ಚಿತ್ರದುರ್ಗ:
ಕುಡಿಯುವ ನೀರಿಗೆ ಉಂಟಾಗಿರುವ ಹಾಹಾಕಾರವನ್ನು ನಿವಾರಿಸುವಂತೆ ತೋಪುರಮಾಳಿಗೆ ಗ್ರಾಮದ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ತಲೆ ಮೇಲೆ ಖಾಲಿ ಕೊಡಗಳನ್ನು ಹೊತ್ತು ಪ್ರತಿಭಟನೆ ನಡೆಸಿದರು.
ದ್ಯಾಮವ್ವನಹಳ್ಳಿ ಗ್ರಾ.ಪಂ.ವ್ಯಾಪ್ತಿಗೆ ಸೇರಿದ ತೋಪುರಮಾಳಿಗೆಯಲ್ಲಿ ಅನೇಕ ತಿಂಗಳಿನಿಂದಲೂ ಕುಡಿಯುವ ನೀರಿಗೆ ಅಭಾವವುಂಟಾಗಿದೆ. ಪಂಚಾಯಿತಿಯಿಂದ ಎರಡು-ಮೂರು ಬೋರ್‍ವೆಲ್‍ಗಳನ್ನು ಕೊರೆಸಿದ್ದರು ನೀರು ಲಭ್ಯವಾಗಿಲ್ಲ. ವೈ.ರಾಜಣ್ಣ ಎಂಬುವರಿಗೆ ಸೇರಿದ ಕೊಳವೆಬಾವಿಯಿಂದ ಪಂಚಾಯಿತಿಯವರು ನೀರು ಪೂರೈಸುತ್ತಿದ್ದು, ಪ್ರತಿ ತಿಂಗಳು ಇಂತಿಷ್ಟು ಹಣ ಪಾವತಿಸುತ್ತಿದ್ದಾರೆ. ಈಗ ಅದು ಇಲ್ಲದಂತಾಗಿದೆ. ಕೂಡಲೆ ನಮ್ಮ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವಂತೆ ಮಹಿಳೆಯರು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಅಲುವೇಲು, ಕಾಳಮ್ಮ, ರಾಧ, ಚೌಡಮ್ಮ, ಭಾಗ್ಯಮ್ಮ, ಹೊನ್ನೂರಮ್ಮ, ಮಾರಕ್ಕ, ಕೌಸಲ್ಯ, ನೇತ್ರಾವತಿ, ಸುಶೀಲಮ್ಮ, ತಿಪ್ಪಮ್ಮ, ನಿರ್ಮಲ, ವಿಜಯಮ್ಮ, ರಾಜೇಶ್ವರಿ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.