ತುರುವೇಕೆರೆ:
ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಚೀಕಲಪರ್ವಿ ವೃತ್ತದ ಗ್ರಾಮಲೆಕ್ಕಿಗ ಸಾಹೇಬ ಪಟೇಲ ಅವರು ಕರ್ತವ್ಯನಿರತ ವೇಳೆಯಲ್ಲಿ ಅಕ್ರಮ ಮರಳು ದಂದೆಕೋರರು ಲಾರಿ ಹತ್ತಿಸಿ ಹತ್ಯೆ ಮಾಡಿರುವುದನ್ನು ಖಂಡಿಸಿ ತಾಲ್ಲೂಕು ಕಂದಾಯ ಇಲಾಖಾ ನೌಕರರು ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು.
ಕರ್ನಾಟಕ ರಾಜ್ಯ ಗ್ರಾಮಲೆಕ್ಕಿಗರ ಸಂಘದ ಅಧ್ಯಕ್ಷರಾದ ನವೀನ್‍ಕುಮಾರ್ ಮಾತನಾಡಿ ಕಂದಾಯ ನೌಕರನೊಬ್ಬ ಸರ್ಕಾರಿ ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಅಕ್ರಮ ಮರಳು ಸಾಕಾಣಿಕೆದಾರರನ್ನು ತಡೆಗಟ್ಟಿದ ಸಂಧರ್ಭದಲ್ಲಿ ಸದರಿ ನೌಕರನ ಮೇಲೆ ಲಾರಿ ಹರಿಸಿ ಪ್ರಾಣ ತೆಗೆದಿರುತ್ತಾರೆ. ಈ ಕೃತ್ಯದ ಹಿಂದೆ ಹಲವು ಸಂಶಯಗಳು ಇರುವುದರಿಂದ ಸಿಓಡಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು.
ಹಾಗು ಕರ್ತವ್ಯ ನಿರ್ವಹಿಸುವಾಗ ಪೋಲೀಸ್ ಇಲಾಖೆಯಲ್ಲಿ ವಿಶೇಷವಾಗಿ ಹೆಚ್ಚಿನ ಪರಿಹಾರ ನೀಡುವ ವ್ಯವಸ್ಥೆಯಿದ್ದು ಅದೇ ಮಾದರಿಯಲ್ಲಿ ಮೃತರ ಕುಟುಂಬದವರಿಗೆ ಪರಿಹಾರ ನೀಡಬೇಕು ಎಂದರು.
ರಾಜ್ಯದಲ್ಲಿ ಅಕ್ರಮ ಮರಳು ದಂಧಕೋರರು ಇದೇ ಮದರಿಯಲ್ಲಿ ಹಲವು ಪ್ರಕರಣಗಳಲ್ಲಿ ಕಂದಾಯ ನೌಕರರ ವಿರುದ್ದ ಅನೇಕ ದೌರ್ಜನ್ಯಗಳನ್ನು ಎಸಗಿರುತ್ತಾರೆ. ಈ ಕೃತ್ಯಗಳಿಂದ ನೌಕರರು ನಿರ್ಭೀತಿಯಿಂದ ಕೆಲಸ ನಿರ್ವಹಿಸಲು ಕಷ್ಟವಾಗುತ್ತಿದೆ. ಈ ಹಿನ್ನಲೆಯಲ್ಲಿ ಕಂದಯ ಇಲಾಕೆಯ ವ್ಯಾಪ್ತಿಗೆ ಒಳಪಡದ ಅಕ್ರಮ ಮರಳು ತಯಾರಿಕೆಯನ್ನು ನಿಷೇದಿಸುವ ಬಗ್ಗೆ ನಿಯಮಗಳನ್ನು ರೂಪಿಸಿ ಕಂದಾಯ ಅಧಿಕಾರಿ ಮತ್ತು ನೌಕರರನ್ನು ಈ ಕೆಲಸದಿಂದ ವಿಮುಕ್ತಿಗೊಳಿಸಲು ಕಂದಾಯ ಸಚಿವರು ಕೂಡಲೆ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿ ತಾಲ್ಲೂಕು ದಂಡಾಧಿಕಾರಿ ನಾಗರಾಜು ಅವರ ಮುಖಾಂತರ ಮನವಿ ಸಲ್ಲಿಸಿದರು.
ಈ ಸಂಧರ್ಬದಲ್ಲಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಂಗನಾಥ್, ಕಂದಾಯ ಇಲಾಖೆ ಕಾರ್ಯದರ್ಶಿ ಶ್ರೀನಿವಾಸ್, ನಿರ್ದೇಶಕ ಜಯಪ್ರಕಾಶ್, ರಾಜಸ್ವ ನಿರೀಕ್ಷಕ ಶಿವಕುಮಾರ್, ರಂಗಸ್ವಾಮಿ, ಪುಟ್ಟಣ್ಣಶೆಟ್ಟಿ, ಗಂಗಾದರಯ್ಯ, ಚುನಾವಣಾಧಿಕಾರಿ ಕಾಂತರಾಜು, ವೀಣಾ, ಶ್ವೇತಾ, ತೇಜಸ್ವಿನಿ, ಮಂಜುಳಮ್ಮ ಸೇರಿದಂತೆ ಅನೇಕ ಕಂದಾಯ ಇಲಾಖಾ ನೌಕರರು ಪಾಲ್ಗೋಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
