ದಾವಣಗೆರೆ
ಇತ್ತೀಚೆಗೆ ಹರಿಹರ ತಾಲ್ಲೂಕು ಕೆ ಬೇವಿನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಮಾನಸಿಕ ಆರೋಗ್ಯಕಾರ್ಯಕ್ರಮ ಸರ್ಕಾರ ಕಿರಿಯ ಪ್ರಾಥಮಿಕ ಪಾಠಶಾಲೆ ಬೇವಿನಹಳ್ಳಿ ಮತ್ತು ವಿ. ಅಸೋಸಿಯೇಷನ್ ವಿತ್ ಪೀಪಲ್ ಡಿಸಬಲಿಟಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ
ವಿಶ್ವ ಸ್ಕಿಜೋಫ್ರೆನಿಯಾ (ಚಿದ್ರಮನಸ್ಕತೆ) ದಿನಾಚರಣಿ ಅಂಗವಾಗಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಜಾಥಾ ಕಾರ್ಯಕ್ರಮವನ್ನು ಡಾ.ಸರೋಜಬಾಯಿ ಜೆ ಎಮ್ ಜಿಲ್ಲಾ ಮಾನಸಿಕ ಅರೋಗ್ಯ ಕಾರ್ಯಕ್ರಮಾಧಿಕಾರಿಗಳು ಹಸಿರು ನಿಶಾನೆ ತೋರಿಸುವುದರ ಮೂಲಕ ಉದ್ಧಾಟಿಸಿ ಮಾತನಾಡಿದ ಅವರು ಸಮುದಾಯದಲ್ಲಿ ಒತ್ತಡದ ಜೀವನದಿಂದ ಮಾನಸಿಕ ಖಾಯಿಲೆಗಳಿಗೆ ತುತ್ತಾಗುತ್ತಿರುವುದು ವಿಷಾದನೀಯ, ಮಾನಸಿಕ ಖಾಯಿಲೆಗೆ ಎದರದೆ ಮತ್ತು ಮೂಢನಂಬಿಕೆಗಳಿಗೆ ಒಳಗಾಗದೆ ಧೈರ್ಯದಿಂದ ಜೀವನವನ್ನು ನಡೆಸುವ ಕೌಶಲ್ಯಗಳನ್ನು ರೂಪಿಸಿಕೊಳ್ಳಬೇಕು ಹಾಗೂ ಮಾನಸಿಕ ಖಾಯಿಲೆಗೆ ಚಿಕಿತ್ಸೆ ಇದೆ ತಕ್ಷಣವೇ ಮನೋವೈದ್ಯರನ್ನು ಸಂಪರ್ಕಿಸಿ ಎಂದರು.
ಜಾಥಾ ಕಾರ್ಯಕ್ರಮ ಕುರಿತು ಉಪನ್ಯಾಸ ನೀಡಿದ ಸೈಕ್ಯಾಟ್ರಿಕ್ ಸೋಷಿಯಲ್ ವರ್ಕರ್ ಮಾತನಾಡಿ ಇತ್ತಿಚೆಗೆ ಸಮಾಜದಲ್ಲಿ ಮದ್ಯಪಾನ, ಮಾದಕ ದ್ರವ್ಯಗಳ ಬಳಕೆಯಿಂದ ಮತ್ತು ಮಾನಸಿಕ ಖಾಯಿಲೆಗಳಿಂದ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಹಲ್ಲೆ, ಸಮಾಜಕ್ಕೆ ಮಾರಕವಾಗುವಂತಹ ಕೆಲಸಗಳು ನಡೆಯುತ್ತವೆ.
ಇವೆಲ್ಲವೂ ಮಾನಸಿಕ ಖಾಯಿಲೆಗಳಿಂದಲೂ ಆಗುತ್ತಿದೆ. ಇದನ್ನೆಲ್ಲ ಮನಗಂಡು ವಿಶ್ವ ಆರೋಗ್ಯ ಸಂಸ್ಥೆಯೂ ವಿಶ್ವ ಸ್ಕಿಜೋಪ್ರೆನಿಯಾ ದಿನಾಚರಣೆ ಮೂಲಕ ದೇಶದಾದ್ಯಂತ ಜಾಗೃತಿ ಮೂಡಿಸುತ್ತಿದ್ದು, ಹಾಗೂ ಸ್ಕಿಜೋಪ್ರೆನಿಯಾ ಒಂದು ತೀವ್ರತರವಾದ ಮಾನಸಿಕ ಖಾಯಿಲೆ ಇದು 100ರಲ್ಲಿ ಒಬ್ಬರಿಗೆ ಬರಬಹುದಾಗಿದೆ. ಇದರ ಲಕ್ಷಣಗಳೆಂದರೆ, ಒಬ್ಬನೆ ಮಾತನಾಡುವುದು, ನಗುವುದು,ಯಾರಿಗೂ ಕೇಳಿಸದ ಮಾತು, ದೃಶ್ಯಗಳು ಕಾಣುವುದು, ಸಂಶಯ ಪಡುವುದು, ವಿಚಿತ್ರ ವರ್ತನೆ ಹಾಗೂ ಹಸಿವು ನಿದ್ರೆಯ ಬಗ್ಗೆ ನಿರ್ಲಕ್ಷ್ಯ, ಸಮಾಜದಿಂದ ದೂರವುಳಿಯುವಿಕೆ ಈ ರೀತಿಯಾದ ಲಕ್ಷಣಗಳಾಗಿವೆ.
ಮಾನಸಿಕ ಖಾಯಿಲೆಯೂ ಶಾಪವಲ್ಲ, ಈ ಖಾಯಿಲೆಯು ಮೆದುಳಿನಲ್ಲಾಗುವ ರಾಸಾಯನಿಕ ಬದಲಾವಣೆಗಳಿಂದ ಹಾಗೂ ಒತ್ತಡದ ಜೀವನದಿಂದ ಅನುವಂಶಿಯತೆಯಿಂದಲೂ ಬರಬಹುದಾಗಿದೆ. ಈ ಒಂದು ಖಾಯಿಲೆಗೆ ಔಷಧಿ ಚಿಕಿತ್ಸೆ, ಆಪ್ತಸಮಾಲೋಚನೆ, ಮತ್ತು ಸಾಮಾಜಿಕ ಬೆಂಬಲದಿಂದ ಮಾನಸಿಕ ಅಸ್ವಸ್ಥರನ್ನು ಮುಖ್ಯವಾಹಿನಿಗೆ ತರಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹರಿಹರ ತಾಲ್ಲೂಕು ಆರೋಗ್ಯಧಿಕಾರಿಗಳಾದ ಡಾ.ಚಂದ್ರ ಮೋಹನ್, ಕೆ.ಬೇವಿನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ||.ಪ್ರಶಾಂತ, ತಾಲ್ಲೂಕು ಆರೋಗ್ಯ ಸಹಾಯಕರಾದ ಹೊರಕೆರೆ ಅಂಜಿನಪ್ಪ, ಯಶೋಧ ಮತ್ತು ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಿಬ್ಬಂದಿಯಾದ ವಿಜಯಕುಮಾರ ಎಸ್. ಅಂಜಿನಪ್ಪ, ಎ.ಪಿ.ಡಿ. ಸಂಸ್ಥೆಯ ರಾಘವೇಂದ್ರ ಮತ್ತು ಆಶಾಕಾರ್ಯಕರ್ತೆಯರು ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
