“ರೇರಾ ” ಜಾರಿಗಾಗಿ ಪ್ರತಿಭಟನೆ ..!!

ಬೆಂಗಳೂರು

     ರಾಜ್ಯದಲ್ಲಿ ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ(ರೇರಾ)ವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿಲ್ಲ ಎಂದು ಆರೋಪಿಸಿ ನಮ್ಮ ಬೆಂಗಳೂರು ಪ್ರತಿಷ್ಠಾನ ಹಾಗೂ ಯುನೈಟೆಡ್ ಸದಸ್ಯರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

    ಪುರಭವನದ ಮುಂಭಾಗ ಸೇರಿದ ನಮ್ಮ ಬೆಂಗಳೂರು ಪ್ರತಿಷ್ಠಾನ ಹಾಗೂ ಯುನೈಟೆಡ್ ಸದಸ್ಯರುಗಳು ರೇರಾ ಕಾಯ್ದೆ ಅನುಷ್ಠಾನ ಸಮರ್ಪಕ ಅನುಷ್ಠಾನ ಮಾಡಬೇಕು ಅದನ್ನು ಬಿಟ್ಟು ವೈಫಲ್ಯ ತೋರುವುದು ಸರಿಯಲ್ಲ ಎಂದು ಆರೋಪಿಸಿದರು.

      ಬಡಾವಣೆ ಅಥವಾ ಅಪಾರ್ಟ್‍ಮೆಂಟ್ ಯೋಜನೆಗಳಲ್ಲಿ ಶೇ.60ರಷ್ಟು ನಿವೇಶನ ಅಥವಾ ಫ್ಲ್ಯಾಟ್‍ಗಳನ್ನು ಗ್ರಾಹಕರಿಗೆ ಕ್ರಯಪತ್ರ ಮಾಡಿಕೊಟ್ಟ ಯೋಜನೆಗಳಿಗೆ ಮಾತ್ರ ರೇರಾ ಕಾಯ್ದೆ ಅನ್ವಯವಾಗುವುದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು.

      ರೇರಾ ಕಾಯ್ದೆ ಅನುಷ್ಠಾನ ಮಾಡುವಲ್ಲಿ ವೈಫಲ್ಯ, ಕೆಲವೇ ಬಿಲ್ಡರ್ ಹಾಗೂ ಡೆವಲಪರ್‍ಗಳ ಮೇಲೆ ವಿಶೇಷ ಒಲವು ತೋರಿಸುತ್ತಿದ್ದಾರೆ.ಇನ್ನೂ, ಮೂರು ಜಿಲ್ಲಾಧಿಕಾರಿಗಳ ಕಚೇರಿಯೂ ರೇರಾ ಕೋರ್ಟ್ ಆದೇಶ ಕುರಿತು ಕ್ರಮ ಕೈಗೊಳ್ಳದಿರುವುದನ್ನು ಖಂಡನೀಯ ಎಂದರು.

ರೇರಾ ಕಾಯ್ದೆ:

      ಬಡಾವಣೆಯಾಗಿದ್ದಲ್ಲಿ ರಸ್ತೆ,ಬೀದಿ ದೀಪ, ಮೂಲಸೌಕರ್ಯಗಳನ್ನು ನಿರ್ವಹಣೆಗಾಗಿ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗೆ ಹಸ್ತಾಂತರಿಸಬೇಕು. ಅದೇ ರೀತಿ ಅಪಾರ್ಟ್‍ಮೆಂಟ್ ಅಥವಾ ಬಡಾವಣೆ ನಿರ್ಮಿಸುವ ಮುನ್ನ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮೋದನೆ ಪಡೆದ ಯೋಜನೆಯ ಅನ್ವಯವೇ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link