ಬೆಂಗಳೂರು
ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಪಕ್ಷವು ತನ್ನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದು. ಅಮಿತ್ ಶಾ ಅಭ್ಯರ್ಥಿಗಳ ಆಯ್ಕೆಗೆ ಯಡಿಯೂರಪ್ಪ ಅವರಿಗೆ ಸಂಪೂರ್ಣ ಅಧಿಕಾರ ನೀಡಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆಯಂತೆ ಬಿ.ಎಸ್.ಯಡಿಯೂರಪ್ಪ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಜನವರಿ 10ರೊಳಗೆ ಪಟ್ಟಿಯನ್ನು ದೆಹಲಿಗೆ ಕಳುಹಿಸಿಕೊಡುವಂತೆ ಅಮಿತ್ ಶಾ ಸೂಚನೆ ನೀಡಿದ್ದಾರೆ.
ಅಮಿತ್ ಶಾ ಅವರ ಮಾರ್ಗದರ್ಶದಲ್ಲಿ ಯಡ್ಡಿಯೂರಪ್ಪ ಸಿದ್ಧಪಡಿಸಿರುವ ಪಟ್ಟಿಗೆ ಮನ್ನವೇ ಶಾ ಅವರು ತಮ್ಮ ಅಧ್ಯಯನ ತಂಡದ ಮೂಲಕ ರಾಜ್ಯದಲ್ಲಿ ರಹಸ್ಯ ಸಮೀಕ್ಷೆ ನಡೆಸಿದ್ದಾರೆ. ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್?, ಹಾಲಿ ಸಂಸದರ ಪರ ಅಲೆ ಹೇಗಿದೆ? ಎಂದು ಈ ತಂಡ ವರದಿ ಸಿದ್ಧಪಡಿಸಿದ್ದು, ಆ ವರದಿಯನ್ನು ಸದ್ಯ ಹೈಕಮಾಂಡ್ ನಾಯಕರಿಗೆ ನೀಡಿದೆ.
ಇಲ್ಲಿ ಗಮನಿಸಿದರೆ ಕೆಲವು ಕ್ಷೇತ್ರಗಳಿಗೆ ಇಬ್ಬರಿಗಿಂತ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಆ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅಧಿಕಾರವನ್ನು ಯಡಿಯೂರಪ್ಪ ಅವರು ಹೈಕಮಾಂಡ್ ನಾಯರಿಗೆ ನೀಡಿದ್ದಾರೆ. ಅನಂತ್ ಕುಮಾರ್ ಅವರ ನಿಧನದಿಂದ ತೆರವಾದ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ತೇಜಸ್ವಿನಿ ಅನಂತ್ ಕುಮಾರ್ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ. 28 ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಈ ರೀತಿಯಿದೆ.
ಲೋಕ ಫೈಟ್ ನ ಅಭ್ಯರ್ಥಿ ವಿವರ
* ಬೆಂಗಳೂರು ದಕ್ಷಿಣ – ತೇಜಸ್ವಿನಿ ಅನಂತ್ ಕುಮಾರ್
* ಬೆಂಗಳೂರು ಉತ್ತರ – ಡಿ.ವಿ.ಸದಾನಂದ ಗೌಡ
* ಬೆಂಗಳೂರು ಕೇಂದ್ರ – ಪಿ.ಸಿ.ಮೋಹನ್
* ಬೆಂಗಳೂರು ಗ್ರಾಮಾಂತರ – ಸಿ.ಪಿ.ಯೋಗೇಶ್ವರ, ತುಳಸಿ ಮುನಿರಾಜು ಗೌಡ
* ಚಿಕ್ಕಬಳ್ಳಾಪುರ – ಬಿ.ಎನ್.ಬಚ್ಚೇಗೌಡ, ಕಟ್ಟಾ ಸುಬ್ರಮಣ್ಯ ನಾಯ್ಡು
* ಕೋಲಾರ – ಡಿ.ಎಸ್.ವೀರಯ್ಯ, ಚಿ.ನಾ.ರಾಮು, ನಾರಾಯಣ ಸ್ವಾಮಿ
* ಮೈಸೂರು-ಕೊಡಗು – ಪ್ರತಾಪ್ ಸಿಂಹ
* ತುಮಕೂರು – ಜಿ.ಎಸ್.ಬಸವರಾಜು
* ಚಾಮರಾಜನಗರ – ಎಂ.ಶಿವಣ್ಣ, ವಿ.ಶ್ರೀನಿವಾಸ ಪ್ರಸಾದ್
* ಚಿತ್ರದುರ್ಗ – ಜನಾರ್ದನ ಸ್ವಾಮಿ
* ಶಿವಮೊಗ್ಗ – ಬಿ.ವೈ.ರಾಘವೇಂದ್ರ
* ದಾವಣಗೆರೆ – ಜಿ.ಎಂ.ಸಿದ್ದೇಶ್ವರ
* ಚಿಕ್ಕಮಗಳೂರು – ಉಡುಪಿ – ಶೋಭಾ ಕರಂದ್ಲಾಜೆ, ಜಯಪ್ರಕಾಶ್ ಹೆಗ್ಡೆ
* ದಕ್ಷಿಣ ಕನ್ನಡ – ನಳೀನ್ ಕುಮಾರ್ ಕಟೀಲ್
* ಉತ್ತರ ಕನ್ನಡ – ಅನಂತ್ ಕುಮಾರ್ ಹೆಗಡೆ
* ಚಿಕ್ಕೋಡಿ – ರಮೇಶ್ ಕತ್ತಿ
* ಬೆಳಗಾವಿ – ಸುರೇಶ್ ಅಂಗಡಿ
* ಧಾರವಾಡ – ಪ್ರಹ್ಲಾದ್ ಜೋಶಿ
* ಹಾವೇರಿ-ಗದಗ – ಶಿವಕುಮಾರ್ ಉದಾಸಿ
* ಕೊಪ್ಪಳ – ಸಂಗಣ್ಣ ಕರಡಿ
* ಬೀದರ್ – ಭಗವಂತ್ ಖೂಬಾ
* ಬಾಗಲಕೋಟೆ – ಪಿ.ಸಿ.ಗದ್ದಿಗೌಡರ್
* ವಿಜಯಪುರ – ರಮೇಶ್ ಜಿಗಜಿಣಗಿ
ಸಂಭಾವ್ಯರ ಪಟ್ಟಿ ಈ ರೀತಿಯಿದೆ ಎಂದು ಮೂಲಗಳೂ ತಿಳಿಸಿವೆ ಮತ್ತು ಪಟ್ಟಿಯಲ್ಲಿ ಹಾಲಿಗಳೆ ಹೆಚ್ಚಾಗಿರುವ ಈ ಪಟ್ಟಿಯಲ್ಲಿ ಸುಮಾರು ಬದಲಾವಣೆ ಆಗುವ ನಿರೀಕ್ಷೆ ಹೆಚ್ಚಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ