ತುರುವೇಕೆರೆ:
ಜೆಡಿಎಸ್ ಮುಖಂಡ ರವಿ ಅವರ ಪತ್ನಿ ಶೋಭರನ್ನು ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿರುವ 8 ನೇ ವಾರ್ಡ್ ಬಿಜೆಪಿ ಪರಾಜಿತ ಅಭ್ಯರ್ಥಿ ಸುನಂದಮ್ಮನ ಮಗ ಸುಶಿತ್, ಸಂದೀಪ್ ಹಾಗೂ ಸಹಚರನ್ನು ಕೂಡಲೇ ಪೊಲೀಸರು ಬಂದಿಸಬೇಕು ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಒತ್ತಾಯಿಸಿದರು.
ಪಟ್ಟಣದ ತಮ್ಮ ಸ್ವಗೃಹದಲ್ಲಿ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ಬಿಜೆಪಿ ಶಾಸಕ ಮಸಾಲ ಜಯರಾಮ್ ಹಿಂಬಾಲಕರು ಗುಂಡಾ ವರ್ತನೆ ಹೆಚ್ಚಾಗಿದ್ದು ಶಾಸಕರು ಇಂತ ಗುಂಡಾವರ್ತನೆಯ ಹಿಂಬಾಲಕರನ್ನು ಕಡಿವಾಣ ಹಾಕುವಲ್ಲಿ ವಿಪಲರಾಗಿದ್ದಾರೆ ಎಂದು ಆರೋಪಿಸಿದರು.
ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ 8 ನೇ ವಾರ್ಡ್‍ನಿಂದ ಜೆಡಿಎಸ್ ಅಭ್ಯರ್ಥಿ ಸ್ವಪ್ನ ಗೆಲವು ಸಾದಿಸಿದ್ದು ಬಿಜೆಪಿ ಅಭ್ಯರ್ಥಿ ಸುನಂದಮ್ಮನ ಸೋತ ಹಿನ್ನಲೇ ಮಗ ಸುಶಿತ್, ಸಂದೀಪ್ ಹಾಗೂ ಸಹಚರರು ಶುಕ್ರವಾರ ರಾತ್ರಿ ನಮ್ಮ ಸೋಲಿಗೇ ನೀನೆ ಕಾರಣ ಎಂದು ಜೆಡಿಎಸ್ ಮುಖಂಡರಾದ ರವಿ ಪತ್ನಿ ಶೋಭರ ಮೇಲೆ ಕಲ್ಲಿನಿಂದ ಹಲ್ಲೇ ಮಾಡಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ತಾಲೂಕಿನಲ್ಲಿ ಮರಳು ದಂದೆ, ಇಸ್ಪೀಟ್ ದಂದೆ ಹೆಚ್ಚಾಗಿದೆ ಪೊಲೀಸ್ ಇಲಾಖೆ ಸಂಫೂರ್ಣ ನಿಷ್ಕ್ರೀಯವಾಗಿದೆ. ಇಂತಹ ಗುಂಡಾಗಳನ್ನು ಪೊಲೀಸ್‍ರು ಇಲಾಖೆ ಬಂದಿಸಬೇಕು ಇಲ್ಲವಾದರೇ ಸಿಪಿಐ ಕಚೇರಿ ಮುಂದೆ ಸಾವಿರಾರು ಜನರೊಂದಿಗೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಬಾರಿಯ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಗಳಿಸುವ ಮತಗಳಲ್ಲಿ ಸಮ ಬಲ ಸಾದಿಸಿದ್ದು. ಬಿಜೆಪಿ ಪಕ್ಷ 1 ಸೀಟ್ ಹೆಚ್ಚು ಪಡೆದಿದೆ. ಪ್ರತಿ ಚುನಾವಣೆಯಲ್ಲಿಯೂ ಕಾಂಗ್ರೇಸ್ –ಜೆಡಿಎಸ್ ಪಕ್ಷಗಳ ಮದ್ಯೆ ಹೋರಾಟ ನೆಡೆಯುತ್ತಿತ್ತು ಆದರೆ ಈ ಬಾರಿ ಕಾಂಗ್ರೇಸ್ ಮುಖಂಡರು ಬಿಜೆಪಿ ಪರವಾಗಿ ಮತ ಚಲಾಯಿಸದ್ದರಿಂದ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸಲಾಗಿದೆ ಜೆಡಿಎಸ್ ನೂತನ ಸದಸ್ಯರಿಗೆ ಃಆಗೂ ಮತದಾರಿಗೇ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.ಪತ್ರಿಕಾ ಗೋಷ್ಟಿಯಲ್ಲಿ ಜೆಡಿಎಸ್ ಅದ್ಯಕ್ಷ ಸ್ವಾಮಿ, ಪಟ್ಟಣ ಪಂಚಾಯ್ತಿ ನೂತನ ಸದಸ್ಯರಾದ ಸ್ವಪ್ನ, ಎನ್.ಆರ್.ಸುರೇಶ್, ಎಪಿಎಂಸಿ ಸದಸ್ಯ ಮಧು, ಹಲ್ಲೆಗೊಳಗಾದ ರವಿ, ಶೋಭ, ಮುಖಂಡರಾದ ಬಸವರಾಜು, ಶಿವು, ಪುನಿತ್ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
