ಚಿತ್ರದುರ್ಗ
ಸಂವಿಧಾನವನ್ನು ಉಳಿಸಿ,ಮೀಸಲಾತಿಯನ್ನು ರಕ್ಷಿಸುವಂತೆ ಆಗ್ರಹಿಸಿ ಮಂಗಳವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರತಿಭಟನೆಯನ್ನು ನಡೆಸಿತು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ಮೂಲಭೂತ ಹಕ್ಕಾಗಿ ಪ್ರತಿಷ್ಠಾಪಿಸಲು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‍ನ ಸಂವಿಧಾನ ಪೀಠಕ್ಕೆ ಮೇಲ್ಮನವಿಯನ್ನು ಸಲ್ಲಿಸಬೇಕು, ಈ ಜನಾಂಗಕ್ಕೆ ಮೀಸಲಾತಿಯನ್ನು ತಮಿಳುನಾಡಿನ ಮಾದರಿಯಲ್ಲಿ ಶೇ.70ಕ್ಕೆ ಹೆಚ್ಚಿಸಬೇಕು, ಜನಸಂಖ್ಯೆಗೆ ಅನುಗುಣವಾಗಿ ಶೇ.30 ರಷ್ಟು ಮೀಸಲಾತಿ ನೀಡಬೇಕು ಹಾಗೂ ಮೀಸಲಾತಿಯನ್ನು ಸಂವಿಧಾನ 9ನೇ ಪರಿಚ್ಛೇದದಲ್ಲಿ ಸೇರಿಸುವಂತೆ ಆಗ್ರಹಿಸಲಾಯಿತು.
ಪರಿಶಿಷ್ಟರ ಜಮೀನನ್ನು ಉಳಿಸಲು ರಾಜ್ಯ ಸರ್ಕಾರ ಸದನಗಳಲ್ಲಿ ಪಿಟಿಎಲ್ ತಿದ್ದುಪಡಿ ಕಾಯ್ದೆ ರೂಪಿಸಿ ಮಂಡಿಸುವ ಮೂಲಕ ತಿದ್ದುಪಡಿ ಕಾಯ್ದೆ ಜಾರಿಗೆ ತರಲಿ, ಭೂರಹಿತ ಬಗರ್ ಹುಕ್ಕಂ ಸಾಗುವಳಿ ಸಕ್ರಮ ಮಾಡಿ ಅಕ್ರಮ ಮನೆಗಳನ್ನು ಸಕ್ರಮ ಮಾಡಿ ಹಕ್ಕುಪತ್ರ ನೀಡುಬೇಕು 2020-21ನೇ ಸಾಲಿನ ಆಯವ್ಯಯದಲ್ಲಿ ವಿವಿಧ ನಿಗಮಗಳಿಗೆ ತಲಾ 2ಸಾವಿರ ಕೋಟಿ ರೂ.ಗಳನ್ನು ನೀಡುವಂತೆ ಒತ್ತಾಯಿಸಲಾಯಿತು.
ರಾಜ್ಯದಲ್ಲಿ ಬೋಗಸ್ ಜಾತಿ ಪ್ರಮಾಣ ಪತ್ರಗಳನ್ನು ನೀಡುವುದರ ಮೂಲಕ ಹಲವಾರು ಜನತೆ ಉದ್ಯೋಗವನ್ನು ಪಡೆದಿದ್ದಾರೆ. ಈ ಕೂಡಲೇ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ನೀಡಿ ಉದ್ಯೋಗವನ್ನು ಪಡೆದವರವನ್ನು ವಜಾ ಮಾಡಿ, ಈ ಕೃತ್ಯದಲ್ಲಿ ಭಾಗಿಯಾಗಿರುವ ತಹಶೀಲ್ದಾರ್ ರವರ ವಿರುದ್ದ ಕ್ರಮ ಜರುಗಿಸಬೇಕು, ಖಾಸಗಿ ಕ್ಷೇತ್ರದಲ್ಲಿಯೂ ಸಹಾ ಪ.ಜಾ-ಪ.ಪಂಗಡದರಿಗೂ ಮೀಸಲಾತಿಯನ್ನು ನೀಡುವ ಕಾಯ್ದೆಯನ್ನು ಜಾರಿ ಮಾಡಬೇಕು, 2020-21ನೇ ಸಾಲಿನ ಆಯವ್ಯಯದಲ್ಲಿ ಸರ್ಕಾರ ಜನಾಂಗದ ಅಭೀವೃದ್ದಿಗಾಗಿ ಶೇ.30ರಷ್ಟು ಹಣವನ್ನು ನಿಗಧಿ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಂಜುನಾರ್ಥ, ನೇಹ ಮಲ್ಲೇಶ್, ಭೀಮಪ್ಪ, ಡಿ.ಜಯಪ್ಪ ಸಾಗಲಹಟ್ಟಿ, ಚನ್ನಿಗರಾನಯ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ