ಬಸ್ ಪ್ರಯಣದ ದರ ಹೆಚ್ಚಳಕ್ಕೆ ವಿರೋಧ

ಚಿತ್ರದುರ್ಗ:

   ಚಿತ್ರದುರ್ಗದಿಂದ ಬೆಂಗಳೂರಿಗೆ ಸಂಚರಿಸುವ ಖಾಸಗಿ ಹಾಗೂ ವಿ.ಆರ್.ಎಲ್.ಸಂಸ್ಥೆಯ ಬಸ್‌ಗಳು ಹಬ್ಬ ಹರಿದಿನಗಳಲ್ಲಿ ದಿಢೀರನೆ ಪ್ರಯಾಣ ದರವನ್ನು ಏರಿಸಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿರುವುದನ್ನು ವಿರೋಧಿಸಿ ಕಣಿವೆ ಮಾರಮ್ಮ ಕನ್ನಡ ಅಭಿಮಾನಿಗಳ ಸಂಘದವರು ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿದರು.

   ಚಿತ್ರದುರ್ಗ, ದಾವಣಗೆರೆ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಇನ್ನು ಮೊದಲಾದ ಕಡೆಗಳಿಂದ ಬೆಂಗಳೂರಿಗೆ ಚಲಿಸುವ ಖಾಸಗಿ ಬಸ್‌ಗಳು ಹಬ್ಬ ಮತ್ತು ರಜಾದಿನಗಳಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಊರುಗಳಿಗೆ ಹೋಗುವುದನ್ನೆ ನೆಪ ಮಾಡಿಕೊಂಡು ಮನಸೋಇಚ್ಚೆ ಪ್ರಯಾಣ ದರವನ್ನು ಏರಿಕೆ ಮಾಡುತ್ತಿವೆ ಎಂದು ದೂರಿದರು

   ಮಧ್ಯಕರ್ನಾಟಕ ಉತ್ತರ ಕರ್ನಾಟಕ ಭಾಗದ ಅನೇಕ ಉದ್ಯೋಗಿಗಳು, ವಿದ್ಯಾರ್ಥಿಗಳು, ವ್ಯಾಪಾರಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದು, ಅನಿವಾರ್ಯವಾಗಿ ಹೆಚ್ಚಿನ ದರ ನೀಡಿ ಬಸ್‌ಗಳಲ್ಲಿ ಪ್ರಯಾಣಿಸುವಂತಾಗಿದೆ. ಐದುನೂರರಿಂದ ಆರು ನೂರು ರೂ.ಗಳಷ್ಟಿರುವ ಪ್ರಯಾಣ ದರ ಹಬ್ಬಗಳಲ್ಲಿ, ಸಾಲು ಸಾಲು ರಜಾ ದಿನಗಳಲ್ಲಿ ಮೂರು ಪಟ್ಟು ಏರಿಕೆಯಾಗತ್ತಿರುವುದಕ್ಕೆ ಕಡಿವಾಣ ಹಾಕುವಂತೆ ಕಣಿವೆಮಾರಮ್ಮ ಕನ್ನಡ ಅಭಿಮಾನಿಗಳ ಸಂಘದ ಅಧ್ಯಕ್ಷ ಎಂ.ತಿಪ್ಪೇಸ್ವಾಮಿ ಜಿಲ್ಲಾಧಿಕಾರಿಯನ್ನು ಆಗ್ರಹಿಸಿದರು.ಲಿಂಗರಾಜು, ಈರೋಬಯ್ಯ, ಕೆ.ಚಂದ್ರಣ್ಣ, ಬಿ.ಮಂಜುನಾಥ, ಹರೀಶ್, ಪಿ.ಸುರೇಶ್, ಕಿರಣ್‌ಕೋಟಿ, ಪಿ.ಬಿ.ರಾಮಚಂದ್ರ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link