿಪ್ಪೇಸ್ವಾಮಿ, ಮೊಳಕಾಲ್ಮೂರು ಬಸವರಾಜ್, ಉಮೇಶ್, ಚಂದ್ರಶೇಖರ್ ಸೇರಿದಂತೆ ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap