ತುರುವೇಕೆರೆ:
ತಾಲೂಕಿನ ಮಾವಿನಕೆರೆ ದಲಿತ ಕಾಲೋನಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಸೋಮವಾರ ಮಾವಿನಕೆರೆಯಲ್ಲಿ ಪ್ರತಿಭಟನೆ ನೆಡೆಸಿದರು.
ಸ್ವಾತಂತ್ರ್ಯ ಬಂದು ಸುಮಾರು 75 ವರ್ಷಗಳಾಗಿದ್ದರು ಮಾವಿನಕೆರೆ ದಲಿತ ಕಾಲೋನಿಗೆ ಯಾವುದೇ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ತಾಲೂಕಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಿಪಲರಾಗಿದ್ದಾರೆ. ತಾಲೂಕಿನಲ್ಲಿ ಕೆಲವು ದಲಿತ ಕಾಲೋನಿಗಳು ಮೂಲ ಭೂತ ಸೌಕರ್ಯ ಪಡೆದು ಅಭಿವೃದ್ದಿ ಹೊಂದಿದರು ಮಾವಿನಕೆರೆ ದಲಿತ ಕಾಲೋನಿಯಲ್ಲಿ ಮಾತ್ರ ರಸ್ತೆ, ಚರಂಡಿ ಸೇರಿದಂತೆ ಯಾವುದೇ ಅಭಿವೃದ್ದಿ ಕೆಲಸ ಎಂಬುದು ಮರೀಚಿಕೆಯಾಗಿದೆ.
ಈ ಬಗ್ಗೆ ಹಲವು ಬಾರಿ ಸಂಬಂದ ಪಟ್ಟ ಅದಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಪತ್ರ ಬರೆದರು ಸಹಾ ಯಾವುದೇ ಪ್ರಯೋಜನವಾಗಿಲ್ಲ. ಅದ್ದರಿಂದ ಇಂದು ಗ್ರಾಮಸ್ಥರ ಜೊತೆ ಸೇರಿ ಉಪವಾಸದೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರ ಅಧ್ಯಕ್ಷ ಸಿದ್ದಲಿಂಗೇಗೌಡ ತಿಳಿಸಿದರು.
ಶಾಸಕರು ಮನವೊಲಿಕೆ ಉಪವಾಸ ಅಂತ್ಯ: ಸುದ್ದಿ ತಿಳಿದ ಕೂಡಲೇ ಶಾಸಕ ಮಸಾಲ ಜಯರಾಮ್ ಪ್ರತಿಭಟನಾ ಸ್ಥಳಕ್ಕೆ ಬೇಟಿ ನೀಡಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಿದ್ದಲಿಂಗೇಗೌಡರ ಜೊತೆ ಮಾತುಕತೆ ನೆಡೆಸಿದರು. ದಲಿತ ಕಾಲೋನಿ ಸುಮಾರು ವರ್ಷಗಳಿಂದ ಯಾವುದೇ ಅಭಿವೃದ್ದಿ ಇಲ್ಲದಂತಾಗಿದೆ ಎಂಬ ಮಾಹಿತಿ ಪಡೆದು ನನ್ನ ಅನುದಾನದಲ್ಲಿಯೇ 24 ಲಕ್ಷ ವೆಚ್ಚದಲ್ಲಿ ಮಾವಿನಕೆರೆ ಬಸ್ ಸ್ಟಾಂಡ್ ನಿಂದ ದಲಿತ ಕಾಲೂನಿವರೆಗೂ ಕಾಂಕ್ರೇಟ್ ರಸ್ತೆ ನಿರ್ಮಿಸಲು ಅನುದಾನ ನೀಡಲಾಗುವುದು ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 10 ಲಕ್ಷ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದ ತರುವಾಯ ಪ್ರತಿಭಟನಕಾರರು ಉಪವಾಸ ಹಾಗೂ ಪ್ರತಿಭಟನೆ ಹಿಂಪಡೆದರು. ತಹಶೀಲ್ದಾರ್ ನಯೀಂಉನ್ನಿಸಾ, ಇ.ಓ ಗಂಗಾಧರ್, ಸಮಾಜ ಕಲ್ಯಾಣಾಧಿಕಾರಿ ಶ್ಯಾಮ ಬೇಟಿ ನೀಡಿದ್ದರು.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಬೈರಪ್ಪ, ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ನಂಜೇಗೌಡ, ಮುಖಂಡರಾದ ಎಂ.ಜಿ.ಕೃಷ್ಣಪ್ಪ ಸೇರಿದಂತೆ ಗ್ರಾಮಸ್ಥರು ಇದ್ದರು.