ಯಾದವ ಸಮುದಾಯದ ವತಿಯಿಂದ ಬಿಜೆಪಿ ಪಕ್ಷದ ಪರ ಬೃಹತ್ ಪ್ರಚಾರ ಕಾರ್ಯಕ್ರಮ

ಮಧುಗಿರಿ :

       ಮಾಜಿ ಪ್ರಧಾನಿ ದೇವೆಗೌಡರ ಸ್ಪರ್ಧೆಯಿಂದಾಗಿ ತುಮಕೂರು ಲೋಕಸಭಾ ಕ್ಷೇತ್ರವು ದಿನದಿಂದ ದಿನಕ್ಕೆ ರಂಗೇರುತ್ತಿದ್ದರೆ ಮಧುಗಿರಿ ಪಟ್ಟಣದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮೈತ್ರಿಯನ್ನು ವಿರೋಧಿಸಿ ಕೆಲ ಜೆಡಿಎಸ್ ಪಕ್ಷದ ಕಾರ್ಯಕರ್ತರೆ ಬಹಿರಂಗವಾಗಿಯೇ ಜೆಡಿಎಸ್ ಪಕ್ಷದ ಬಾವುಟ ಹಿಡಿದು ಬಿಜೆಪಿ ಪಕ್ಷದ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ತೊಡಗಿರುವುದು ಕಂಡು ಬಂದಿದೆ.

       ಪಟ್ಟಣದಲ್ಲಿ ಭಾನುವಾರ ಯಾದವ ಸಮುದಾಯದವರು ಬಿಜೆಪಿ ಪಕ್ಷದ ಪರ ಬೃಹತ್ ಪ್ರಚಾರ ಕಾರ್ಯಕ್ರಮವನ್ನು ಪಟ್ಟಣದ ಮಧುಗಿರಿ ಮಾರಮ್ಮನ ದೇವಾಲಯ ದಿಂದ ಪುರಸಭೆಯ ವರೆವಿಗೂ ಹಮ್ಮಿಕೊಂಡಿದ್ದರು. ಅದೇ ದಿನ ಗೌರಿಬಿದನೂರು ರಸ್ತೆ ಹಾಗೂ ಹಿಂದೂಪುರ ರಸ್ತೆಯ ಅಕ್ಕ ಪಕ್ಕದ ವಾರ್ಡ್‍ಗಳಲ್ಲಿ ಕೆಲ ಜೆಡಿಎಸ್ ಕಾರ್ಯಕರ್ತರು ಮೈತ್ರಿ ವಿರೋಧಿಸಿ ಪಕ್ಷದ ಮುಖಂಡರು ಮಾಡಿಕೊಂಡಿರುವ ಮೈತ್ರಿ ನಮಗೆ ಬೇಕಾಗಿಲ್ಲ ಇಂತಹವರಿಂದ ಸಣ್ಣಪುಟ್ಟ ನಿಷ್ಟಾವಂತ ಕಾರ್ಯಕರ್ತರಿಗೆ ಬಹಳ ಮುಜಗರವಾಗುತ್ತಿದೆ.

         ಕೆಶಿಫ್ ರಸ್ತೆ ಹಾದೂ ಹೋಗಿದ್ದ ರಸ್ತೆಯ ವಿಚಾರವಾಗಿ ಅನ್ಯಾಯ ವಾಗಿದೆ ಶಾಸಕರು ಅನುಧಾನ ತರುವಲ್ಲಿ ವಿಫಲಾರಾಗಿದ್ದಾರೆ ರಸ್ತೆಯ ಬಗ್ಗೆ ಶಾಸಕರಲ್ಲಿ ವಿಚಾರಿಸಿದರೆ ನ್ಯಾಯಲಕ್ಕೆ ಹೋಗಿ ಎಂದು ಸಬೂಬು ಹೇಳುತ್ತಾ ಕಾಲಹರಣ ಮಾಡುತ್ತಿದ್ದು ಸ್ಥಳೀಯ ಶಾಸಕ ಎಂ.ವಿ.ವೀರಭದ್ರಯ್ಯ ನಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲಾ ಈ ಹಿಂದೆ ಚುನಾವಣಾ ಸಮಯದಲ್ಲಿ ಮಾತು ಕೊಟ್ಟಂತೆ ನಡೆದುಕೊಳ್ಳುತ್ತಿಲ್ಲಾ. ನಮಗೆ ನ್ಯಾಯ ದೊರಕಿಸಿ ಕೊಡುತ್ತಿಲ್ಲಾ.

         ಇಲ್ಲಿಯ ವರೆವಿಗೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೇವಲ ಕೆಲವರ ಜೊತೆ ಸೇರಿಕೊಂಡು ಚುನಾವಣಾ ಪ್ರಚಾರ ಮಾಡುತ್ತಿರುವುದನ್ನು ಗಮನಿಸಿದರೆ ಇವರಿಗೆ ಮೈತ್ರಿ ಅಭ್ಯರ್ಥಿಯ ಗೆಲವು ಬೇಡವಾದಂತಿದೆ ಆದ್ದರಿಂದ ಬಹಿರಂಗವಾಗಿಯೇ ವಕ್ಕಲಿಗ ಸಮೂದಾಯದ ಹೆಚ್ಚು ಮತಗಳಿರುವ ನಮ್ಮ ವಾರ್ಡಿನಲ್ಲಿಯೇ ನಾವುಗಳೇ ಜೆಡಿಎಸ್ ಬಾವುಟ ಹಿಡಿದು ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜು ಪರ ಮತ ಯಾಚಿಸುತ್ತಿದ್ದು ಅವರು ಜಯಶೀಲಾರಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದು ಕಾರ್ಯಕರ್ತರು ತಿಳಿಸಿದರು.ಗಣೇಶ್, ನಾಗರಾಜು, ಶಿವಾನಂದ, ಶ್ರೀನಿವಾಸ್, ಫಾತಿಮಾ, ನರಸಮ್ಮ, ಮುದ್ದಮ್ಮ, ಮಂಜುನಾಥ್ ಜಿ.ಎಸ್, ಸಣ್ಣಮ್ಮ ಸೇರಿದಂತೆ ಮತ್ತಿತರರು ಇದ್ದರು.

          ದಿ.ಎ.ಕೃಷ್ಣಪ್ಪನವರು ಇದೇ ಕ್ಷೇತ್ರಕ್ಕೆ ಲೋಕಸಭಾ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾವಣೆಯಲ್ಲಿ ಸೋಲುಕಂಡರು. ಈಗ ಅದೇ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿಗಳು ಚುನಾವಣಾ ಕಣದಲ್ಲಿದ್ದಾರೆ ಇವರು ಮಾಡಿಕೊಂಡಿರುವ ಮೈತ್ರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೆ ಬೇಡವಾಗಿದೆ ಎಂಬುದಕ್ಕೆ ನಮ್ಮ ತಾಲ್ಲೂಕು ನಿದರ್ಶನವಾಗಿದೆ. ಮತದಾರರು ಕಮಲವೊ ಆನೆಯೊ ತೆನೆಯೊ ಲೋಟವೊ ಇಲ್ಲಾ ನೋಟಾವೊ ಎಂಬ ಗೊಂದಲದಲ್ಲಿದ್ದು ಇದೆಲ್ಲದರ ಫಲಿತಾಂಶ ಉತ್ತರ ಮೇ.23ಕ್ಕೆ ತಿಳಿಯಲಿದೆ. ನಿಜಲಿಂಗಪ್ಪ ಕಾಂಗ್ರೆಸ್ ಮುಖಂಡ.

          ಕಾಂಗ್ರೆಸ್ ಪಕ್ಷದ ವಕ್ತಾರ ಮುರುಳೀಧರ ಹಾಲಪ್ಪ ಹಾಗೂ ರಾಜ್ಯ ಉಪಾಧ್ಯಕ್ಷ ಪ್ರೂ.ರಾಧಕೃಷ್ಣ ನಿನ್ನೆ ಪಟ್ಟಣದಲ್ಲಿ ಮೈತ್ರಿ ಪಕ್ಷದ ಹೆಸರಿನಲ್ಲಿ ಪತ್ರಿಕಾಗೋಷ್ಟಿ ನಡೆಸಿದ್ದು ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಮುಖಂಡರುಗಳನ್ನು ಆಹ್ವಾನಿಸಿಲ್ಲ. ಇದು ಕೇವಲ ಕಾಟಚಾರಕ್ಕೆ ಮಾಜಿ ಪ್ರಧಾನಿ ಹಾಗೂ ಡಿಸಿಎಂ ರವರ ಮನಗೆಲ್ಲಲು ನಡೆಸಿರುವ ಕುತಂತ್ರವಾಗಿದೆ. ಇಂತಹವರಿಂದಲೇ ಲೋಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳು ಬ್ಯಾಲೆಟ್ ಯಂತ್ರದಲ್ಲಿ ಕೈ ಚಿಹ್ನೆ ಇಲ್ಲದೆ ಪರದಾಡುವಂತಾಗಿದ್ದು ಮುಂದಿನ ದಿನಗಳಲ್ಲಿ ಯಾವ ಯಾವ ಪಕ್ಷದ ಬಾವುಟ ಹಿಡಿಯಬೇಕಾದ ದುರ್ಗತಿ ಬರತ್ತದೊ. ವಿ.ಆರ್.ಭಾಸ್ಕರ್ ಗ್ರಾಪಂ ಅಧ್ಯಕ್ಷ ಚಿಕ್ಕಮಾಲೂರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link