ಅಮಾನತ್ತು ಹಿಂಪಡೆಯುವಂತೆ ಆಗ್ರಹಿಸಿ ಬೆಸ್ಕಾಂ ಕಛೇರಿ ಮುಂದೆ ಧರಣಿ

ತಿಪಟೂರು
     
        ನೊಣವಿನಕೆರೆ ಶಾಖೆಯಲ್ಲಿ ಯಂತ್ರಕರ್ಮಿ ದರ್ಜೆ-1ಯಾಗಿ ಕಾರ್ಯನಿರ್ವಹಿಸುತ್ತಿರುವ ವಿ.ಚಂದ್ರಯ್ಯನನ್ನು ಅಮಾನತ್ತು ಗೊಳಿಸಿರುವುದರ ವಿರುದ್ದು ನಗರದ ಕೆ.ಪಿ.ಟಿ.ಸಿ.ಎಲ್ ವಿಭಾಗಿಯ ಕಛೇರಿಯ ಮುಂದೆ ಕೆ.ಪಿ.ಟಿ.ಸಿ.ಎಲ್ ನೌಕರರು ಅಮಾನತ್ತು ರದ್ದುಗೊಳಿಸುವವರೆಗೆ ಅನಿರ್ಧಿಷ್ಠಾವಧಿ ಮುಷ್ಕರ ನಡೆಸುತ್ತಿರುದ್ದಾರೆ.
         ದಿನಾಂಕ 28-04-2019ರಂದು ನೊಣವಿನಕೆರೆ ಶಾಖೆಯಲ್ಲಿ ಆಲ್ಬೂರು ಗ್ರಾಮದ ಕೃಷ್ಣೇಗೌಡ ಎಂಬುವವರು ದುರಾದೃಷ್ಠವಶಾತ್ ವಿದ್ಯುತ್ ಅಫಘಾತದಲ್ಲಿ ಮೃತಪಟ್ಟಿರುವ ಕಾರಣಕ್ಕೆ ವಿ.ಚಂದ್ರಯ್ಯನ ಬೇಜವಾಬ್ದಾರಿಯೇ ಕಾರಣವೆಂದು ಆದೇಶ ಮಾಡಿ ಇಲಾಖಾ ವಿಚಾರಣೆ ಮುಗಿಯುವವೆರೆಗೆ ಸದರಿ ನೌಕರನನ್ನು ಅಮಾನತ್ತುಮಾಡಲಾಗಿದೆ ಎಂದು ಆದೇಶಮಾಡಿರುವುದನ್ನು ವಿರೋಧಿಸಿ ಇಂದು ಕೆ.ಪಿ.ಟಿ.ಸಿ.ಎಲ್ ನೌಕಕರು ಧರಣಿ ನಡೆಸಿದರು.
       ಈ ಸಂದರ್ಭದಲ್ಲಿ ಎ.ಇ ಚಂದ್ರಶೇಖರ್ ನಮ್ಮ ನೌಕರರು ಯಾವುದೇ ವೇಳೆಯಲ್ಲಿ ಅಂದರೆ 24/7 ಕೆಲಸನಿರ್ವಹಿಸುತ್ತಿದ್ದು ಅತೀಯದ ಕಾರ್ಯಭಾರದಿಂದ ಹಗಲು ರಾತ್ರಿ, ಮಳೆ, ಬಿಸಿಲನ್ನು ಲೆಕ್ಕಿಸದೇ ಕೆಲಸವನ್ನು ನಿರ್ವಹಿಸುತ್ತಿದ್ದು ಅತಿಯಾದ ಕಾರ್ಯದ ಒತ್ತಡದಿಂದ ಬಳುತ್ತಿದ್ದು ಇವರಮೇಲಿ ಅಮಾನತ್ತನ್ನು ತೆರವುಗೊಳಿಸಲು ಮೇಲಧಿಕಾರಿಗಳ ಜೊತೆ ಚರ್ಚಿಸುವುದಾಗಿ ತಿಳಿಸಿದರು.
     ಲೈನ್‍ಮೆನ್ ಭಾನುಪ್ರಕಾಶ್ ಮಾತನಾಡಿದ ನಮ್ಮ ಶ್ರಮವನ್ನು ಪರಿಗಣಿಸಿದ ಮೇಲಾಧಿಕಾರಿಗಳು ನಿರ್ದೇಶಕರು ಹೇಳಿದ್ದಾರೆ ಯಾರನ್ನಾದರು ಈ ಘಟನೆಗೆ ಹೊಣೆಮಾಡಬೇಕೆಂದು ಚಂದ್ರಯ್ಯನನ್ನು ಅಮಾನತ್ತುಮಾಡಿರುವುದು ಯಾವನ್ಯಾಯ ಎಂದು ಪ್ರಶ್ನಿಸಿದ್ದು ನಾವುಗಳಿ ಶಿಥಿಲವಾದ ಕಂಬಗಳನ್ನು ಹತ್ತುತ್ತೇವೆ ನಮ್ಮ ಜೀವನಕ್ಕೆ ಯಾವುದೇ ಸುರಕ್ಷತೆಯನ್ನು ಲೆಕ್ಕಿಸದೆ ಗಾಹ್ರಕರ ಸೇವೆಯನ್ನು ನಾವು ಮಾಡುತ್ತೇವೆ ನಮಗೆ ಇಂತಹ ಅನ್ಯಾಯವಾಗಿರುವುದು ಖಂಡನೀಯ ಮತ್ತು ಚಂದ್ರಯ್ಯನ ಅಮಾನತ್ತನ್ನು ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿದರು.
       ಆಲ್ಬೂರು ಗ್ರಾಮಸ್ಥರಾದ ಎ.ಹೆಚ್.ಮಹಲಿಂಗಯ್ಯ ಮಾತನಾಡಿ ಈ ನೌಕರನು ಹಲವಾರು ವರ್ಷಗಳಿಂದ ಸೂಕ್ತವಾಗಿ ಕೆಲಸನಿರ್ವಹಿಸುತ್ತಿದ್ದು ಯಾವುದೇ ಆಪಾದನೆಗಳೂ ಸಹ ಇವರಮೇಲಿಲ್ಲ ಮೊನ್ನೆ ನಡೆದ ಘಟನೆಯೂ ಸಹ ನಮ್ಮ ಜಮೀನನಹತ್ತಿರ ಮತ್ತ ಮನೆಯ ಹತ್ತಿರವೇ ಇದೆ ವಿದ್ಯುತ್ ತಂತಿ ಹರಿದ ತಕ್ಷಣವೇ ಸ್ಥಳಕ್ಕಾಗಮಿಸಿದ್ದಾರೆ ಮತ್ತು ಇವರಮೇಲೆ ಮೃತರಕುಟುಂಬ ದವರು ಸಹ ಪೋಲೀಸ್ ಠಾಣೆಗಾಗಲಿ ಅಥವಾ ಇಲಾಖೆಗಾಗಿ ಯಾವುದೇ ದೂರನ್ನು ನಿಡದೇ ಇದ್ದರೂ ಸಹ ಇವರನ್ನು ಈ ಅಮಾನತ್ತು ಮಾಡಿರುವುದು ಅನ್ಯಾಯವೆಂದರು.
   
       ಅಮಾನತ್ತು ಗೊಂಡಿರುವ ಕೆ.ಪಿ.ಟಿ.ಸಿ.ಎಲ್ ನೌಕರ ವಿ.ಚಂದ್ರಯ್ಯ ಮಾತನಾಡುತ್ತಾ ವಿಷಯ ತಿಳಿದ ತಕ್ಷಣ ನಾನು ಸ್ಥಳಕ್ಕೆ ಹೋಗಿ ಶಾಖೆಗೆ ಕರೆಮಾಡಿ 2 ಲೈನ್‍ಗಳಲ್ಲಿ ವಿದ್ಯುತ್ ನಿಲ್ಲಿಸಿ ವೈರ್‍ಅನ್ನು ಎಳೆಯಲು ಹೋದಾಗ ಅದು ತಡೆದಿದ್ದರಿಂದ ಬಿಗಿಯಾಗಿರುವುದಕ್ಕಾಗಿ ನೋಡಿದಾಗ ವೈರ್ ಕಾಲಿಗೆ ಸಿಲುಕಿಹಾಕೊಂಡು ಓರ್ವವ್ಯಕ್ತಿ ಮೃತನಾಗಿದ್ದನ್ನು ಕಂಡು ಸ್ಥಳಿಯರಿಗೆ ತಿಳಿಸಿದೆ ಇದರಲ್ಲಿ ನನ್ನ ತಪ್ಪೇನು ಇಲ್ಲ ಆದರೂ ಅಮಾನತ್ತು ಮಾಡಿದ್ದಾರೆಂದು ಅಳಲೊತ್ತುಕೊಂಡರು.
        ಕೆ.ಪಿ.ಟಿ.ಸಿ.ಎಲ್ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಲಿಂಗದೇವರು ಮಾತನಾಡಿ ವೈರ್ ತುಂಡಾಗಿ ಗ್ರಾಹಕರು ಮರಣಹೊಂದಿರುವುದಕ್ಕೆ ಅಮಾನತ್ತು ಮಾಡಿರುವುದು ಎಷ್ಟು ಸರಿ ತುಮಕೂರಿನ ಅಧಿಕಾರಿಗಳು ಹೇಳಿದರು ಸ್ಥಳೀಯ ಅಧಿಕಾರಿಗಳು ಇದರಲ್ಲಿ ನೌಕರನ ತಪ್ಪೇನು ಇಲ್ಲವೆಂದು ತಿಳಿಸಿದರೂ ನೌಕರರನ್ನು ದಿನಾಂಕ02-05-2019ರಂದು ಅಮಾನತ್ತುಗೊಳಿಸಿದ್ದಕ್ಕೂ ಅನೀರಿಕ್ಷಿತವಾಗಿ ಹೆಚ್ಚುವರಿ ಲೋಡ್‍ನಿಂದ ವೈರ್ ತುಂಡಾಗಿರುವುದಕ್ಕೆ ನೌಕರನನ್ನು ಕಾರಣಮಾಡಿರುವುದು ಎಲ್ಲಿಯ ಸಂಬಂಧ. ಸ್ಥಳಿಯರು ಸಹ ಯಾವುದೇ ದೂರು ನೀಡದಿರುವುದರಿಂದ ಇವರ ಮೇಲಿನ ಅಮಾನತ್ತನ್ನು ಹಿಂಪಡೆಯುವ ವರೆಗೂ ನಮ್ಮ ಧರಣಿ ನಡೆಯುತ್ತದೆಂದು ತಿಳಿಸಿದರು.
 
       ಪ್ರತಿಭಟನೆಯಲ್ಲಿ ಕೆ.ಪಿ.ಟಿ.ಸಿ.ಎಲ್ ನೌಕರರ ಸಂಘದ ಅಧ್ಯಕ್ಷ ತೇಜಮೂರ್ತಿ, ಉಪಾಧ್ಯಕ್ಷ ನರಸಿಂಹಮೂರ್ತಿ, ಕಾರ್ಯದರ್ಶಿ ಧರ್ಮರಾಜು, ಸಹ ಕಾರ್ಯದರ್ಶಿ ಎಂ.ಎನ್ ಸ್ವಾಮಿ ಹಾಗೂ ಸಂಘದ ಪಧಾಧಿಕಾರಿಗಳು ನೌಕರರುಗಳು ಮೇಲಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತ ಅಮಾನತ್ತನ್ನು ಹಿಂಪಡೆಯುವವರೆಗೂ ಧರಣಿಯನ್ನು ನಿಲ್ಲಿಸುವುದಿಲ್ಲವೆಂದು ತಿಳಿಸಿದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap