ಟಿಪ್ಪು ಜಯಂತಿ ಆಚರಣೆಗೆ ವಿರೋಧ

ಚಿತ್ರದುರ್ಗ:

    ರಾಜ್ಯ ಸರ್ಕಾರ ನ.10 ರಂದು ಟಿಪ್ಪುಜಯಂತಿಯನ್ನು ಯಾವುದೇ ಕಾರಣಕ್ಕೂ ಆಚರಿಸಬಾರದೆಂದು ವಿಶ್ವಹಿಂದುಪರಿಷತ್ ಭಜರಂಗದಳದ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಸುರೇಶ್‍ಗೆ ಮನವಿ ಸಲ್ಲಿಸಿದರು.

    ಕೇವಲ ಒಂದು ಕೋಮಿನವರ ಮತಗಳನ್ನು ಸೆಳೆಯಲು ಕಾಂಗ್ರೆಸ್ ಮತ್ತು ಜೆಡಿಎಸ್. ಟಿಪ್ಪುಜಯಂತಿಯನ್ನು ಮಾಡಿಯೇ ತೀರುತ್ತೇವೆ. ಯಾರಿದಂದಲೂ ತಡೆಯಲು ಆಗುವುದಿಲ್ಲ ಎಂದು ಹಠ ಹಿಡಿದಿರುವುದನ್ನು ತೀವ್ರವಾಗಿ ಖಂಡಿಸಿದ ಪ್ರತಿಭಟನಾಕಾರರು ಟಿಪ್ಪು ಒಬ್ಬ ಮತಾಂಧ. ಕನ್ನಡ ಪ್ರೇಮಿಯಾಗಿರಲಿಲ್ಲ. ಅನೇಕ ಹಿಂದು ಕುಟುಂಬಗಳನ್ನು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿದ್ದಾನೆ.

       ಕೇರಳ ಮತ್ತು ಕರ್ನಾಟಕ ರಾಜ್ಯದಲ್ಲಿ ಎಂಟು ಸಾವಿರಕ್ಕೂ ಹೆಚ್ಚು ಹಿಂದು ದೇವಾಲಯಗಳನ್ನು ಭಗ್ನಗೊಳಿಸಿದ್ದಾನೆ. ಚಿತ್ರದುರ್ಗದ ಮದಕರಿನಾಯಕನನ್ನು ಮೋಸದಿಂದ ಸೆರೆಹಿಡಿದು ಹತ್ಯೆಮಾಡಿದ ಟಿಪ್ಪುಜಯಂತಿ ಆಚರಿಸುತ್ತಿರುವುದು ಯಾರನ್ನು ಮೆಚ್ಚಿಸಲಿಕ್ಕಾಗಿ ಎಂದು ಪ್ರಶ್ನಿಸಿದರು.

      ಟಿಪ್ಪು ಸ್ವಾತಂತ್ರ ಹೋರಾಟಗಾರ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಶ್ರೀರಂಗಪಟ್ಟಣದಲ್ಲಿ ಆತ ಕೆತ್ತಿಸಿರುವ ಶಾಸನ ಹಿಂದು ವಿರೋಧಿ ಎಂಬುದನ್ನು ಸಾರಿ ಹೇಳುತ್ತಿದೆ. ಕಳೆದ ಬಾರಿಯೇ ಟಿಪ್ಪುಜಯಂತಿಯಲ್ಲಿ ರಾಜ್ಯದ ಕೆಲವೆಡೆ ಕೋಮುಗಲಭೆಗಳು ನಡೆದಿದೆ. ಇದರಿಂದ ರಾಜ್ಯದಲ್ಲಿ ಶಾಂತಿ ಭಂಗವಾಗಲಿದೆ ಎನ್ನುವುದನ್ನು ರಾಜ್ಯ ಸಮ್ಮಿಶ್ರ ಸರ್ಕಾರ ಮನವರಿಕೆ ಮಾಡಿಕೊಂಡು ಟಿಪ್ಪುಜಯಂತಿಯನ್ನು ಕೈಬಿಡಬೇಕೆಂದು ವಿಶ್ವಹಿಂದು ಪರಿಷತ್ ಭಜರಂಗದಳದ ಕಾರ್ಯಕರ್ತರು ಆಗ್ರಹಿಸಿದರು.

      ಸೈಟ್‍ಬಾಬಣ್ಣ,ಭಜರಂಗದಳದ ಜಿಲ್ಲಾ ಸಂಚಾಲಕ ಸಂದೀಪ್, ಪಿ.ರುದ್ರೇಶ್, ವಿಠಲ್, ಬಾಬಣ್ಣ, ಚಂದ್ರು, ಹೇಮಂತ್ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link