ಶಿರಾ:
ನಗರದಲ್ಲಿ ಈಗ ದೊಡ್ಡ ಕೆರೆಯ ಜಲ ಸಂಗ್ರಹಾಗಾರ ಸಂಪೂರ್ಣವಾಗಿ ಖಾಲಿಯಾಗಿದ್ದು ಕುಡಿಯುವ ನಿರಿಗೆ ಜನತೆ ಪರಿತಪಿಸುವ ವಾತಾವರಣ ನಿರ್ಮಾಣಗೊಂಡಿದೆ.
ಕೆರೆಯಲ್ಲಿನ ನೀರು ಖಾಲಿಯಾದೊಡನೆ 20 ದಿನಗಳಿಗೊಮ್ಮೆ ನಗರಸಭೆ ನೀರು ನೀಡುವ ಸರದಿ ಇಟ್ಟುಕೊಂಡಿದ್ದು ಸಹಜವಾಗಿಯೇ ಸಾರ್ವಜನಿಕರು ನೀರಿನ ಸಮಸ್ಯೆ ಎದುರಿಸುವಂತಾಗಿದೆ.
ಕಳೆದ ನಾಲ್ಕೈದು ದಿನಗಳಿಂದ ನಗರಸಭೆಯು ಸುಮಾರು 15ಕ್ಕೂ ಹೆಚ್ಚು ಟ್ಯಾಂಕರ್‍ಗಳಲ್ಲಿ ಕುಡಿಯುವ ನೀರನ್ನು ಉಚಿತವಾಗಿ ಸರಬರಾಜು ಮಾಡಲು ಮುಂದಾಗಿದ್ದು ವಿವಿಧ ವಾರ್ಡುಗಳ ಜನತೆ ಸರದಿಯ ಸಾಲಲ್ಲಿ ನಿಂತು ನೀರು ಪಡೆಯುವಂತಾಗಿದೆ.
ಈಗ 15 ಟ್ಯಾಂಕರ್‍ಗಳು ಮಾತ್ರಾ ನೀರನ್ನು ನೀಡುತ್ತಿದ್ದು ಶಿರಾ ಕೆರೆಗೆ ನೀರು ಹರಿಯುವತನಕವೂ ಮತ್ತಷ್ಟು ಟ್ಯಾಂಕರ್‍ಗಳಲ್ಲಿ ನೀರು ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ