ತುಮಕೂರು
ಗ್ರಾಮಾಂತರ ಕ್ಷೇತ್ರದ ಶಾಸಕ ಡಿ,ಸಿ ಗೌರಿಶಂಕರ ಬೆಂಬಲಿಗರು ಬಿಜೆಪಿ ಮಹಿಳೆಯರನ್ನು ಕರೆದುಕೊಂಡು ಗೋವಾಗೆ ಹನಿಮೂನಿಗೆ ಹೋಗುವುದಾಗಿ ಫೇಸ್ಬುಕ್‍ನಲ್ಲಿ ಕಮೆಂಟ್ ಮಾಡಿರುವುದನ್ನು ಖಂಡಿಸಿ ಶಾಸಕ ಡಿ,ಸಿ,ಗೌರಿಶಂಕರ ವಿರುದ್ದ ಮತ್ತು ಅವರ ಸಾಮಾಜಿಕ ಜಾಲತಾಣದ ಸಿಬ್ಬಂದಿ ವಿರುದ್ದ ಮಹಿಳಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಜಿ,ಪಂ ಸದಸ್ಯೆ ಅನಿತಾ ಸಿದ್ದೇಗೌಡ ತಿಳಿಸಿದರು.
ಇಂದು ಗೂಳೂರು ಹೋಬಳಿ ಡಿ ಕೊರಟಗೆರೆ ಗ್ರಾಮದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ರಸ್ತೆ ತಡೆ ಮಾಡಿಚಪ್ಪಲಿ ಪೊರಕೆ ಹಿಡಿದು ಪ್ರತಿಭಟನೆಯ ನೇತ್ರøತ್ವ ವಹಿಸಿ ಅನಿತಾಸಿದ್ದೇಗೌಡ ಮಾತನಾಡಿದರು,
ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ತೀವ್ರ ಬರಗಾಲ ಇರುವ ಹಿನ್ನೆಲೆಯಲ್ಲಿ ಹಾಲಿ ಶಾಸಕರು ಮೋಜು ಮಸ್ತಿಗಾಗಿ ವಿದೇಶಿ ಪ್ರವಾಸಕ್ಕಾಗಿಸಿಂಗಾಪುರಕ್ಕೆ ಹೋಗಿರುವ ಬಗ್ಗೆ ಸುರೇಶಗೌಡರ ಪ್ಯಾನ್ ಪೇಜಿನಲ್ಲಿ ನಮ್ಮ ಕಾರ್ಯಕರ್ತರು ಪೋಸ್ಟು ಮಾಡಿರುವುದು ತಪ್ಪೇನು? ಹಾಲಿ ಶಾಸಕರಿಗೆ ಬರಗಾಲ ಕಾಣದೆ ಮೋಜು ಮಸ್ತಿಗಾಗಿ ಸಿಂಗಾಪುರಕ್ಕೆ ಹೋಗಿರುವುದು ಎಷ್ಟು? ಸರಿ ಇದನ್ನು ಕೇಳಿದ ನಮ್ಮ ಪಕ್ಷದ ಕಾರ್ಯಕರ್ತರಿಗೆ ಈಗೆಲ್ಲ ಅವಹೇಳನಾಕಾರಿಯಾಗಿ ಮಾತನಾಡಿರುವುದು ಖಂಡನೀಯ, ಗೌರಿಶಂಕರ ಅವರು ಜೆಡಿಎಸ್ ಕಾರ್ಯಕರ್ತರಿಗೆ ಮತ್ತು ಅವರ ಬೆಂಬಲಿಗರಿಗೆ ಇದೇನಾ ಕಲಿಸಿರುವುದು. ಅವರ ಮನೆಯಲ್ಲಿ ಹೆಣ್ಣು ಮಕ್ಕಳು ಇಲ್ವಾ?ಬಾಯಿಗೆ ಬಂದ ಹಾಗೆ ಮನಸಿಗೆ ತೋಚಿತ ರೀತಿಯಲ್ಲಿ ಹಿಂದೂ ಹೆಣ್ಣು ಮಕ್ಕಳ ಬಿಜೆಪಿ ಕಾರ್ಯಕರ್ತರ ಬಗ್ಗೆ ಮಾತನಾಡುವ ರೀತಿ ನೀತಿ ಇದೆನಾ ಇದ್ಯಾವ ಸಂಸ್ಕತಿ ಎಂದು ಜಿ,ಪಂ ಸದಸ್ಯೆ ಅನಿತಾ ಸಿದ್ದೇಗೌಡ ಪ್ರಶ್ನಿಸಿದರು,
ಹಿಂದೂ ಹೆಣ್ಣು ಮಕ್ಕಳ ಬಗ್ಗೆ ಅವಹೇಳನವಾಗಿ ಪೇಸ್ಬುಕ್ ನಲ್ಲಿ ಕಮೆಂಟು ಮಾಡಿರುವ ಕಿಡಿಗೇಡಿಗಳನ್ನು ಬಂದಿಸಿ ಗಡಿಪಾರು ಮಾಡುವಂತೆ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಕಲಾವತಿ ಆಗ್ರಹಿಸಿದರು,
ಇವರ ಮನೆ ಹೆಣ್ಣು ಮಕ್ಕಳನ್ನು ಕರೆದುಕೊಂಡು ಗೋವಾಗೆ ಹೋಗುವ ಯೋಗ್ಯತೆ ಇಲ್ಲದೆ ಇರುವ ಇವರುಗಳು ಬೇರೆಯವರ ಹೆಣ್ಣುಮಕ್ಕಳ ಬಗ್ಗೆ ಮಾತನಾಡಿದರೆ ನಾಲಿಗೆ ಕತ್ತರಿಸುವುದಾಗಿ ನಾಗವಲ್ಲಿ ಗ್ರಾ,ಪಂ ಅಧ್ಯಕ್ಷರಾದ ಲಕ್ಮೀದೇವಮ್ಮ ಕಿಡಿಕಾರಿದರು,
ಹಿಂದೂ ಸಮಾಜಕ್ಕೆ ಅಪಮಾನ
ಹಿಂದೂ ಹೆಣ್ಣು ಮಕ್ಕಳಿಗೆ ಅಪಮಾನ ಮಾಡಿರುವುದು ಅಲ್ಲದೆ ಅವಮಾನ ಮಾಡಿದ್ದಾರೆ, ಶಾಸಕ ಡಿ,ಸಿ ಗೌರಿಶಂಕರ ಮತ್ತು ಅವರ ಬೆಂಬಲಿಗರಿಂದ ಗ್ರಾಮಾಂತರ ಕ್ಷೇತ್ರದ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಾಗಿದೆ, ನಮಗೆ ಸೂಕ್ತ ರಕ್ಷಣೆ ನೀಡಬೇಕು ನಮ್ಮ ಕ್ಷೇತ್ರದ ಹೆಣ್ಣು ಮಕ್ಕಳಿಗೆ ಏನಾದರೂ ಆದರೆ ಶಾಸಕ ಡಿ,ಸಿ ಗೌರಿಶಂಕರ ಮತ್ತು ಜೆಡಿಎಸ್ ಬೆಂಬಲಿಗರೇ ಕಾರಣರಾಗುತ್ತಾರೆ ಎಂದು ಜಿ,ಪಂ ಸದಸ್ಯ ವೈ,ಎಚ್ ಹುಚ್ಚಯ್ಯ ತಿಳಿಸಿದರು,
ಜೆಡಿಎಸ್ ಬೆಂಬಲಿಗರಿಂದ ವರ ಹೇಳಿಕೆಗಳು ಕಮೆಂಟುಗಳನ್ನು ನೋಡಿದರೆ ಯಾವುದೇ ಸಮಯದಲ್ಲಿ ನಮ್ಮ ಕ್ಷೇತ್ರದ ಹೆಣ್ಣು ಮಕ್ಕಳಿಗೆಏನು ಬೇಕಾದರೂಆಗಬಹುದಾಗಿದೆ, ಆದ್ದರಿಂದ ಹಿಂದೂ ಸಮಾಜದ ಹೆಣ್ಣು ಮಕ್ಕಳ ಬಗ್ಗೆ ಮಾತನಾಡಿರುವವರ ವಿರುದ್ದ (ಪಟ್ಟಿ ಠಾಣೆಗೆ ನೀಡಲಾಗಿದೆ,) ಗೂಂಡಾಕಾಯ್ದೆ ಮತ್ತು ಪೋಕ್ಸೋ ಕಾಯ್ದೆಯಡಿ ಇವರನ್ನು ಬಂದಿಸಬೇಕು ಹಾಗು ಗಡಿಪಾರು ಮಾಡಬೇಕು ಎಂದು ಬಿಜೆಪಿ ಮುಖಂಡ ಸಾಸಲು ಮೂರ್ತಿ ಒತ್ತಾಯಿಸಿದರು,
ಒಬ್ಬ ಮುಸ್ಲಿಂ ಹುಡುಗ ಇಡೀ ಹಿಂದೂ ಸಮಾಜದ ನನ್ನೆಲ್ಲ ಅಕ್ಕ ತಂಗಿಯರ ಬಗ್ಗೆ ಮಾತನಾಡಿರುವ ಶಫಿ ಸೂಪಿ ಎಂಬುವವನ್ನು ಈ ಕೂಡಲೇ 24 ಗಂಟೆ ಒಳಗೆ ಬಂದಿಸದೇ ಇಲ್ಲದೇ ಇದ್ದಲ್ಲಿ ನಿಮ್ಮ ಪೋಲೀಸ್ ಠಾಣೆ ಮುಂದೆ ಪ್ರತಿಭಟನೆ ಮಾಡುವುದಾಗಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿದ್ದೇಗೌಡ ಎಚ್ಚರಿಕೆ ನೀಡಿದರು, ಪೋಲೀಸರು ಹಾಲಿ ಶಾಸಕರಿಗೆ ಶಾಮೀಲಾಗಿ ಪೋಲಿಸ್ ಸ್ಟೇಷನ್ನಿನಲ್ಲಿ ಬೇಲ್ ನೀಡಿ ಹೊರಗೆ ಕಳಿಸಿದ್ದೇ ಆದಲ್ಲಿ ನಿಮ್ಮಗಳ ವಿರುದ್ದ ಕೂಡಾ ಐಜಿ ನೀಲಮಣಿ ಮೇಡಂ ಅವರಿಗೆ ದೂರು ನಿಡಲಾಗುವುದು ಎಂದು ಈ ಮೂಲಕ ಸ್ಥಳಿಯ ಪೋಲೀಸರಿಗೂ ಕೂಡಾ ಸಿದ್ದೇಗೌಡ ಎಚ್ಚರಿಕೆ ನೀಡಿದರು,