ಹಿರಿಯೂರು :
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆಗಳನ್ನು ಖಾಯಂ ಮಾಡಿ, ಕನಿಷ್ಟ ವೇತನ ನೀಡುವುದು ಸೇರಿದಂತೆ ಪಿಂಚಣಿ ಯೋಜನೆ ಜಾರಿಗೆ ತರುವುದಾಗಿ ಸರ್ಕಾರ ಚುನಾವಣಾ ಪ್ರನಾಳಿಕೆಯಲ್ಲಿ ಭರವಸೆ ನೀಡಿದ್ದರು. ಆದರೆ ಈವರೆಗೂ ಈ ಭರವಸೆಯನ್ನು ಈಡೇರಿಸಲು ಕ್ರಮಕೈಗೊಂಡಿಲ್ಲ ಎಂಬುದಾಗಿ ಕಾಂಮ್ರೇಡ್ .ಎಸ್.ಸಿ.ಕುಮಾರ್ ಆರೋಪಿಸಿದರು.ನಗರದ ತಾಲ್ಲೂಕು ಕಛೇರಿ ಆವರಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಫೆಡರೇಷನ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಯೋಜನೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸಕಾರದ ಈ ಯೋಜನೆಯ ಯಶಸ್ವಿಗೆ ಕಾರಣೀಭೂತರಾಗಿದ್ದಾರೆ ಆದ್ದರಿಂದ ತಾವು ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಯಶಸ್ವಿಗೆ ಅಹರ್ನಿಷಿ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕಳೆದ ಹತ್ತಾರು ವರ್ಷಗಳಿಂದ ಕನಿಷ್ಠ ವೇತನ, ಖಾಯಂ, ಪಿಂಚಣಿ, ಇಎಸ್‍ಐ, ಭವಿಷ್ಯನಿಧಿ, ಗ್ರಾಚ್ಯುಯಿಟಿ ಸೌಲಭ್ಯಗಳಿಲ್ಲದೆ ಅನಿರ್ಹಶಿ ದುಡಿಯುತ್ತಿದ್ದಾರೆ ಆದ್ದರಿಂದ ಈ ಕೊಡಲೇ ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸಬೇಕು ಎಂಬುದಾಗಿ ಅವರು ಸರ್ಕಾರವನ್ನು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಕನಿಷ್ಟ 18 ಸಾವಿರ ರೂಗಳನ್ನು ಮಾಸಿಕವೇತನ ಜಾರಿಗೊಳಿಸಬೇಕು. ನಿವೃತ್ತಿಯಾದವರಿಗೆ ಮಾಸಿಕ ಪಿಂಚಣಿಯಾಗಿ 3 ಸಾವಿರ ರೂಗಳನ್ನು ಪಾವತಿಸಬೇಕು. ಸೇವಾ ಹಿರಿತನವನ್ನು ಪರಿಗಣಿಸಿ ಹಾಲಿ ಇರುವ ತಾರತಮ್ಯವನ್ನು ಹೋಗಲಾಡಿಸಬೇಕು. ಹಾಲಿ ಸೇವೆಯನ್ನು ಖಾಯಂಮಾಡಬೇಕು. ಎಂಬ ಬೇಡಿಕೆಗಳ ಮನವಿ ಪತ್ರವನ್ನು ತಹಶೀಲ್ದಾರರಿಗೆ ಸಲ್ಲಿಸಲಾಯಿತು.
ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ ಕಾಂಮ್ರೇಡ್.ಎಸ್.ಸಿ.ಕುಮಾರ್, ಕಾಂ.ಎನ್.ಶ್ರೀನಿವಾಸ್, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಫೆಡರೇಷನ್ ಕಾರ್ಯದರ್ಶಿ ಕಾಂ.ಸಿ.ತಿಪ್ಪಮ್ಮ, ಉಪಾಧ್ಯಕ್ಷೆ ಕಾಂ.ಬಿ.ಪಿ.ನಿರ್ಮಲ, ಕಾಂ.ನಳಿನಾಕ್ಷಿ, ಕಾಂ.ಕೆ.ಟಿ.ಸುಜಾತ, ಕಾಂ.ಸಾವಿತ್ರಮ್ಮ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.