ಜ.8,9ಕ್ಕೆ ಸಾರ್ವತ್ರಿಕ ಮುಷ್ಕರ;ಸಿ.ಕೆ.ಗೌಸ್‍ಪೀರ್

ಚಿತ್ರದುರ್ಗ:

        ಜನವಿರೋಧಿ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಜ.8 ಮತ್ತು 9 ರಂದು ಎರಡು ದಿನಗಳ ಕಾಲ ಸಾರ್ವತ್ರಿಕ ಮುಷ್ಕರ ನಡೆಸಲಾಗುವುದು ಎಂದು ಸಿ.ಐ.ಟಿ.ಯು.ಖಜಾಂಚಿ ಸಿ.ಕೆ.ಗೌಸ್‍ಪೀರ್ ತಿಳಿಸಿದರು.

        ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸಿ.ಐ.ಟಿ.ಯು.ಸೇರಿದಂತೆ ವಿವಿಧ ಒಂಬತ್ತು ಸಂಘಟನೆಗಳ ಸಹಯೋಗದೊಂದಿಗೆ ಎರಡು ದಿನಗಳ ಕಾಲ ಮುಷ್ಕರದಲ್ಲಿ ಬಿ.ಎಸ್.ಎನ್.ಎಲ್. ಬ್ಯಾಂಕ್‍ಗಳನ್ನು ಬಂದ್ ಮಾಡಿ ರೈಲು ತಡೆ ನಡೆಸಿ ಕೇಂದ್ರದ ಗಮನ ಸೆಳೆಯಲಾಗುವುದು. ಶಾಲಾ-ಕಾಲೇಜು, ಚಿತ್ರಮಂದಿರ, ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಸಮಸ್ತ ಸಾರ್ವಜನಿಕರು ಮುಷ್ಕರದಲ್ಲಿ ಭಾಗವಹಿಸುವಂತೆ ಸಿ.ಕೆ.ಗೌಸ್‍ಪೀರ್ ಮನವಿ ಮಾಡಿದರು.

          ಸಿ.ಐ.ಟಿ.ಯು.ಪ್ರಧಾನ ಕಾರ್ಯದರ್ಶಿ ಡಿ.ಎಂ.ಮಲಿಯಪ್ಪ ಮಾತನಾಡಿ ಅಗತ್ಯ ವಸ್ತುಗಳ ಬೆಲೆ ಏರಿಸಿರುವ ಕೇಂದ್ರ ಸರ್ಕಾರ ಜನಸಾಮಾನ್ಯರನ್ನು ತತ್ತರಿಸುವಂತೆ ಮಾಡಿದೆ. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗದ ಪರಿಣಾಮ ದೇಶದಲ್ಲಿ ಇದುವರೆವಿಗೂ 3.50 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದ್ಯಾವುದನ್ನು ಗಂಭೀರವಾಗಿ ತೆಗೆದುಕೊಳ್ಳದ ಕೇಂದ್ರ ಸರ್ಕಾರ ದೇಶವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದೆ.

         ಕಾಂಗ್ರೆಸ್ ಆರ್ಥಿಕ ನೀತಿ ಜಾರಿಗೆ ತಂದ ಪರಿಣಾಮ ದೇಶದ ಜನ ಇನ್ನು ಸಂಕಷ್ಟದಿಂದ ಹೊರಬರಲು ಆಗುತ್ತಿಲ್ಲ. ಕೇಂದ್ರದ ಆರ್ಥಿಕ ಧೋರಣೆ, ಕೋಮುವಾದಿತನವನ್ನು ವಿರೋಧಿಸಿ ಮುಂದಿನ ತಿಂಗಳು ಎರಡು ದಿನಗಳ ಕಾಲ ನಡೆಸಲಿರುವ ಸಾರ್ವತ್ರಿಕ ಮುಷ್ಕರದಲ್ಲಿ ಬ್ಯಾಂಕ್ ನೌಕರರು, ಬಿ.ಎಸ್.ಎನ್.ಎಲ್, ನೌಕರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕಾರ್ಮಿಕರು, ರೈತರು, ಮಹಿಳೆಯರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮುಷ್ಕರವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದರು.ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ಟಿ.ನಿಂಗಣ್ಣ, ಮೆಕ್ಯಾನಿಕ್ ಸಂಘದ ತಾಜುದ್ದಿನ್, ಅಕ್ಷರದಾಸೋಹ ನೌಕರರ ಸಂಘದ ಎನ್.ನಿಂಗಮ್ಮ, ಇಂದ್ರಮ್ಮ, ಶಶಿಕುಮಾರ್, ಬಿ.ಬೋರಮ್ಮ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link