ಚಿತ್ರದುರ್ಗ
ದಾವಣಗೆರೆ ವಿಶ್ವವಿದ್ಯಾಲಯ ಪದವಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಈ ಬಾರಿ ಸಿ,ಬಿ.ಸಿ.ಎಸ್ ಸ್ಕೀಂನಲ್ಲಿ ಹೊಸ ನಿಯಮಗಳು ಜಾರಿಗೆ ತಂದಿದ್ದು ಈ ನಿಯಮವನ್ನು ವಿರೋಧಿಸಿ ಚಂದ್ರವಳ್ಳಿ ಎಸ್ ಜೆ ಎಂ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕಾಲೇಜು ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು
ನಂತರ ವಿದ್ಯಾರ್ಥಿಗಳು ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹೊಸ ನಿಯಮ ಪದ್ದತಿ ಜಾರಿ ಮಾಡಿದರೇ ವಿಧ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿ ಮನೆಯಲ್ಲಿ ಇರಬೇಕಾಗುತ್ತದೆ ಈ ನಿಯಮ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿದೆ ಕೂಡಲೇ ಹಳೇ ಪದ್ದತಿ ಜಾರಿಗೆ ಬರಬೇಕು ಕೂಡಲೇ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಬೇಕು ಕುವೆಂಪು ವಿಶ್ವವಿದ್ಯಾಲಯ ನಿರ್ಲಕ್ಷಿಸಿದರೆ ಶುಕ್ರವಾರ ಜಿಲ್ಲಾದ್ಯಂತ ಕಾಲೇಜ್ ಬಂದ್ ಮಾಡಿ ಹೋರಾಟ ಮಾಡಲಾಗುವುದೆಂದು ಮನವಿಯಲ್ಲಿ ಓತ್ತಾಯಿಸಿದ್ದಾರೆ. ಪ್ರತಿಭಟನೆ ನೇತೃತ್ವವನ್ನು ವಿದ್ಯಾರ್ಥಿ ಮುಖಂಡರಾದ ಮೋಹನ್ ಜೌನವಿ ಹಾಗೂ ಪೂಜಾ ವಹಿಸಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ