ಶಿರಾ:
ಟಿಪ್ಪು ಸುಲ್ತಾನ್ ದೇಶದ ಓರ್ವ ಸ್ವಾತಂತ್ರ್ಯ ಹೋರಾಟಗಾರನೂ ಅಲ್ಲ, ಈ ನಾಡನ್ನು ಕಟ್ಟಿ ಬೆಳೆಸಿದ ದೀಮಂತ ವ್ಯಕ್ತಿಯೂ ಅಲ್ಲದಿದ್ದರೂ ಸರ್ಕಾರ ಟಿಪ್ಪು ಜಯಂತಿಯ ಆಚರಣೆ ಕೈಗೊಂಡಿರುವುದು ಹಾಸ್ಯಾಸ್ಪದವಾಗಿದ್ದು ಈ ಕೂಡಲೇ ಟಿಪ್ಪು ಜಯಂತಿ ಆಚರಣೆಯನ್ನು ಕೈಬಿಡಬೇಕೆಂದು ಟಿಪ್ಪು ಜಯಂತಿ ವಿರೋಧಿ ಸಮಿತಿಯ ಹಾಗೂ ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಗುರುವಾರದಂದು ಪ್ರತಿಭಟನೆ ನಡೆಸಲಾಯಿತು.
ನಗರದ ಲಕ್ಷ್ಮೀನಾರಾಯಣಸ್ವಾಮಿ ಕಲ್ಯಾಣ ಮಂಟಪದ ಸಮೀಪದಲ್ಲಿ ಪ್ರತಿಭಟನೆ ನಡೆಸಿದ ಟಿಪ್ಪು ಜಯಂತಿ ವಿರೋಧಿ ಸಮಿತಿಯು ಟಿಪ್ಪುವಿನಿಂದ ಹಿಂದೂಗಳ ಹತ್ಯೆಯಾಗಿದೆ. ಆತನನ್ನು ಓರ್ವ ರಾಷ್ಟ್ರೀಯವಾದಿ ಹಾಗೂ ಸ್ವಾತಂತ್ರ್ಯ ಹೋರಾಟಗಾರನಂತೆ ರಾಜ್ಯ ಸರ್ಕಾರ ಬಿಂಬಿಸಹೊರಟಿದೆ ಎಂದು ಹೋರಾಟ ಸಮಿತಿ ಆರೋಪಿಸಿದೆ.
ಕೇರಳದ ಇತಿಹಾಸಕಾರ ಪಣಿಕ್ಕರ್ ಟಿಪ್ಪು ಸುಲ್ತಾನನನ್ನು ಕುರಿತು ಅನೇಕ ಬರವಣಿಗೆಗಳನ್ನು ಬರೆದಿದ್ದು ಅವು ಅನುವಾದ ಕೂಡಾ ಆಗಿವೆ. ಈ ಬರಹಗಳಲ್ಲಿರುವಂತೆ ಟಿಪ್ಪು ಸುಲ್ತಾನ್ ಮತಾಂಧತೆ ಮಾಡಿದ ಬಗ್ಗೆ, ನರಮೇಧದ ಬಗ್ಗೆ ಮಾಹಿತಿಗಳಿವೆ. ಶಿರಾ ನಗರದ ಕೋಟೆ ಕೊತ್ತಲಗಳ ಮೇಲೂ ದಾಳಿ ನಡೆಸಿದ ಬಗ್ಗೆ ಮಾಹಿತಿಗಳಿವೆ. ಇಂತಹ ನೂರಾರು ಸಾಕ್ಷ್ಯಾದಾರಗಳು ಆತನ ವಿರುದ್ಧವಾಗಿ ಇದ್ದರೂ ಟಿಪ್ಪು ಜಯಂತಿಯನ್ನು ಆಚರಣೆ ಮಾಡುವುದು ಸರಿಯಲ್ಲ ಎಂದು ಆರೋಪಿಸಿ ಕೂಡಲೇ ಟಿಪ್ಪು ಜಯಂತಿ ಆಚರಣೆಯನ್ನು ನಿಲ್ಲಿಸುವಂತೆ ಸರ್ಕಾರಕ್ಕೆ ಆರಕ್ಷಕ ಇಲಾಖೆಯ ಅಧಿಕಾರಿಗಳ ಮೂಲಕ ಮನವಿ ನೀಡಿದರು.
