ನಗರದಲ್ಲಿ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ

ಚಿತ್ರದುರ್ಗ

     ನೊಂದಾಯಿತ ಕಟ್ಟಡ ಕಾರ್ಮಿಕರು ಅಪಘಾತದಲ್ಲಿ ಮರಣ ಹೊಂದಿದರೆ 10 ಲಕ್ಷ, ಸಹಜ ಸಾವನ್ನಪ್ಪಿದರೆ 5 ಲಕ್ಷ ಧನ ಸಹಾಯ ನೀಡಬೇಕೆಂದು ಆಗ್ರಹಿಸಿ ಇಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ಕಾರ್ಮಿಕ ಸಂಘಟನೆಗಳ ವತಿಯಿಂದ ನಗರದಲ್ಲಿ ಪ್ರತಿಭಟನೆ ಮಾಡಲಾಯಿತು.

     ಕಾರ್ಮಿಕಸ ಸಂಘಟನೆ ಕುಮಾರ್ ಮಾತನಾಡಿ, ರಾಜ್ಯದ ಕಾರ್ಮಿಕ ಮಂಡಳಿಯಲ್ಲಿ ಸಾವಿರಾರು ಕೋಟಿ. ರೂ. ಹಣ ಇದ್ದರೂ ಕೂಡ ಅದನ್ನು ಕಾರ್ಮಿಕ ಮತ್ತು ಅವರ ಕುಟುಂಬಕ್ಕೆ ಬಳಕೆ ಮಾಡಲು ಮೀನಾಮೇಷ ಏಣಿಸುತ್ತಿದ್ದೆ. ಮಂಡಳಿಯಲ್ಲಿರುವ ಹಣವನ್ನು ಸರ್ಕಾರ ಅಭಿವೃದ್ದಿಯ ನೆಪದಲ್ಲಿ ಬೇರೆ ಕಾಮಗಾರಿಗಳಿಗೆ ವರ್ಗಾವಣೆ ಮಾಡಿಕೊಳ್ಳು ಯತ್ನಿಸುತ್ತಿದೆ ಎಂದು ದೂರಿದರು.

     ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಹೋದಾಗ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ. ಆಸ್ಪತ್ರೆ ಸಿಬ್ಬಂದಿ ನಮ್ಮನ್ನು ನೋಡುವ ರೀತಿಯು ವಿಭಿನ್ನಾವಾಗಿರುತ್ತದೆ. ನಮ್ಮ ಪಾಲಿನ ಹಣವನ್ನು ನಮಗೆ ಕೊಡಿ ನಾವೇ ಚಿಕಿತ್ಸೆ ಪಡೆಯುತ್ತೇವೆ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

    ಕಲ್ಯಾಣ ಮಂಡಳಿಯಲ್ಲಿರುವ 8 ಸಾವಿರ ಕೋಟಿ ಹಣದಲ್ಲಿ ಇದುವರೆಗೂ ಶೇಕಡ 10% ಹಣ ಖರ್ಚು ಮಾಡಿಲ್ಲ. ಆಡಳಿತ ನಡೆಸುತ್ತಿರುವ ಸರ್ಕಾರಗಳು ನಿರ್ಲಕ್ಷ್ಯ ತೋರುತ್ತಿವೆ. ಮಕ್ಕಳ ವಿದ್ಯಾಭ್ಯಾಸ, ಮದುವೆ, ವೈದ್ಯಕೀಯ ಸೌಲಭ್ಯ, ಅಂತ್ಯ ಸಂಸ್ಕಾರದ ಹಣವನ್ನು ನೀಡುತ್ತಿಲ್ಲ. ನಮ್ಮ ಬಗ್ಗೆ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಸಹ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.

    60 ವರ್ಷ ತುಂಬಿದ ಕಟ್ಟಡ ಕಾರ್ಮಿಕರಿಗೆ ವೈಧ್ಯಕೀಯ ಧನ ಸಹಾಯವನ್ನು ಮೃತಪಡುವವರೆಗೂ ನೀಡಬೇಕು. ಮನ ನಿರ್ಮಾಣಕ್ಕೆ 5 ಲಕ್ಷ ನೀಡಬೇಕು, ಸರ್ವರ್ ಸಮಸ್ಯೆ ಸರಿಪಡಿಸಬೇಕು, ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕ ಇಲಾಖೆಯನ್ನು ಬೇರ್ಪಡಿಸಬೇಕು, ಸೇಸ್ ಬಾಕಿ ಉಳಿಸಿಕೊಂಡಿರುವ ಖಾಸಗಿ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ವಸೂಲಿ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ರಾಜ್ಯಧ್ಯಕ್ಷ ರಮೇಶ್, ಗೌಸ್ ಪೀರ್, ಈಶ್ವರಪ್ಪ, ಮಂಜುನಾಥ್, ಮುಜೀಬ್ ಉಲ್ಲಾ, ರಫೀಕ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link