ತುಮಕೂರು
ನಗರದ ಎಲ್ಲಾ ಕೊಳಚೆ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಬೇಕು ಎಂದು ಜಿಲ್ಲಾ ಕೊಳಗೇರಿ ಸಮಿತಿ ನಗರಪಾಲಿಕೆ ಆಯುಕ್ತರನ್ನು ಒತ್ತಾಯಿಸಿದೆ.
ಜಿಲ್ಲಾ ಕೊಳಗೇರಿ ಸಮಿತಿಯ ಕಾರ್ಯಕಾರಿ ಸದಸ್ಯರ ಸಭೆ ಸಮಿತಿಯ ಅಧ್ಯಕ್ಷರಾದ ಎ.ನರಸಿಂಹಮೂರ್ತಿರವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಕೊಳಗೇರಿಗಳ ಪ್ರಸ್ತುತ ಸಮಸ್ಯೆಗಳು, ಮುಂದಿನ ಹೋರಾಟದ ರೂಪುರೇಷಗಳ ಕುರಿತು ಚರ್ಚಿಸಲಾಯಿತ್ತು. ಈ ಸಭೆಯಲ್ಲಿಸ್ಮಾರ್ಟ್‍ಸಿಟಿ ಯೋಜನೆಯಾಡಿ ಮಾರಿಯಮ್ಮ ನಗರದಲ್ಲಿ ವಸತಿ ಸಂಕೀರ್ಣ ನಿರ್ಮಿಸಲು ಕಾರಣರಾದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿಗಳ ಕಾರ್ಯದರ್ಶಿಗಳಾದ ಕೆ.ಪಿ.ಮೋಹನ್‍ರಾಜ್, ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಮಾಜಿ ಶಾಸಕ ರಫೀಕ್ ಅಹಮ್ಮದ್ ಮತ್ತಿತರ ನೆರವಾದವರ ಕೊಡುಗೆಯನ್ನು ಸಭೆ ಸ್ಮರಿಸಿತು.
ಇತ್ತೀಚಿಗೆ ನಗರಪಾಲಿಕೆಯ ಆಯುಕ್ತರು ಶುದ್ದ ಕುಡಿಯುವ ನೀರಿನ ಘಟಕಗಳನ್ನು ಮಹಾನಗರ ಪಾಲಿಕೆಯ ಸುಪರ್ದಿಗೆ ಪಡೆದುಕೊಂಡು ನಿರ್ವಹಣೆಯನ್ನು ಪಾಲಿಕೆಯೇ ವಹಿಸಿಕೊಂಡಿರುವ ಸಂದರ್ಭದಲ್ಲಿ 35 ವಾರ್ಡ್‍ಗಳಲ್ಲಿ ಬರುವ ಕೊಳಚೆ ಪ್ರದೇಶಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಿ ನಗರ ಪಾಲಿಕೆಯಿಂದಲೇ ನಿರ್ವಹಿಸಲು ಆಯುಕ್ತರನ್ನು ಒತ್ತಾಯಿಸಲು ತಿರ್ಮಾನಿಸಲಾಯಿತ್ತು
ದಿಬ್ಬೂರಿನಲ್ಲಿ ರಾಜಿವ್ ಆವಾಸ್ ಯೋಜನೆಯಡಿಯಲ್ಲಿ ನಿರ್ಮಿಸಿ ಹಂಚಿಕೆ ಮಾಡಿರುವ 1200 ಮನೆಗಳಿಗೆ ಹಂಚಿಕೆ ಪತ್ರವನ್ನು ಶೀಘ್ರವಾಗಿ ವಿತರಿಸಿ ಜಿಲ್ಲಾಧಿಕಾರಿಗಳು ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಮುಂದಾಗಲು ಒತ್ತಾಯಿಸುವುದು ಸೇರಿದಂತೆ ಹಕ್ಕುಪತ್ರವಿಲ್ಲದ ಕೊಳಗೇರಿಗಳಿಗೆ ಶೀಘ್ರವಾಗಿ ಮಹಾನಗರ ಪಾಲಿಕೆ ಮತ್ತು ಆಶ್ರಯ ಸಮಿತಿಯಿಂದ ಹಕ್ಕುಪತ್ರ ವಿತರಿಸಬೇಕು, ಅಘೋಷಿತ ಕೊಳಚೆ ಪ್ರದೇಶಗಳಾದ ಎಸ್.ಎನ್.ಪಾಳ್ಯ, ಸಂಪಾದನೆ ಮಠ ಮತ್ತು ಭಾರತೀ ನಗರ-2 ಕೊಳಚೆ ಪ್ರದೇಶಗಳನ್ನು ಶೀಘ್ರವಾಗಿ ಘೋಷಿಸಬೇಕು, ಇಸ್ಮಾಯಿಲ್ ನಗರ ಹಂದಿಜೋಗಿ ಕೊಳಚೆ ಪ್ರದೇಶದಲ್ಲಿ ಕೆಲವೊಂದು ಕಿಡಿಗೇಡಿಗಳು ಅಮಾಯಕರ ಮೇಲೆ ಪೊಲೀಸ್ ಕೇಸು ದಾಖಲಿಸುತ್ತೀರುವುದರ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಲು ನಿರ್ಣಯಿಸಲಾಯಿತ್ತು ಈ ಸಭೆಯಲ್ಲಿ ಜಿಲ್ಲಾ ಕೊಳಗೇರಿ ಸಮಿತಿಯ ಪದಾಧಿಕಾರಿಗಳಾದ ದೀಪಿಕಾ, ಶೆಟ್ಟಾಳಯ್ಯ, ಕಣ್ಣನ್, ಕೃಷ್ಣ, ಜಾಬೀರ್, ಶಾರದಮ್ಮ, ಗಂಗಮ್ಮ, ರಂಗನಾಥ್, ಸರ್ವರ್, ಭೂಮಿಪಾಲನ್, ಎಂ.ಶಂಕರಪ್ಪ ನಾಗಮ್ಮ, ಮೊಹಮ್ಮದ್ ಹಯಾತ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
