ತಿಪಟೂರು :
ದೇಶದಲ್ಲಿ ಒಂದು ಕಡೆ ಸ್ವಚ್ಚಭಾರತ ಅಭಿಯಾನವೆಂದು ಎಲ್ಲರೂ ಪೊರಕೆ ಹಿಡಿದು ಪೋಟೋಗೆ ಫೋಸ್ ನೀಡಿ ಪ್ರದರ್ಶನ ನೀಡುತ್ತಾರೆ. ಆದರೆ ನಿಜವಾಗಿಯು ಸ್ವಚ್ಚತೆಯನ್ನೇ ಧ್ಯೇಯವಾಗಿ ಮಾಡಿಕೊಂಡು ಹಗಲಿರುಳು ದುಡಿಯುವ ಡಿಗ್ರೂಪ್ ನೌಕರರಿಗೆ ವೇತನವನ್ನು ನೀಡದೆ ಸತಾಯಿಸಿತ್ತಿದ್ದಾರೆಂದು ಸುಮಾರು 40 ಜನ ಗುತ್ತಿಗೆಯಾಧಾರಿತ ಡಿ.ಗ್ರೂಪ್ ನೌಕರರು ಬೆಳಗ್ಗೆಯಿಂದ ಮಧ್ಯಾಹ್ನ 12 ಗಂಟೆಯವರೆಗೂ ಪ್ರತಿಭಟನೆ ನಡೆಸಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಬೆಂಗಳೂರಿನ ಡಿಟೆಕ್ಟ್‍ವೆಲ್‍ನ ಸಂಸ್ಥೆಯ ಗುತ್ತಿಗೆಯಾಧಾರಿತ ಡಿ.ಗ್ರೂಪ್ ನೌಕರರು ದೀಡೀರ್ ಪ್ರತಿಭಟನೆ ನಡೆಸಿದರು ಎಲ್ಲರೂ ಸ್ವಚ್ಛಭಾರತ ಅಭಿಯಾನದಲ್ಲಿ ಎಂದು ಪ್ರದರ್ಶಿಸುತ್ತಾರೆ ಆದರೆ ನಾವು ನಮ್ಮ ಕಾಯಕವಾಗಿ ಈ ನೌಕರಿಯನ್ನು ಮಾಡಿ ನಿಜವಾಗಿಯೂ ಸ್ವಚ್ಛಭಾರತದ ಕೆಲಸವನ್ನು ಮಾಡುತ್ತಿದ್ದೇವೆ ಆದರೆ ನಮಗೆ ಕಳೆದ 4 ತಿಂಗಳಿನಿಂದ ನಮಗೆ ನೀಡಬೇಕಾದ ಸಂಬಳವನ್ನು ಕಂಪನಿಯವರು ನೀಡದೇ ಸತಾಯಿಸುತ್ತಿದ್ದಾರೆ ನಮಗೆ ದಿನಿತ್ಯದ ಜೀವನಕ್ಕೆ ಮತ್ತು ಪರೀಕ್ಷಾ ಸಮಯವಾಗಿರುವುದರಿಂದ ಮಕ್ಕಳ ವಿದ್ಯಾಭ್ಯಾಸ ಶುಲ್ಕವನ್ನು ಕಟ್ಟಲು ಸಹ ನಮ್ಮಲ್ಲಿ ಹಣವಿಲ್ಲ ಆದ್ದರಿಂದ ನಮಗೆ ಕೊಡಬೇಕಾದ ಸಂಬಂಳವನ್ನು ಆದಷ್ಟು ಬೇಗ ದೊರಕುವಂತೆ ಮಾಡುವ ಸಲುವಾಗಿ ನಾವು ಈ ಪ್ರತಿಭಟನೆಯನ್ನು ಮಾಡುತ್ತಿದ್ದೇವೆ ಎಂದು ಧರ್ಮಾವತಿ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಇದರ ಬಗ್ಗೆ ಡಿಟೆಕ್ಟ್‍ವೆಲ್‍ನ ಸಂಸ್ಥೆಯ ತಿಪಟೂರು ಉಸ್ತುವಾರಿ ನೋಡಿಕೊಳ್ಳುವ ಸೂಪರ್‍ವೈಸರ್‍ರನ್ನು ಲೋಕೇಶ್ ನಮಗೆ 6 ತಿಂಗಳಿನಿಂದ ಬಿಲ್ ಆಗಿಲ್ಲ ನಾವು 5% ಬಡ್ಡಿಗೆ ಹಣ ತಂದು ಇವರಿಗೆ ಕೊಟ್ಟಿದ್ದೇವೆ ಆಸ್ಪತ್ರೆಕಡೆಯಿಂದ ಯಾವುದೇ ಹಣಬಂದಿಲ್ಲ ನಾವೇನು ಮಾಡಬೇಕೆಂದು ಹೇಳುತ್ತಾರೆ. ಕೊನೆಗೆ ಸೂಪರ್‍ವೈಸರ್ ಈಗ ಬಿಲ್‍ಮಾಡಿಕಳುಹಿಸಿದ್ದು ಒಂದು ವಾರದೊಳಗೆ ವೇತನವನ್ನು ಪಾವತಿಸುವುದಾಗಿ ಭರವಸೆ ನೀಡಿದ್ದರಿಂದ ನೌಕರರು ಪ್ರತಿಭಟನೆಯನ್ನು ಮುಗಿಸಿ ತಮ್ಮ ಕಾರ್ಯದಲ್ಲಿ ತೊಡಗಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
