ಆಟೋ ಸ್ಟಾಂಡ್ ಹಾಗೂ ಚಿತ್ರ ಮಂದಿರಗಳಿಗೆ ಪಿಎಸ್‍ಐ ದಿಡೀರ್ ಭೇಟಿ

ಹೊಸದುರ್ಗ:

     ಪಟ್ಟಣದಲ್ಲಿರುವ ಆಟೋ ಸ್ಟಾಂಡ್ ಮತ್ತು ಸಿನಿಮಾ ಚಿತ್ರಮಂದಿರಗಳಿಗೆ ಇಲ್ಲಿನ ಪಿಎಸ್‍ಐ ಶಿವನಂಜಶೆಟ್ಟಿಯವರು ದಿಡೀರ್ ಭೇಟಿ ನೀಡಿ ಆಟೋ ಮತ್ತು ಚಿತ್ರಮಂದಿಗಳ ವ್ಯವಸ್ಥೆಗಳನ್ನು ಪರಿಶೀಲಿಸಿ ಚಾಲಕರಿಗೆ ಹಾಗೂ ಚಿತ್ರಮಂದಿರದ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

       ಚಿತ್ರಮಂದಿರದೊಳಗೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡದಂತೆ, ಸೀಟುಗಳ ಮೇಲೆ ಕಾಲಿಡದಂತೆ, ಮತ್ತು ಹುಡುಗಿಯರನ್ನು ಮತ್ತು ಮಹಿಳೆಯರನ್ನು ಚುಡಾಯಿಸುವುದು ಕಂಡು ಬಂದಲ್ಲಿ ಅಂಥವರ ವಿರುದ್ದ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಚಿತ್ರಮಂದಿರದ ಮಾಲೀಕರಿಗೆಸೂಚಿಸಿದರು.

      ಗೂಡ್ಸ್ ಆಟೋ ಮತ್ತು ಟಾಟಾ ಏಸ್ ವಾಹನಗಳಲ್ಲಿ ಪ್ಯಾಸೆಂಜರ್‍ಗಳನ್ನು ತುಂಬಿಕೊಂಡು ಹೋಗುತ್ತಿರುವ ಮಾಹಿತಿ ಲಭ್ಯವಾಗಿದೆ. ಯಾರೂ ಕೂಡ ಪ್ಯಾಸೆಂಜರ್‍ನ್ನು ತುಂಬಿಕೊಂಡು ಹೋಗುವಂತಿಲ್ಲ. ಹೆಚ್ಚಾಗಿ ಟಾಟಾ ಏಸ್ ವಾಹನಗಳಿಂದ ಅಪಘಾತಗಳು ಆಗುತ್ತಿರುವುದನ್ನು ಕಾಣಬಹುದಾಗಿದೆ. ಯಾರಾದರೂ ಕಾನೂನು ಕ್ರಮಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ ಅಂಥವರ ವಿರುದ್ದ ಪ್ರಕರಣ ದಾಖಲಿಸಿ ದಂಡ ಕಟ್ಟಿಸಲಾಗುವುದು ಎಂದು ತಿಳುವಳಿಕೆ ನೀಡಿದರು.

      ನಂತರ ಪ್ಯಾಸೆಂಜರ್ ಆಟೋ ಸ್ಟಾಂಡ್ ಬಳಿ ಹೋಗಿ ಪ್ರತಿಯೊಬ್ಬರೂ ಡಿಎಲ್, ಇನ್ಸುರೆನ್ಸ್, ಆರ್.ಸಿ.ಎಫ್.ಸಿ ದಾಖಲೆಗಳನ್ನು ಚಾಲ್ತಿಯಲ್ಲಿಟ್ಟುಕೊಳ್ಳಲು ಸೂಚಿಸಿದರು. ನಿಗಧಿತ ಹೆಚ್ಚು ಜನರನ್ನು ತುಂಬಿಕೊಂಡು ಹೋಗದಂತೆ ಹಾಗೂ ಪ್ರತಿಯೊಬ್ಬರೂ ಸಮವಸ್ತ್ರವನ್ನು ಧರಿಸಿ ಆಟೋ ಚಾಲನೆ ಮಾಡುವಂತೆ ಹೇಳಿದರು.ಇದೇ ವೇಳೆ ಪೊಲೀಸ್ ಸಿಬ್ಬಂದಿ ಶ್ರೀನಿವಾಸ್, ತ್ಯಾಗರಾಜ್‍ನಾಯ್ಕ್, ರಾಮನಾಯ್ಕ್ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link