ಕುರಿಗಳ ಸಾವು ಪ್ರಕರಣ ಪರಿಹಾರಕ್ಕಾಗಿ ಪ್ರತಿಭಟನೆ

ಚಿತ್ರದುರ್ಗ

     ಚಿತ್ರದುರ್ಗ ತಾಲೂಕಿನ ಹುಣಸೇಕಟ್ಟೆ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಕಳೆದ ಒಂದು ತಿಂಗಳಿನಿಂದ ಐದು ನೂರಕ್ಕೂ ಹೆಚ್ಚು ಕುರಿಗಳು ಸತ್ತಿದ್ದು ಇಂದು ಜಿಲ್ಲಾಧಿಕಾರಿಗಳ ಕಚೇರಿಗೆ ಸತ್ತ ಕುರಿಗಳ ಸಮೇತ ಮಾಲಿಕರು ಜಿಲ್ಲಾಡಳಿತದ ಗಮನಕ್ಕೆ ತರಲಾಯಿತು.

     ಇತ್ತೀಚಿ ದಿನದಲ್ಲಿ ಹೊಸದಾಗಿ ನೀಲಿ ನಾಲಿಗೆ ರೋಗವೆಂದು ಗುರುತಿಸಲಾಗಿದ್ದು ಇದಕ್ಕೆ ಈವರೆಗೆ ಯಾವುದೆ ಲಸಿಕೆ ಇಲ್ಲ ಎಂದು ಡಿಸಿಯವರ ಗಮನಕ್ಕೆ ತರಲಾಯಿತು.ತಕ್ಷಣವೆ ಜಿಲ್ಲಾಧಿಕಾರಿ ಶ್ರೀಮತಿ. ವಿನೋತ್ ಪ್ರಿಯಾ ಅವರ ಸರ್ಕಾರದ ಗಮನಕ್ಕೆ ತಂದು , ಕುರಿಗಳ ಆರೋಗ್ಯ ಸುಧಾರಣೆಗೆ ಕ್ರಮ ಹಾಗೂ ಕೂನಬೇವು ಆಸ್ಪತ್ರೆಗೆ ವೈದ್ಯ ಅಧಿಕಾರಿಯನ್ನು ನೇಮಿಸುವ ಬಗ್ಗೆ ಕ್ರಮ ಮತ್ತು ಸತ್ತಿರುವ ಕುರಿಗಳಿಗೆ ಪರಿಹಾರ ದೊರಕಿಸಿಕೊಡುವ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ನುಲೇನೂರು ಶಂಕರಪ್ಪ, ತಾ.ಅಧ್ಯಕ್ಷ ಬಸ್ತಿಹಳ್ಳಿ ಸುರೇಶಬಾಬು, ಹಂಪಯ್ಯನಮಾಲಿಗೆ ಧನಂಜಯ್, ಕಾಂತರಾಜ್, ಚಂದ್ರಣ್ಣ ಮತ್ತು ಅನೇಕ ರೈತರು ಇದ್ದರು

 

Recent Articles

spot_img

Related Stories

Share via
Copy link