ಹಿರಿಯೂರು
ತಾಲೂಕಿನ ಖಂಡೇನಹಳ್ಳಿ ಗ್ರಾಮಸ್ಥರು ಕುಡಿವ ನೀರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಗ್ರಾಮದಲ್ಲಿ ಕುಡಿಯುವ ನೀರಿನ ಪೂರೈಕೆ ಸ್ಥಗಿತವಾಗಿದ್ದು, ಈ ಬಗ್ಗೆ ಗ್ರಾಪಂ. ಪಿಡಿಒ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ, ಜನ-ಜಾನುವಾರು ಕುಡಿವ ನೀರಿಗೆ ಪರಿತಪಿಸುವಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಕುಡಿವ ನೀರಿಗೆ ನಿತ್ಯ ದೂರದ ಜಮೀನುಗಳಿಗೆ ಅಲೆಯಬೇಕಾಗಿದೆ, ಕೊಳವೆ ಬಾವಿ ಪಂಪ್ ಸೆಟ್ ನಿರ್ವಹಣೆ ಇಲ್ಲದೆ ಇರುವುದರಿಂದ ಕುಡಿವ ನೀರಿನ ಸಮಸ್ಯೆ ಎದುರಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು. ಗ್ರಾಮದ ನೈರ್ಮಲ್ಯ ಹದಗೆಟ್ಟಿದ್ದು ಇಲ್ಲಿನ ಪಿಡಿಓ ತೀರಾ ನಿರ್ಲಕ್ಷ ಧೋರಣೆ ವಹಿಸಿರುತ್ತಾರೆ ತಕ್ಷಣ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಸಮರ್ಪಕ ಕುಡಿಯುವ ನೀರು ನೀಡಬೇಕು ಊರಿನ ಸ್ವಚ್ಛತೆ ಕಾಪಾಡಬೇಕು ಎಂದು ಮನವಿ ಮಾಡಿದರು.
ಗ್ರಾ. ಪಂ.ಮಾಜಿ ಉಪಾಧ್ಯಕ್ಷ ಕೆ.ಎಸ್.ರವಿಕುಮಾರ್, ನರಸಿಂಹಮೂರ್ತಿ, ಚಿದಾನಂದ್, ಹನುಮಂತರಾಯಪ್ಪ, ಚಂದ್ರಪ್ಪ, ಚಿಕ್ಕೀರಪ್ಪ, ಬಸವರಾಜ್, ದಾದಾಪೀರ್, ಗಿರೀಶ್ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








