ಪೆಟ್ಟಿಗೆ ಅಂಗಡಿ ತೆರವಿಗೆ ಆಕ್ರೋಶ

ತಿಪಟೂರು
     ನಗರದಲ್ಲಿ ಎಲ್ಲೆಂದರಲ್ಲಿ ಹೆಚ್ಚಳವಾಗಿರುವ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯವು ಆರಂಭವಾಗಿದ್ದು ಇದು ಪೆಟ್ಟಿಗೆ ಅಂಗಡಿಗಳನ್ನೆ ನಂಬಿಕೊಂಡು ಜೀವನ ನಡೆಸುತ್ತಿರುವವರಿಗೆ ಬೆನ್ನತ್ತಿದ ಬೇತಾಳದ ಹಾಗೆ ಕಾಣುತ್ತಿದ್ದು ಇಂದು ಹೇಗೀದೆ ಎಂದು ಏಳುವ ಪರಿಸ್ಥಿತಿಯಲ್ಲಿದ್ದಾರೆ.
     ಇದಕ್ಕೆ ತಾಜಾ ಉದಾಹರಣೆಯಂತೆ ಇಂದು ನಗರದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ಜಿಲ್ಲಾ ಆರೋಗ್ಯಾಧಿಕಾರಿಗಳ ಆದೇಶದಂತೆ ಆಸ್ಪತ್ರೆಯ ಕಾಂಪೌಂಡ್ ಸುತ್ತಲೂ ಕಾಯಕಲ್ಪ ಕಾರ್ಯಕ್ರಮದ ವಾಲ್ ಪೈಂಟಿಂಗ್ ಮಾಡಿಬೇಕೆಂಬ ಆದೇಶದಿಂದ ನಗರಸಭೆಯವರಿಗೆ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸುವದರ ಬಗ್ಗೆ ಕ್ರಮಕೈಗೊಳ್ಳಬೇಕೆಂದ ಆದೇಶದಂತೆ ನಗರಸಭೆಯವರು ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸ ಬೇಕೆಂದು ತಿಳಿಸಿದ್ದರಿಂದ ನೊಂದ ಪೆಟ್ಟಿಗೆ ಅಂಗಡಿಗಳ ಮಾಲೀಕರು ಅಳುತ್ತಲೆ ತಮ್ಮ ತಮ್ಮ ಅಂಗಡಿಗಳನ್ನು ತೆರವುಗೊಳಿಸಿ ನಮ್ಮ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದರೆ ಇವರು ಉಳ್ಳವರನ್ನು ಏಕೆ ಪ್ರಶ್ನಿಸುತ್ತಿಲ್ಲವೆಂದು ತಮ್ಮನೋವನ್ನು ತೋಡಿಕೊಂಡರು.
     ನಗರದ ತುಂಬೆಲ್ಲ ಅನಧಿಕೃತ ಪಟ್ಟಿಗೆ ಅಂಗಡಿಗಳಿದ್ದು ಅವುಗಳನ್ನು ತೆರವುಗೊಳಿಸಲಾಗದೆ ಬಂದು ನಮ್ಮ ಅಂಗಡಿಗಳನ್ನು ತೆರವುಗೊಳಿಸುತ್ತಿರುವುದು ತುಂಬಾ ಅನ್ಯಾಯ ಮತ್ತು ನಮಗೆ ಗಾಡಿಗಳಲ್ಲಿ ಇಟ್ಟುಕೊಂಡು ವ್ಯಾಪರಮಾಡಿ ಎಂದು ಹೇಳುತ್ತಿದ್ದಾರಲ್ಲ ಕೆಲವು ಅಂಗಡಿಗಳಿಗೆ ನಗರಸಭೆಯಿಂದಲೇ ಎನ್.ಓ.ಸಿ ನೀಡಿ ವಿದ್ಯುತ್ ಸಂಪರ್ಕವನ್ನು ಕೊಟ್ಟು ಅಂಗಡಿಗಳನ್ನು ನಡೆಸುತ್ತಿದ್ದಾರೆ ಅವರನ್ನು ಏಕೆ ತೆಗೆಸುತ್ತಿಲ್ಲ ನಗರಸಭೆಯ ಅಧಿಕಾರಿಗಳು ಅವುಗಳನ್ನು ತೆಗೆಸಲು ಸಾಧ್ಯವಿಲ್ಲದೇ ನಮ್ಮಂತಹ ಬಡವರ ಅಂಗಡಿಗಳನ್ನು ತೆಗೆಸುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಪೆಟ್ಟಿಗೆ ಅಂಗಡಿ ಹೋಟೆಲ್‍ನವರು ಆರೋಪಿಸಿದರು.
     ಇನ್ನು ಇಲ್ಲೆಗೆ ಬಡವರಷ್ಟೇ ಅಲ್ಲ ಅಧಿಕಾರಿಗಳು ಊಟಮಾಡಲು ಬರುತ್ತಾರೆ ಕುಳಿತು ಊಟಮಾಡಿದರೆ ತಾನೇ ನೆಮ್ಮದಿ ನೂಕುವ ಗಾಡಿಯನ್ನು ಇಟ್ಟುಕೊಂಡರೆ ಅವರು ಹೇಗೆ ಕುಳಿತು ಊಟಮಾಡುತ್ತಾರೆ ನಾವು ಕೊಟ್ಟು ಊಟವೇ ಸರಿಯಾಗದಿದ್ದ ಮೇಲೆ ನಮಗೆ ಒಳ್ಳೆಯದಾಗುತ್ತದೆಯೇ ಎಂದೆನ್ನುತ್ತಾರೆ.
ಗುಬ್ಬಿ ಮೇಲೆ ಬ್ರಹ್ಮಾಸ್ತ್ರ :
     ಇನ್ನು ನಗರಸಭೆಯವರಿಗೆ ಪಟ್ಟಿಗೆ ಅಂಗಡಿಯವರನ್ನು ಹೆದರಿಸಲು ಇದೊಂದು ಅಸ್ತ್ರವಾಗಿದ್ದು ಹೋದ ವರ್ಷ ಹಾಸನ ವೃತ್ತದಲ್ಲಿ ಎರಡು ಅಂಗಡಿಗಳನ್ನು ತೆರವುಗೊಳಿಸಿ ಇಂದು ಆಸ್ಪತ್ರೆಯ ಮುಂದೆ ಬಂದಿದ್ದಾರೆ. ಇದಾದ ನಂತರ ಐ.ಬಿ ಸರ್ಕಲ್, ಬಸ್ ನಿಲ್ದಾಣ, ಕೋಡಿ ಸರ್ಕಲ್ ಎಂದು ಹೇಳುತ್ತಾರೆ ಏಕೆ ಈ ರೀತಿ ದ್ವಂದ್ವ ನಿಲುವನ್ನು ನಗರಸಭೆಯವರು ತಳೆಯುತ್ತಿ ದ್ದಾರೆಂದು ಸಾರ್ವಜನಿಕರಿಗೆ ಮತ್ತು ಪೆಟ್ಟಿಗೆ ಅಂಗಡಿ ಮಾಲೀಕರಿಗೆ ಗೊಂದಲವನ್ನು ಉಂಟುಮಾಡುತ್ತಾರೆ.
    ನಗರಸಭೆಯವರು  ಹೇಳುವ ಹಾಗೆ ತಳ್ಳುವ ಗಾಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡಬಹುದೆನ್ನುತ್ತಾರೆ ಆದರೆ ಕೆಲವರು ಅಂಗಡಿಗಳಿಗೆ ಕಬ್ಬಿಣದ ಅಂಗಡಿಯನ್ನು ಅದರ ಪ್ಲೋರಿಂಗ್‍ಗೆ ಮಾಸಾಯಿಕ್ ಟೈಲ್ಸ್, ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಿಕೊಂಡು ರಾಜಾರೋಷವಾಗಿ ವ್ಯಾಪಾರಮಾಡುತ್ತಿದ್ದಾರೆ ಸ್ಥಳೀಯ ಅಂಗಡಿಯವರು ಹೇಳುವ ಪ್ರಕಾರ ಇದು ತಾಲ್ಲೂಕು ಕಛೇರಿಯಲ್ಲಿರುವ ವಿ.ಎ.ಗೆ ಸೇರಿದ್ದು ಅದಕ್ಕಾಗಿಯೇ ನಗರಸಭೆಯವರು ಇದನ್ನು ಮುಟ್ಟುತ್ತಿಲ್ಲ ಎಂದು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ನಗರಸಭೆಯವರಿಗೆ ಪಟ್ಟಿಗೆ ಅಂಗಡಿಯೊಂದು ಕಾರಣವಾಗಿದ್ದು ಏನು ಕೆಲಸವಿಲ್ಲದಾಗ ಅಂಗಡಿ ತೆರವುಗೊಳಿಸು ತ್ತೇವೆಂದು ಹೆದರಿಸುವುದು ಒಂದು ಕಾಯಕವಾಗಿದೆ.
      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap