ಖಾಸಗಿ ಬಸ್ ಮಾಲೀಕರ ಪ್ರತಿಭಟನೆ

ದಾವಣಗೆರೆ:

        ಜಗಳೂರು ಖಾಸಗಿ ಬಸ್ ನಿಲ್ದಾಣಕ್ಕೆ ಬರುವ ಕೆಎಸ್‍ಆರ್‍ಟಿಸಿ ಬಸ್‍ಗಳು, ಖಾಸಗಿ ಬಸ್‍ಗಳು ಸ್ಟ್ಯಾಂಡ್ ಬಿಡುವ ಸಮಯದಲ್ಲೇ ಪ್ರಯಾಣಿಕರನ್ನು ಹತ್ತಿಸಿಕೊಂಡ ಹೊಗುತ್ತಿರುವುದರಿಂದ ತಮಗೆ ಅನ್ಯಾಯವಾಗುತ್ತಿದ್ದು, ಈ ಅನ್ಯಾಯವನ್ನು ತಡೆಯಬೇಕೆಂದು ಒತ್ತಾಯಿಸಿ ಖಾಸಗಿ ಬಸ್ ಮಾಲೀಕರು ಆರ್‍ಟಿಓ ಕಚೇರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕೊಠಡಿಯಲ್ಲಿ ಧರಣಿ ನಡೆಸಿದ್ದಾರೆ.

        ಈ ಸಂದರ್ಭದಲ್ಲಿ ಮಾತನಾಡಿದ ಖಾಸಗಿ ಬಸ್ ಮಾಲೀಕರುಗಳು, ಸುಮಾರು ಕಳೆದ ಐವತ್ತು ವರ್ಷಗಳಿಂದ ಗ್ರಾಮೀಣ ಪ್ರದೇಶದ ಜನರಿಗೆ ನಮ್ಮ ಖಾಸಗಿ ಬಸ್‍ಗಳು ಸಾರಿಗೆ ಸೌಲಭ್ಯವನ್ನು ಒದಗಿಸಿವೆ. ನಮ್ಮ ಖಾಸಗಿ ಬಸ್‍ಗಳನ್ನೇ ನಂಬಿಕೊಂಡು ನೂರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಆದರೆ, ಇತ್ತೀಚೆಗೆ ಜಗಳೂರಿನ ಖಾಸಗಿ ಬಸ್ ನಿಲ್ದಾಣಕ್ಕೆ ನಮ್ಮ ಬಸ್‍ಗಳು ಸ್ಟ್ಯಾಂಡ್ ಬಿಡುವ ಕೆಲ ಹೊತ್ತಿನ ಮುಂಚೆಯೇ ಬಂದು, ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಿವೆ. ಹೀಗಾಗಿ ನಮಗೆ ಕಲೆಕ್ಷನ್ ಆಗದೇ, ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

          ಜಗಳೂರು ಮಾರ್ಗವು ನಾನ್ ಮೊನಾಪಾಲಿ ರೂಟ್ ಆಗಿದ್ದು, ಈ ಮಾರ್ಗದಲ್ಲಿ ಖಾಸಗಿ ಹಾಗೂ ಸರ್ಕಾರಿ ಬಸ್‍ಗಳು ಚಲಿಸಬಹುದಾಗಿದೆ. ಆದರೆ, ಮೊನಾಪಾಲಿ ರೂಟ್‍ನಲ್ಲಿ (ರಾಷ್ಟ್ರೀಯ ಹೆದ್ದಾರಿಯಲ್ಲಿ) ಖಾಸಗಿ ಬಸ್‍ಗಳು ಹೋಗುವಂತಿಲ್ಲ. ಕಾನೂನಿನ ಪ್ರಕಾರ ಕೆಎಸ್‍ಆರ್‍ಟಿಸಿ ಬಸ್‍ಗಳನ್ನು ಕೆಎಸ್‍ಆರ್‍ಟಿಸಿ ನಿಲ್ದಾಣದಲ್ಲಿಯೇ ನಿಲ್ಲಿಸಬೇಕಾಗಿದೆ. ಆದರೀಗ ಖಾಸಗಿ ಬಸ್ ನಿಲ್ದಾಣಕ್ಕೆ ಬರುವ ಕೆಎಸ್‍ಆರ್‍ಟಿಸಿ ಬಸ್‍ಗಳು ನಮ್ಮ ಸಮಯದಲ್ಲಿ ಸ್ಟ್ಯಾಂಡ್ ಬಿಡುತ್ತಿರುವುದರಿಂದ ಟೈಮಿಂಗ್ಸ್ ಓವರ್ ಲ್ಯಾಪ್ ಆಗುತ್ತಿದೆ.

        ಈ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚವರು, ಮುಖ್ಯಮಂತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರ ಪರಿಣಾಮ ಆರ್‍ಟಿಒಗೆ ಕ್ರಮ ಕೈಗೊಳ್ಳಲು ಸೂಚಿಸದಲಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಅಧಿಕಾರಿಗಳು ಖಾಸಗಿ ಬಸ್ ಮಾಲೀಕರ ಸಭೆ ಕರೆದಿದ್ದರು. ಆದರೆ, ಆರ್‍ಟಿಒ ಎರಡು ದಿವಸದಲ್ಲಿ ಟೈಮಿಂಗ್ಸ್ ಚಾರ್ಟ್ ಕೊಡಲು ಹೇಳುತ್ತಿದ್ದಾರೆ. ಆದರೆ, ಟೈಮಿಂಗ್ಸ್ ಚಾರ್ಟ್ ಸಿದ್ಧಪಡಿಸಲು ಕನಿಷ್ಠ ಎಂಟು ದಿನವಾದರೂ ಕಾಲಾವಕಾಶ ನೀಡಬೇಕೆಂದು ಆಗ್ರಹಿಸಿದರು.

        ಪ್ರತಿಭಟನೆಯಲ್ಲಿ ಬಸ್ ಮಾಲೀಕರಾದ ಸಯ್ಯದ್ ಸೈಫುಲ್ಲಾ, ಕೆ.ಎಸ್.ಮಲ್ಲೇಶಪ್ಪ, ವೀರೇಂದ್ರ ಪಾಟೀಲ್, ಎಂ.ಆರ್.ಸತೀಶ್, ಅಸ್ಲಾಂ, ಸಿದ್ದೀಕ್, ಪೀರ್‍ಭಾಷಾ, ಅನ್ವರ್ ಸಾಹೇಬ್, ವೀರೇಶ್, ಅಯ್ಯೂಬ್ ಸಲಾಂ, ಬಸವರಾಜಪ್ಪ, ವೀರೇಂದ್ರ ಪಾಟೀಲ್, ಜಿಲಾನ್‍ಬೇಗ್ ಸಾಬ್ ಮತ್ತಿತರರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link