ಹೊಸದುರ್ಗ:
ಕೈದಿಗಳಿಗೆ ಶಿಕ್ಷೆ ಕೊಡುವುದು ಕೇವಲ ನಮ್ಮ ಧರ್ಮವಲ್ಲ ಕೈದಿಗಳನ್ನು ಮನವೊಲಿಸಿ ಸಮಾಜದಲ್ಲಿ ಸಮಾಜ ಮುಖಿಯಾಗಿ ಕೆಲಸ ಮಾಡುವುದನ್ನು ಹೇಳಿಕೊಟ್ಟಿರುವ ತೃಪ್ತಿ ನನಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಸ್.ಬಿ.ವಸ್ತ್ರಮಠ್ ತಮ್ಮ ಅಭಿಪ್ರಾಯವನ್ನು ಅಂಚಿಕೊಂಡರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ ಬಿಳ್ಕೋಡಿಗೆ ಸಮಾರಂಭದಲ್ಲಿ ಮಾತನಾಡಿದರು.ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು ಒಂದು ವರ್ಷಕ್ಕೆ 470 ಕಾರ್ಯಕ್ರಮಗಳಲ್ಲಿ ಪಾಲ್ಗೋಂಡಿದ್ದೇನೆ. ಎಲ್ಲಿ ಹೋದರು ಹೊಸತನವನ್ನು ತರಬೇಕು ಎಂಬುದು ನನ್ನ ಧ್ಯೇಯ. ಅದರಲ್ಲಿಯೂ ಹೊಸದುರ್ಗಕ್ಕೆ 25ರಿಂದ 30 ಬಾರಿ ಬಂದು ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೋಂಡು ಸಮಾಜ ಸೇವೆಯ ಕಾರ್ಯಗಳನ್ನು ಮಾಡಿದ್ದೇನೆ.
ಜೈಲಿನಲ್ಲಿ ಖೈದಿಗಳಿಗೆ ಕೆಲಸವನ್ನು ಕೊಟ್ಟು ಅವರ ಖಾತೆಗೆ ಹಣ ಹೋಗುವಂತೆ ಮಾಡಿದ್ದೇನೆ.ಖೈದಿಗಳಿಗೆ ಬೆಳಿಗ್ಗೆ ಯೋಗ, ಟಿಫನ್, ತರಕಾರಿ ಬೆಳೆಯಲು ಕೆಲಸ ಹಾಗೂಜೈಲೊಳಗೆ ಗ್ರಂಥಾಲಯ ತೆರೆಸಿ ಪುಸ್ತಕಗಳನ್ನು ಓದುವ ಹಾಗೆ ಮಾಡಿದ್ದೇನೆ. ಈ ಸೇವೆ ಮಾಡುವುದರಿಮದ ನನಗೆ ಆತ್ಮ ತೃಪ್ತಿ ಸಿಗುತ್ತದೆ ಇಂತಾ ಕಾರ್ಯಗಳನ್ನು ಮಾಡಿದ್ದರಿಂದ 6 ರಾಜ್ಯಗಳಲ್ಲಿ ಚಿತ್ರದುರ್ಗ ಜಿಲ್ಲೆಗೆ “ಬೆಸ್ಟ್ ಜೈಲ್ ಟಾಪ್ ಇಂಡಿಯಾ” ಎಂಬ ಪ್ರಶಸ್ತಿಯನ್ನು ಲಭಿಸಿದೆ ಎಂದರು.
ಖೈದಿಗಳನ್ನು ತಿದ್ದಿ ತೀಡಿ ಮನವೊಲಿಸುವ ಪ್ರಯತ್ನವನ್ನು ಮಾಡುತ್ತೇನೆ. ಈ ರೀತಿ ಸೇವೆ ಮಾಡುತ್ತಿರುವಾಗ ನನ್ನಿಂದ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ಖೈದಿ ನನ್ನ ನೋಡಲು ಬಂದಾಗ ನನಗೆ ಖುಷಿಯನ್ನು ತಂದು ಕೊಟ್ಟಿತು. ಮೊಳಕಾಲ್ಮೂರಿನಲ್ಲಿ ಅಲೆಮಾರು ಜನಾಂಗದವರಿಗೆ 4 ಎಕರೆ ಜಮೀನು ಕೊಡಿಸಿ ಅವರ ಜೀವನಕ್ಕೆ ದಾರಿ ಮಾಡಿಕೊಟ್ಟಿರುವ ತೃಪ್ತಿ ನನಗಿದೆ. ಆದಷ್ಟು ಕೆಟ್ಟದ್ದನ್ನು ಮಾಡುವುದನ್ನು ಬಿಟ್ಟು ಒಳ್ಳೆಯದನ್ನು ಮಾಡುವ ಸದ್ಗುಣ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಏನೇ ಬಂದರು ಕುಗ್ಗದೇ ಎದುರಿಸುವ ಶಕ್ತಿಯನ್ನು ಹೊಂದಬೇಕು.
ಪತ್ರಿಕಾ ಮಾಧ್ಯಮಾದವರ ಜೊತೆ ಆತ್ಮೀಯತೆಯಿಂದ್ದೇನೆ. ನನ್ನಿಂದ ಸಮಾಜಕ್ಕೆ ಒಳ್ಳೆಯದಾಗಬೇಕಾದರೆ ನನಗೆ ತೊಂದರೆಯಾದರೂ ಕೆಲಸವನ್ನು ಮಾಡುತ್ತೇನೆ. ನಾನು ಅತ್ಯಂತ ಸರಳ ಜೀವಿ ಕೆಲವು ನಮ್ಮ ವಕೀಲರಿಗೆ ಸಹಾಯಗಳನ್ನು ಮಾಡಿಕೊಟ್ಟಿದ್ದೇನೆ. ನಾನು ನಿಮ್ಮೂರಿನ ಮಗ ಏನೇ ಕೆಲಸಗಳು ಇದ್ದರೆ ನನ್ನ ಬಳಿ ಬನ್ನಿ ಎಂದರು.
ಈ ವೇಳೆ ನ್ಯಾಯಾಧೀಶರಾದ ಬಿ.ಜಿ.ದಿನೇಶ್‍ರವರು ವಕೀಲರ ಸಂಘ ಹಾಗೂ ಶಿಕ್ಷಣ ಇಲಾಖೆಯವರು ಸನ್ಮಾನಿಸಿದರು. ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ ಹಾಗೂ ಶಿಕ್ಷಣ ಇಲಾಖೆಯ ಈಶ್ವರಪ್ಪ ಮಾತನಾಡಿದರು. ವಕೀಲರ ಸಂಘದ ಅದ್ಯಕ್ಷ ಎಸ್.ಎಸ್.ಕಲ್ಮಠ್, ಪ್ರಶಾಂತ್ ಕುಮಾರ್, ವಕೀಲರು ಹಾಜರಿದ್ದರು.