ಎಂಪಿಆರ್ ಮನೆ ಮುಂದೆ ಭೂಮಿಕಾ ಸ್ವ ಸಹಾಯ ಸಂಘದಿಂದ ಧರಣಿ

ಹೊನ್ನಾಳಿ:

        ತಾಲ್ಲೂಕಿನ ಕುಂದೂರು ಭೂಮಿಕಾ ಮಹಿಳಾ ಸ್ವ ಸಹಾಯ ಸಂಘಕ್ಕೆ ಕರ್ನಾಟಕ ಬೋವಿ ಅಭಿವೃದ್ದಿ ನಿಗಮದಿಂದ ಬಿಡುಗಡೆಯಾದ 2.50ಲಕ್ಷ ರೂಗಳ ಸಾಲವನ್ನು ಶಾಸಕ ಎಂ ಪಿ ರೇಣುಕಾಚಾರ್ಯರು ಗ್ರಾಮದ ಬೇರೆ ಹೆಸರಿನ ಸಂಘಕ್ಕೆ ಶಿಪಾರಸ್ಸು ಮಾಡಿ ಹಣ ಬಿಡುಗಡೆಗೊಳಿಸಿದ್ದಾರೆಂದು ಭೂಮಿಕಾ ಮಹಿಳಾ ಸ್ವ ಸಹಾಯ ಸಂಘದ ಅಧ್ಯಕ್ಷೆ ಲಲಿತಮ್ಮ ಆರೊಪಿಸಿರುವರು.

        ಹೊನ್ನಾಳಿ ಶಾಸಕ ರೇಣುಕಾಚಾರ್ಯರ ಮನೆ ಎದುರು ಸುಡು ಬಿಸಿಲಿನಲ್ಲಿ ಸಂಘದ ಇತರೆ ಸದಸ್ಯರೊಂದಿಗೆ ಈ ವಿಷಯವಾಗಿ ಇಂದು ಬೆಳಗ್ಗೆ ಧರಣಿ ನಡೆಸಿ ಅವರು ಮಾತನಾಡಿದರು

        2018 -19ನೇ ಸಾಲಿನ ಮೈಕ್ರೊ ಪೈನಾನ್ಸ ಕಿರು ಸಾಲ ಯೋಜನೆಯಡಿ ಸಣ್ಣ ವ್ಯಾಪರದ ದೃಷ್ಟಿಯಿಂದ ಸಂಘದ 10 ಜನ ಮಹಿಳಾ ಸ್ವ ಸಹಾಯ ಗುಂಪಿಗೆ ನೀಡುವ ಕಿರುಸಾಲ ಯೋಜನೆಯಡಿ ಪೆ.15ರಂದು ನಮ್ಮ ಸಂಘಕ್ಕೆ 2ಲಕ್ಷ 50 ಸಾವಿರ ರೂಗಳು ಬಿಡುಗಡೆಯಾಗಿದೆ ಎಂದು ಪ್ರತಿಭಟನೆನಿರತ ಮಹಿಳೆಯರು ತಮ್ಮ ಅಬಿಪ್ರಾಯ ಹಂಚಿಕೊಂಡರು.

       ಸಂಘದ ಅಧ್ಯಕ್ಷೆ ಲಲಿತಮ್ಮ ಮಾತನಾಡಿ ಶಾಸಕರ ಸ್ವಂತ ಊರಾದ ಕುಂದೂರು ಗ್ರಾಮದವರಾದ ನಾವು ಸಂಘದ ಸದಸ್ಯರಾದ ನಮಗೆ ಯೋಜನೆ ಹಣವನ್ನು ದೊರೆಯದಂತೆ ತಡೆದು ಇದೇ ಊರಿನ ಇನ್ನೊಂದು ಸಂಘವಾಗಿರುವ ಸ್ಪೂರ್ತಿ ಮಹಿಳಾ ಸ್ವ ಸಹಾಯ ಸಂಘಕ್ಕೆ ಈ ಹಣವನ್ನು ಶಾಸಕರು ತಮ್ಮ ಪ್ರಭಾವ ಬೀರಿ ಬಿಡುಗಡೆಗೊಳಿಸಿದ್ದಾರೆಂದು ಆರೊಪಿಸಿದರು.

        2018ರ ಅಕ್ಟೋಬರ 26ರಂದು ನೊಂದಣಿಗೊಂಡ ನಮ್ಮ ಸಂಘಕ್ಕೆ ಈ ಸಾಲಕ್ಕೆ ಹೆಚ್ಚಾಗಿರುವ ಕಾರಣ ಅನೇಕ ದಿನಗಳ ಓಡಾಟದೊಂದಿಗೆ ತಮ್ಮ ಸಮಯ ಹಾಗೂ ಹಣವನ್ನು ಖರ್ಚು ಮಾಡಿಕೊಂಡಿದ್ದೇವೆ. ಸಾಲದಲ್ಲಿ ಸಿಗುವ ಹಣದಿಂದ ಆಕಳು ಹಾಗೂ ಕೋಳಿ ಸಾಗಣಿಕೆ ಸೇರಿದಂತೆ ಅನೇಕ ಜೀವನೊಪಾಯ ವ್ಯವಹಾರ ನಡೆಸುವ ಯೋಜನೆ ಮಾಡಿಕೊಳ್ಳಲಾಗಿತ್ತು.

       ಪೆ.15ರಂದು ಸಂಘಕ್ಕೆ ಹಣ ಬಿಡುಗಡೆಯಾಗಿದ್ದು ನಮ್ಮ ಗಮನಕ್ಕೆ ತಡವಾಗಿ ತಿಳಿದಿದ್ದು ಸಾಲ ಯೋಜನೆ ಬದಲಾಯಿಸಿದ್ದರ ಬಗ್ಗೆ ಕೆಲ ದಿನಗಳ ಹಿಂದೆ ಶಾಸಕರನ್ನು ಬಂದು ಕೇಲಿದಾಗ ಒಂದೆರಡು ದಿನಗಳ ನಂತರ ಪರಿಶೀಲಿಸಿ ಸರಿಪಡಿಸುವ ಬಗ್ಗೆ ಭರವಸೆ ನೀಡಿದ್ದು ಅದರಂತೆ ಇಂದು ಬೆಳಗ್ಗೆ ಬಂದು 10 ಗಂಟೆಗೆ ಶಾಸಕರನ್ನು ಪ್ರಶ್ನಿಸಿದ್ದಾಗ ಈ ಭಾರಿ ಸಾದ್ಯವಾಗಿಲ್ಲ ಮುಂದಿನ ಬಾರಿ ಸಾಲ ಕೊಡಿಸುವ ಸಬೂಬು ಹೇಳಿ ಹೊರಹೋಗಿದ್ದು ಸಾಲ ಯೋಜನಾ ಕೈ ತಪ್ಪಿದ್ದರಿಂದ ಪ್ರತಿಭಟನೆಗೆ ಮುಂದಾಗಿದ್ದೇವೆಂದರು.

       ಸಾಲ ನೀಡುವ ಮೈಕ್ರೊ ಪೈನಾನ್ಸ ಹಾಗೂ ಜಿಲ್ಲಾ ಭೋವಿ ಅಭಿವೃದ್ದಿ ನಿಗಮವನ್ನ ಪ್ರಶ್ನಿಸಿದರೆ ಶಾಸಕರು ಶಿಪಾರಸ್ಸು ಇದ್ದು ನಾವು ಏನು ಮಾಡಲು ಬರದು ಎಂಬುದಾಗಿ ಉತ್ತರಿಸಿರುವರು.ಇಂದು ರಾತ್ರಿಯಾದರು ಹೋರಾಟ ನಡೆಸಲು ಸಿದ್ದ ಸಮಸ್ಯೆ ಬಗೆಹರೆಯದಿದ್ದರೆ ಗುರುವಾರ ಸಂಬಂಧಪಟ್ಟ ಜಿಲ್ಲಾ ಅಂಬೇಡ್ಕರ ಅಭಿವೃದ್ದಿ ನಿಗಮಕ್ಕೆ ಭೇಟಿ ನೀಡಿ ಆಗಿರುವ ಅನ್ಯಾಯವನ್ನು ಪ್ರಶ್ನಿಸಲಿದ್ದೇವೆಂದರು.
ಬಾಕ್ಸ:- ರೇಣುಕಾಚಾರ್ಯ ಸ್ವಂತ ಗ್ರಾಮದಲ್ಲೆ ಮಹಿಳಾ ಸಂಘಕ್ಕೆ ಸಿಗುವ ಸರ್ಕಾರದ ಸಹಾಯಧನ ಹಣ ಬೇರೆವರಿಗೆ ಕೊಟ್ಟಿರುವುದು ಯಾವ ನ್ಯಾಯ ಮಿಹಿಳಾ ಸಂಘದವರು ನೇರ ಆರೋಪ.ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ದುಗ್ಗಮ್ಮ, ಅಂಜೆಮ್ಮ, ಕಮಲ, ಸುನಿತ, ದ್ರಾಕ್ಷಾಯಣಮ್ಮ, ಕಮಲಮ್ಮ ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link