ತಿಪಟೂರು :
ರಾಯಚೂರು ಜಿಲ್ಲೆ ಮಾನ್ವಿ ತಾಲೋಕಿನಲ್ಲಿ ಕರ್ತವ್ಯ ನಿರತರಾಗಿದ್ದ ಗ್ರಾಮ ಲೆಕ್ಕಾಧಿಕಾರಿಗಳು ಕರ್ತವ್ಯ ನಿರತರಾಗಿದ್ದ ಅವಧಿಯಲ್ಲಿ ಅಕ್ರಮ ಮರಳು ಸಾಗಾಣಿಕೆದಾರರು ಲಾರಿ ಹತ್ತಿಸುವ ಮುಖಾಂತರ ಹತ್ಯೆಮಾಡಿರುವುದನ್ನು ಖಂಡಿಸಿ ನಗರದಲ್ಲಿ ಪ್ರತಿಭಟನೆ ನೆಡೆಸಲಾಗಿತ್ತು,
ಪ್ರತಿಭಟನಾ ವೇಳೆ ಕಂದಾಯ ಇಲಾಖೆ ನೌಕರರ ಸಂಘದ ಅದ್ಯಕ್ಷರಾದ ಉಪತಹಸೀಲ್ದಾರ್ ರವಿಕುಮಾರ್ ಮಾತನಾಡಿ ದಿನಾಂಕ 22-12-2018 ರಂದು ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೋಕು ಚೀಕಲಪರ್ವಿ ವೃತ್ತದ ಗ್ರಾಮಲೆಕ್ಕಧಿಕಾರಿಗಳಾದ ಶ್ರೀ ಸಾಹೇಬ ಪಾಟೀಲ ರವರು ಸರ್ಕಾರಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಅಕ್ರಮ ಮರಳು ದಂದೆಕೋರರು ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದವವರನ್ನು ತಡೆಗಟ್ಟಿದಾಗ ಸದರಿ ನೌಕರನ ಮೇಲೆ ಲಾರಿ ಹತ್ತಿಸಿ ಪ್ರಾಣವನ್ನು ತೆಗೆದಿರುತ್ತಾರೆ, ಈ ಕೃತ್ಯವನ್ನು ಸಮಸ್ತ ಕಂದಾಯ ಇಲಾಖೆ ನೌಕರರು ಖಂಡಿಸಿರುತ್ತಾರೆ.
ಈ ಸಾವಿನ ಹಿಂದೆ ಹಲವು ಸಂಶಯಗಳಿರುವುದರಿಂದ ಸಿ.ಓ.ಡಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ಕೊಡಿಸಬೇಕೆಂದು ಹಾಗು ಕರ್ತವ್ಯ ನಿರ್ವಹಿಸುತ್ತಿರುವಾಗ ಪೋಲಿಸ್ ಇಲಾಖೆಯಲ್ಲಿ ವಿಶೇಷವಾಗಿ ಹೆಚ್ಚಿನ ಪರಿಹಾರವನ್ನು ನೀಡುವ ವ್ಯವಸ್ಥೆ ಇದ್ದು ಅದೇ ಮಾದರಿಯಲ್ಲಿ ಮೃತರ ಕುಟುಂಬಕ್ಕೆ ಪರಿಹಾರವನ್ನು ನೀಡಬೇಕೆಂದು ಈ ಮೂಲಕ ಒತ್ತಾಯಿಸಿದರು.
ಪ್ರತಿಭಟನೆ ವೇಳೆ ತಾಲ್ಲೂಕು ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ರವಿಕುಮಾರ್, ಗ್ರಾಮ ಲೆಕ್ಕಾಧಿಕಾರ ಸಂಘದ ಅಧ್ಯಕ್ಷ ಕಿರಣ್ ಕುಮಾರ್, ಗ್ರಾಮ ಸಹಾಯಕ ಸಂಘದ ಅಧ್ಯಕ್ಷ ನಾಗರಾಜು, ಗ್ರಾಮ ಸಹಾಯಕರಾದ ರವಿಶಂಕರ್, ಮೋಹನ್ ಕುಮಾರ್, ಆರ್.ಐ. ಚಿಕ್ಕಣ್ಣ, ಆರ್.ಐ ಸ್ವಾಮಿ, ದೀಪಕ್ ಭೂದಾಳ್ ಹೇಮಂತ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ