ವಿವಿಧ ಬೇಡಿಕೆಗಳಿಗಾಗಿ ಗುತ್ತಿಗೆ ನೌಕರರ ಧರಣಿ

ದಾವಣಗೆರೆ : ‘

         ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾ ಮಂಡಲದ ನೇತೃತ್ವದಲ್ಲಿ ದಿನಗೂಲಿ ನೌಕರರು ನಗರದಲ್ಲಿ ಮಂಗಳವಾರ ಪ್ರತಿಭಟನಾ ಧರಣಿ ನಡೆಸಿದರು.

         ಇಲ್ಲಿನ ಜಿಲ್ಲಾಡಳಿತ ಭವನದ ಎದುರು ಜಮಾಯಿಸಿದ ಪ್ರತಿಭಟನಾನಿರತ ದಿನಗೂಲಿ ನೌಕರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಘೋಷಣೆ ಕೂಗುವ ಮೂಲಕ ಜಿಲ್ಲಾಡಳಿತದ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

         ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಸರ್ಕಾರದ ವಿವಿಧ ಇಲಾಖೆಗಳು, ನಿಗಮ, ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮದ 2012ರ ಮೇರೆಗೆ ಅಧಿಸೂಚಿಸಲ್ಪಟ್ಟ ಅರ್ಹ ದಿನಗೂಲಿ ನೌಕರರು, ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆ, ನಿಗಮ, ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಹೊರ ಗುತ್ತಿಗೆ, ಒಳ ಗುತ್ತಿಗೆ ನೌಕರರು, ದಿನಗೂಲಿಯಿಂದ ಕಾಯಂಗೊಂಡ ನೌಕರರು ಎಂಬುದಾಗಿ ವಿಂಗಡಿಸಲಾಗಿದ್ದು, ಮೂರೂ ವರ್ಗಗಳ ನೌಕರರ ಸೇವೆಯನ್ನು ಕಾಯಂಗೊಳಿಸಬೇಕು.

        ದಿನಗೂಲಿಯಿಂದ ಕಾಯಂಗೊಂಡ, ನಿವೃತ್ತಿ ಹೊಂದಿದ ಅಧಿನಿಯಮ, 2012ರ ಅಡಿಯಲ್ಲಿ ಅರ್ಹ ದಿನಗೂಲಿ ನೌಕರರ ಹಾಗೂ ಎಲ್ಲಾ ಹೊರ-ಒಳ ಗುತ್ತಿಗೆ ನೌಕರರ, ವಿವಿಧ ಮಹಾನಗರ ಪಾಲಿಕೆ, ನಗರಸಭೆಗಳ ಟ್ಯಾಕ್ಸ್ ಕನ್ಸಲ್ಟೆಂಟ್ಸ್‍ಗಳ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.

         ಕರ್ನಟಕ ನಾಗರೀಕ ಸೇವಾ ನಿಯಮಗಳ 247ಎ ನಿಯಮದಲ್ಲಿ ಅಂತರ್ಗತವಾದ ಹೆಚ್ಚುವರಿ ಅರ್ಹತಾ ಸೇವೆಯಲ್ಲಿನ ತಾರತಮ್ಯ ನಿವಾರಿಸಬೇಕು. 2004ರ ನಂತರ ನಿವೃತ್ತರಾದವರಿಗೆ 4 ವರ್ಷ, 2012ರ ನಂತರ ನಿವೃತ್ತರಾದವರಿಗೆ 2 ವರ್ಷ ಗರಿಷ್ಟ ಹೆಚ್ಚುವರಿ ಅರ್ಹತಾ ಸೇವೆಯನ್ನು ನೀಡಬೇಕೆಂಬುದನ್ನು ತಿದ್ದುಪಡಿ ಮಾಡಿ, 1978ರಿಂದ 2004ರವರೆಗೆ ನಿವೃತ್ತಿಯಾದ ನೌಕರರಿಗೆ ಇರುವಂತೆ 8 ವರ್ಷಗಳ ಗರಿಷ್ಟ ಅರ್ಹತಾ ಸೇವೆಯನ್ನು, ನಂತರ ನಿವೃತ್ತರಾದ ಹಾಗೂ ಆಗುವ ಎಲ್ಲಾ ನೌಕರರಿಗೆ 8 ವರ್ಷಗಳ ಹೆಚ್ಚುವರಿ ಸೇವೆಯನ್ನು ವಿಸ್ತರಿಸಬೇಕೆಂದು ಒತ್ತಾಯಿಸಿದರು.

        ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮದ 2012ರ ಅಡಿಯಲ್ಲಿ ಅಧಿಸೂಚಿಸಲಾದ ಅರ್ಹ ದಿನಗೂಲಿ ನೌಕರರಿಗೆ ಆಗಿರುವ ಅನ್ಯಾಯಗಳನ್ನು ನಿವಾರಿಸಬೇಕು. ಕ್ಷೇಮಾಭಿವೃದ್ಧಿ ನೌಕರರಿಗೆ ರಾಜ್ಯ ಸರ್ಕಾರದ ಕಾಯಂ ನೌಕರರಿಗೆ ಜಾರಿಗೊಳಿಸಿದ 6ನೇ ವೇತನ ಆಯೋಗದ ಪರಿಷ್ಕøತ ವೇತನವನ್ನು 2018ರ ಏಪ್ರೀಲ್ 1ರಿಂದ ಜಾರಿಗೊಳಿಸಿದ್ದು, ಅರ್ಹ ದಿನಗೂಲಿ ನೌಕರರಿಗೂ ಅದೇ ದಿನದಿಂದ ಅನ್ವಯವಾಗುವಂತೆ 2018ರ ನವೆಂಬರ್ 15ರ ಆದೇಶಕ್ಕೆ ತಿದ್ದುಪಡಿ ತರಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿದರು.ಪ್ರತಿಭಟನಾ ಧರಣಿಯಲಲಿ ವಿವಿಧ ಇಲಾಖೆಗಳ ಗುತ್ತಿಗೆ ನೌಕರರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap