ಕೆ.ಶಿಪ್ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹ

ಪಾವಗಡ

       ರಸ್ತೆ ಅಪಘಾತಗಳನ್ನು ತಡೆಯಲು ಸಂಬಂದಪಟ್ಟ ಕೆ.ಶಿಪ್, ನಿಂದ ಯಾವುದೇ ಸಂಚಾರಿ ನಿಯಮಗಳ ನಾಮ ಫಲಕ ಹಾಕಿಲ್ಲ ಎಂದು ದೂರಿ, ಪಾವಗಡದ ಹೆಲ್ಪ್ ಸೊಸೈಟಿಯಿಂದ ಪಟ್ಟಣದ ತಹಶೀಲ್ದಾರ್ ಕಛೇರಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶವನ್ನು ಹೊರಹಾಕಿದ ಘಟನೆ ಶುಕ್ರವಾರ ಜರುಗಿತು.

        ಮುತ್ತಿಗೆಯ ನೇತೃತ್ವ ವಹಿಸಿದ್ದ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂಶಶಿಕಿರಣ್ ಮಾತನಾಡಿ, ಪಾವಗಡ- ತುಮಕೂರು ಹಾಗೂ ಪಾವಗಡ- ಚಳ್ಳಕೆರೆ ಮತ್ತು ಬಳ್ಳಾರಿ ರಸ್ತೆಯ ಮಾರ್ಗದಲ್ಲಿ ಕೆ.ಶಿಪ್ ರಸ್ತೆ ಹಗಲೀಕರಣ ಕಾಂಗಾರಿ ಮುಗಿದಿದ್ದು, ಪಾವಗಡ ಟೌನ್ ಗೆ ಬರುವ ಪ್ರಧಾನ ರಸ್ತೆಯಲ್ಲಿ ಹಾಗೂ ಕಣೀವೇನಹಳ್ಳಿ ಗೇಟ್ ಸಮೀಪ ಇರುವ ಸಾಯಿ ವೃದ್ದಾಶ್ರಮದಿಂದ ಪಾವಗಡ ಪಟ್ಟಣದ ಸರ್ಕಲ್ ವರೆಗೂ ಅಪಘಾತಗಳು ನಡೆಯುತ್ತಿದ್ದು, ಕಳೆದೊಂದು ವಾರದಿಂದ ಈ ರಸ್ತೆಯ ಮಾರ್ಗದಲ್ಲಿ ಅಪಘಾತಗಳು ನಡೆದು ಮೂವರು ಯುವಕರನ್ನು ಬಲಿ ಪಡೆದಿದೆ, ಆದರೇ ಈ ಮಾರ್ಗದದಲ್ಲಿ ಯಾವುದೇ ಸ್ಪೀಡ್ ಬ್ರೇಕರ್ ಗಳು ಹಾಗೂ ರಸ್ತೆ ಬಳಿ ಚಿನ್ಹೆಗಳು ಮತ್ತು ರೇಡಿಯಂ ಸ್ಟಿಕ್ಕರ್ ಗಳನ್ನು ಹಾಕಿಲ್ಲ, ಇದರಿಂದ ಸಂಚಾರಿ ನಿಯಮಗಳ ನಾಮಫಲಕ ಹಾಕದೆ ಇರುವುದರಿಂದ ವಿಪರೀತವಾಗಿ ಅಪಘಾತಗಳು ನಡೆಯುತ್ತಿವೆ, ಅದ್ದರಿಂದ ಸಂಬಂದ ಪಟ್ಟ ಕೆ. ಶಿಫ್ ನವರ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಬೇಕೇಂದು ತಹಶೀಲ್ದಾರ್ ನ್ನು ಒತ್ತಾಯಿಸಿದರು. ತಹಶೀಲ್ದಾರ್ ಪಿ.ಎಸ್. ಕುಂಬಾರ ರವರಿಗೆ ಮನವಿ ಪತ್ರ ಸಲ್ಲಿಸಿದರು.

       ಮನವಿ ಸ್ವೀಕರಿಸಿ ಮಾತನಾಡಿದ ಕುಂಬಾರ, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಹೆಲ್ಪ್ ಸೊಸೈಟಿಯ ಪದಾಧಿಕಾರಿಗಳಾದ ವೀರಮ್ಮನಹಳ್ಳಿಲೋಕೇಶ್,ಅನಿಲ್‍ಕುಮಾರ್,ಗೌತಮ್,ಕಾರ್ತಿಕ್, ಜಗದೀಶ್,ವೀರೇಂದ್ರ, ನಾಗೇಂದ್ರ,ನವೀನ್ ಕುಮಾರ್,ಪವನ್, ರಾಕೇಶ್ ಮತ್ತು ಕಸಬಾ ಆರ್.ಐ. ಗೀರೀಶ್ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap