ಪಾವಗಡ
ಇಂದು ನಡೆಯುವ ಪುರಸಭಾ ಚುನಾವಣೆಗೆ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ಬಿ.ಎಸ್. ಕುಂಬಾರ ತಿಳಿಸಿದ್ದಾರೆ. ಒಟ್ಟು 23 ವಾರ್ಡ್‍ಗಳಿದ್ದು ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮತ್ತು ಸ್ವತಂತ್ರರು ಸೇರಿ 71 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 123 ಸಿಬ್ಬಂದಿಯನ್ನು ನೇಮಿಸಲಾಗಿದೆ.
ವಾರ್ಡಸಂಖ್ಯೆ 1, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ರೊಪ್ಪ. 2,ಸರ್ಕಾರಿ ಪದವಿ ಪೂರ್ವ ಕಾಲೇಜು. 3, ಕಸ್ತೂರ ಬಾ ಗಾಂಧಿ ಶಾಲೆ. 4, ಡಾ. ಅಂಬೇಡ್ಕರ್ ಭವನ. 5, ಸರ್ಕಾರಿ ಪ್ರೌಢÀಶಾಲೆ. 5,ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ ಗುರುಭವನ ಪಕ್ಕ. 6,ವೇಣುಗೋಪಾಲ ಬಾಲಕಿಯರ ಪ್ರೌಢಶಾಲೆ, 7, ಸರ್ಕಾರಿ ಹಿರಿಯ ಬಾಲಕಿಯರ ಪಾಠಶಾಲೆ. 8, ಡಾ. ಅಂಬೇಡ್ಕರ್ ಸಮುದಾಯಭವನ ಎ.ಕೆ.ಕಾಲನಿ. 9, ಬಿ.ಸಿ.ಎಂ.ಮೆಟ್ರಿಕ್ ಪೂರ್ವ ಬಾಲಕಿಯರ ವಸತಿನಿಲಯ. 10, ಸರ್ಕಾರಿ ಹಿರಿಯ ಬಾಲಕಿಯರ ಪಾಠಶಾಲೆ. 11, ಎಸ್‍ಎಂ ಬಿ ಆರ್ ಪ್ರೌಢಶಾಲೆ. 12, ಬಾಪೂಜಿ ಪ್ರೌಢಶಾಲೆ. 13, ಪುರಸಭೆ ಕಚೇರಿ. 14, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಶನಿಮಹಾತ್ಮ ದೇವಸ್ಥಾನ ಹಿಂಭಾಗ.
15, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ. 16, ಅಂಗನವಾಡಿ ಕೇಂದ್ರ ಕುಮಾರಸ್ವಾಮಿ ಬಡಾವಣೆ. 17,ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಬೋವಿ ಕಾಲನಿ. 18, ಬಾಪೂಜಿ ಹಿರಿಯ ಪ್ರಾಥಮಿಕ ಪಾಠಶಾಲೆ. 19, ಅಂಗನವಾಡಿ ಕೇಂದ್ರ ಗಂಗಮ್ಮನಗುಡಿ ಬೀದಿ. 20, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕನುಮಚೆರವು ಮತ್ತು ವಾರ್ಡ್ ಸಂಖ್ಯೆ 21, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಬೋವಿ ಕಾಲನಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
