ಎಲ್‍ಕೆಜಿ-ಯುಕೆಜಿ ಶಾಲೆಗಳ ಕುರಿತಾದ ನಿರ್ಧಾರ ಮರು ಪರಿಶೀಲನೆಗೆ ಆಗ್ರಹಿಸಿ ಪ್ರತಿಭಟನೆ..!!

ಬೆಂಗಳೂರು

      ಪೂರ್ವ ಪ್ರಾಥಮಿಕ (ಎಲ್‍ಕೆಜಿ-ಯುಕೆಜಿ) ಶಾಲೆಗಳನ್ನು ಪ್ರಾರಂಭಿಸುವುದನ್ನು ರಾಜ್ಯಸರ್ಕಾರ ಪುನರ್ ಪರಿಶೀಲಿಸಿ ಅಗತ್ಯಕ್ರಮಕೈಗೊಳ್ಳುವಂತೆ ಆಗ್ರಹಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.

     ರಾಜ್ಯದ ವಿವಿಧೆಡೆಯಿಂದ ಬಂದ ನೂರಾರು ಮಂದಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಫ್ರೀಡಂಪಾರ್ಕನಲ್ಲಿ ಸೇರಿ ಎಲ್‍ಕೆಜಿ-ಯುಕೆಜಿಯನ್ನು ಪ್ರಾರಂಭಿಸುವ ಮುನ್ನ ರಾಜ್ಯಸರ್ಕಾರ ಪುನರ್ ಪರಿಶೀಲನೆ ನಡೆಸಿ ಅಗತ್ಯ ಮಾರ್ಪಾಡು ಮಾಡಬೇಕು ಎಂದು ಆಗ್ರಹಿಸಿ ವಿಧಾನಸೌಧ ಚಲೋ ನಡೆಸಲು ಮುಂದಾದರು.

      ಮಾರ್ಗಮಧ್ಯೆಯೇ ಪೆÇಲೀಸರು, ಕಾರ್ಯಕರ್ತರು, ಸಹಾಯಕರನ್ನು ತಡೆದರು. ಅಲ್ಲಿಯೇ ಸಮಾವೇಶಗೊಂಡ ಅವರು, ಹೊಸದಾಗಿ ಎಲ್‍ಕೆಜಿ-ಯುಕೆಜಿ ಶಾಲೆಗಳನ್ನು ಆರಂಭಿಸಿದರೆ, ಅಂಗನವಾಡಿಗಳು ಅಸ್ಥಿತ್ವಕಳೆದುಕೊಳ್ಳಲಿವೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

      ಅಂಗನವಾಡಿಗಳಲ್ಲೇ ಎಲ್‍ಕೆಜಿ-ಯುಕೆಜಿಗಳನ್ನು ತೆರೆದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3.30ರವರೆಗೆ ಶಾಲೆ ನಡೆಸಿ ಪ್ರತ್ಯೇಕ ಶಿಕ್ಷಕ-ಶಿಕ್ಷಕಿಯರನ್ನು ನಿಯೋಜಿಸಬೇಕೆಂದು ಆಗ್ರಹಿಸಿದರು.ಅಂಗನವಾಡಿ ನೌಕರರಲ್ಲಿ 6 ವರ್ಷ ವಯಸ್ಸಿನ ಒಳಗಿನ ಮಕ್ಕಳನ್ನು ನಡೆಸಿಕೊಳ್ಳುವ ವಿಧಾನದಲ್ಲಿ ವಿಶೇಷ ತರಬೇತಿ ಹೊಂದಿದ್ದು, ಅದನ್ನು ಬಳಸಿಕೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link