ಗಂಗಾ ಕಲ್ಯಾಣ ಯೋಜನೆ: ಅರ್ಹ ಫಲಾನುಭವಿಗಳಿಗೆ ಪಂಪ್ ಸೆಟ್ ವಿತರಣೆ

ಚಳ್ಳಕೆರೆ

     ಕ್ಷೇತ್ರದ ಹಿಂದುಳಿದ ವರ್ಗಗಳ ಆಯ್ಕೆಯಾದ ಫಲಾನುಭವಿಗಳಿಗೆ 10 ಲಕ್ಷ ವೆಚ್ಚದಲ್ಲಿ ಕೃಷಿ ಪಂಪ್‍ಸೆಟ್ ಮತ್ತು ಇತರೆ ಸಲಕರಣೆಗಳನ್ನು ನೀಡಲಾಗಿದ್ದು, ರೈತ ಸಮುದಾಯದ ಇದರ ಪೂರ್ಣ ಪ್ರಮಾಣದ ಉಪಯೋಗವನ್ನು ಪಡೆದುಕೊಳ್ಳಬೇಕು. ಸರ್ಕಾರ ನೀಡುವ ಸವಲತ್ತು ದುರ್ಬಳಕೆಯಾಗದಂತೆ ಎಚ್ಚರಿಕೆ ವಹಿಸಬೇಕೆಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.

     ಅವರು, ಶುಕ್ರವಾರ ಶಾಸಕರ ಭವನದ ಆವರಣದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡಲಾದ ಫಲಾನುಭವಿಗಳಿಗೆ ಪರಿಕರಗಳನ್ನು ವಿತರಿಸಿ ಮಾತನಾಡಿದರು. ಕಳೆದ ಹಲವಾರು ವರ್ಷಗಳಿಂದ ಈ ಸೌಲಭ್ಯವನ್ನು ಹಿಂದುಳಿದ ವರ್ಗಗಳ ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ವಿತರಣೆ ಮಾಡಲಾಗುತ್ತಿದೆ. ಪ್ರತಿವರ್ಷವೂ ಸಹ ಆಯ್ದ ರೈತ ಫಲಾನುಭವಿಗಳು ಸರ್ಕಾರದ ಈ ಸೌಲಭ್ಯವನ್ನು ಪಡೆಯುತ್ತಿದ್ದಾರೆ.

     ಹಿಂದುಳಿದ ವರ್ಗಗಳ ಇಲಾಖೆ ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆಯನ್ನು ಹೊಂದಿದ್ದಾರೆ. ನೈಜ್ಯ ಫಲಾನುಭವಿ ಆಯ್ಕೆ ಮಾಡಿದಲ್ಲಿ ಮಾತ್ರ ಸರ್ಕಾರದ ಈ ಯೋಜನೆ ಯಶಸ್ಸಿಯಾಗುವುದು. ಈಗಾಗಲೇ ಕ್ಷೇತ್ರದ ಹಲವಾರು ರೈತರಿಗೆ ವಿವಿಧ ಯೋಜನೆಗಳಲ್ಲಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

     ನಿರ್ಗಮನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಆಡಳಿತಾವಧಿಯಲ್ಲಿ ಅಂದಾಜು 48 ಕೋಟಿ ರೈತರ ಸಾಲ ಮನ್ನಾ ಮಾಡಿದ್ಧಾರೆ. ಈ ಯೋಜನೆಯಡಿ ಕ್ಷೇತ್ರದ ಹಲವಾರು ರೈತರು ಸಾಲ ಸೌಲಭ್ಯವನ್ನು ಪಡೆದುಕೊಂಡಿದ್ಧಾರೆ. ಬೆಳೆ ವಿಮೆ ಯೋಜನೆಯಡಿ ಸಹ ಕ್ಷೇತ್ರದ ರೈತರಿಗೆ ಸರ್ಕಾರದಿಂದ ನೆರವು ದೊರೆಯಲಿದೆ. ಒಟ್ಟಾರೆ ಕ್ಷೇತ್ರದ ರೈತರ ಹಿತವನ್ನು ಕಾಪಾಡುವಲ್ಲಿ ಯಶಸನ್ನು ಸಾಧಿಸಲಾಗಿದೆ ಎಂದರು.

     ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಘುನಾಥ ಮಾತನಾಡಿ, 2016-17, 2017-18ನೇ ಸಾಲಿನ ಫಲಾನುಭವಿಗಳ ಆಯ್ಕೆಯ ಪಟ್ಟಿ ಇದಾಗಿದೆ. 2016-17ರಲ್ಲಿ 300 ಅರ್ಜಿಗಳು ಸಲ್ಲಿಕೆಯಾಗಿದ್ದು, 22 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. 2017-18ರಲ್ಲಿ 250 ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲೂ ಸಹ 22 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಇಂದು ಆಯ್ದ 16 ಫಲಾನುಭವಿಗಳಿಗೆ ಸುಮಾರು 9 ಲಕ್ಷ ವೆಚ್ಚದಲ್ಲಿ ಈ ಉಪಕರಣಗಳನ್ನು ನೀಡಲಾಗಿದೆ.

      ಫಲಾನುಭವಿಗಳ ಪರವಾಗಿ ಮಾತನಾಡಿದ ರೈತ ತಿಪ್ಪೇಸ್ವಾಮಿ, ಇತ್ತೀಚಿನ ದಿನಗಳಲ್ಲಿ ಮಳೆ ಇಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ನಾನು ನನ್ನ ಅಲ್ಪ ಜಮೀನಲ್ಲೇ ಬೋರ್ ಹಾಕಿಸಿದ್ದು, ಸ್ವಲ್ಪ ಪ್ರಮಾಣದ ನೀರು ಇದೆ. ಆದರೆ, ಪಂಪ್ ಸೆಟ್ ಮತ್ತು ಇತರೆ ಸಲಕರಣೆಗಳನ್ನು ಕೊಳ್ಳಲು ಆರ್ಥಿಕ ತೊಂದರೆ ಇತ್ತು. ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರಲ್ಲಿ ವಿನಂತಿಸಿದಾಗ ಹಿಂದುಳಿದ ವರ್ಗಗಳ ಇಲಾಖೆಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿದರು. ನನ್ನನ್ನು ಇಲಾಖೆ ಆಯ್ಕೆ ಮಾಡಿ ಅಂದಾಜು 1.50 ಲಕ್ಷ ಮೌಲ್ಯದ ಪಂಪ್‍ಸೆಟ್ ಸಲಕರಣೆಗಳನ್ನು ನೀಡಿದ್ದು, ನನಗೆ ಇದರಿಂದ ಹೆಚ್ಚು ಅನುಕೂಲವಾಗುತ್ತದೆ. ಬೆಳೆ ಬೆಳೆಯಲು ಸಹ ಸಹಕಾರಿಯಾಗುತ್ತದೆ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap