ಜಗಳೂರು:
ಉದ್ಯೋಗ ಖಾತ್ರಿ ಕೂಲಿ ಹಣ ಪಾವತಿಗಾಗಿ ಒತ್ತಾಯಿಸಿ ತಾಲೂಕಿನ ಕ್ಯಾಸನಹಳ್ಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಚಿಕ್ಕ ಉಜ್ಜಿನಿ ಗ್ರಾಮದ ಕೂಲಿಕಾರ್ಮಿಕರು ತಾಲೂಕು ಪಂಚಾಯ್ತಿಗೆ ಬೀಗ ಜಡಿದು ಅಧಿಕಾರಿಗಳ ವಿರುದ್ದ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.
ಕಳೆದ 3 ತಿಂಗಳ ಹಿಂದೆ ಗಡಿಮಾಕುಂಟೆ,ಚಿಕ್ಕ ಉಜ್ಜಿನಿ ಕೆರೆಗಳಲ್ಲಿ ಉದ್ಯೋಗ ಖಾತ್ರಿಯೋಜನೆಯಡಿ ಕೆರೆ ಊಳೆತ್ತುವ ಕಾಮಗಾರಿ ಕೈಗೊಳ್ಳಲಾಗಿತ್ತು.8ನೂರುಕ್ಕು ಅಧಿಕ ಕೂಲಿಕಾರ್ಮಿಕರು 14 ಮತ್ತು 16 ಮಾನವದಿನಗಳ ಕಾಲ 2 ಹಂತಗಳಲ್ಲಿ ಕೆಲಸ ಮಾಡಿದ್ದು ಇದರ ಕೂಲಿ ಹಣವನ್ನು ಸಂಬಂಧಿಸಿದ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಇದುವರೆಗೂ ನೀಡದೆ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಆಕ್ರೋಶ ವ್ಯಕ್ತ ಪಡಿಸಿದರು.
ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯನ್ನು ಬಡವರ ಪಾಲಿಗೆ ಆರ್ಥಿಕ ಸಂಕಷ್ಟ ಸುಧಾರಿಸಲು ಕಾಯ್ದೆಯನ್ನು ಜಾರಿಗೊಳಿಸಿದ್ದು ಇದರ ಸಮರ್ಪಕ ಬಳಕೆ ಹಾಗೂ ಕಾಮಗಾರಿಯ ಕೂಲಿ ಹಣ ಪಾವತಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೂಲಿಕಾರರ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿದೆ ಎಂದು ಪ್ರತಿಭಟನಾಕಾರರು ಮಾಧ್ಯಮದ ಮುಂದೆ ಅಳಲನ್ನು ತೋಡಿಕೊಂಡರು.ಕೂಲಿ ಹಣ ನೀಡುವವರೆಗೂ ಇಲ್ಲಿಂದ ಮನೆಗೆ ವಾಪಾಸ್ಸು ತೆರಳುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತುಕೊಂಡರು.
ಈಗಾಗಲೇ ಕೂಲಿಕಾರರ ಜಾಬ್‍ಕಾರ್ಡ ಅನ್ವಯ ಎನ್ ಎಮ್ ಆರ್ ಮತ್ತು ಎಮ್‍ವೈ ಎಸ್ ರೆಕಾರ್ಡಮಾಡಿದ್ದು, ಇನ್ನು ಒಂದು ವಾರದಲ್ಲಿ ತಮ್ಮ ಖಾತೆಗೆ ಕೂಲಿಹಣ ಪಾವತಿಸಲಾಗುವುದು ಗ್ರಾ.ಪಂ.ಪಿಡಿಓ ಮೂಗಣ್ಣ ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಕೂಲಿಕಾರ್ಮಿಕರಾದ ನಾಗರಾಜ್ ಸುರೇಶ ಅಶೋಕ ಮಹಾಂತೇಶ ಅಜ್ಜಯ್ಯ ಭಾಗ್ಯಮ್ಮ ರತ್ನಮ್ಮ ಮಂಜುಳಾ ಸೇರಿದಂತೆ 50 ಕ್ಕೂ ಹೆಚ್ಚು ಕೂಲಿಕಾರರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.